ಚುನಾವಣಾ ಬಾಂಡ್ ರದ್ದತಿ : ’ಪ್ರತಿಯೊಬ್ಬರೂ ವಿಷಾದಿಸುತ್ತಾರೆ’ ಎಂದ ಪ್ರಧಾನಿ ಮೋದಿ

Hasiru Kranti
WhatsApp Group Join Now
Telegram Group Join Now

ನವದೆಹಲಿ: ಇದು ಚುನಾವಣಾ ಬಾಂಡ್‌ಗಳ ಯಶಸ್ಸಿನ ಕಥೆ ಎಂದು ಪರಿಗಣಿಸಬೇಕು. ಚುನಾವಣಾ ಬಾಂಡ್‌ಗಳು ಇದ್ದವು, ಆದ್ದರಿಂದ ಯಾವ ಕಂಪನಿ ನೀಡಿದೆ, ಹೇಗೆ ನೀಡಿದೆ, ಎಲ್ಲಿ ನೀಡಿದೆ ಎಂಬ ಮಾಹಿತಿಯನ್ನು ನೀವು ಪಡೆಯುತ್ತೀರಿ. ರದ್ದಾಗಿರುವ ಚುನಾವಣಾ ಬಾಂಡ್ ಯೋಜನೆಯು ಕಪ್ಪುಹಣದ ಹರಿವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಮತ್ತು ಪ್ರಾಮಾಣಿಕವಾಗಿ ಯೋಚಿಸಿದಾಗ ಮುಂದೊಂದು ದಿನ ಎಲ್ಲರಿಗೂ ವಿಷಾದ ಉಂಟಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಎಎನ್‌ಐ ಗೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಬಾಂಡಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಂಬಂಧಿತ ಮಸೂದೆಯನ್ನು ಅಂಗೀಕರಿಸಿದಾಗ ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು ಮತ್ತು ಈಗ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕೆಲವರು ಅದನ್ನು ಬೆಂಬಲಿಸಿದ್ದಾರೆ. ಆದರೆ ವಿಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ. ಆರೋಪಗಳನ್ನು ಮಾಡಿದ ಬಳಿಕ ಪಲಾಯನ ಮಾಡಲು ಬಯಸುತ್ತಿವೆ ಎಂದು ಮೋದಿ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್‌ಗಳ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ ಯಾವ ಕಂಪನಿ ನೀಡಿದೆ, ಹೇಗೆ ನೀಡಿದೆ, ಎಲ್ಲಿ ನೀಡಿದೆ ಎಂಬ ಮಾಹಿತಿ ತಿಳಿಯಲು ಸಾಧ್ಯವಾಘಿದೆ. ಈ ಪ್ರಕ್ರಿಯೆಯಲ್ಲಿ ನಡೆದಿರುವುದು ಒಳ್ಳೆಯದು ಅಥವಾ ಕೆಟ್ಟದ್ದೇ ಎಂಬುದು ಚರ್ಚೆಯ ವಿಷಯವಾಗಿದೆ. ನಾವು ಚರ್ಚಿಸಿದ ನಂತರ ಮತ್ತು ಸುಧಾರಿಸುವಲ್ಲಿ ಯಾವುದೇ ಕೊರತೆಯಿಲ್ಲ ಎಂದು ನಾನು ಎಂದಿಗೂ ಹೇಳುವುದಿಲ್ಲ, . ಈ ಯೋಜನೆಯನ್ನು ಸುಧಾರಿಸುವುದಕ್ಕೆ ಹಲವು ಅವಕಾಶಗಳಿವೆ ಎಂದ ಅವರು, ಆದರೆ ಇಂದು ನಾವು ದೇಶವನ್ನು ಸಂಪೂರ್ಣವಾಗಿ ಕಪ್ಪುಹಣದ ಕಡೆಗೆ ತಳ್ಳಿದ್ದೇವೆ ಎಂದು ಹೇಳಿದರು.
ಯೋಜನೆಯ ಮೂಲಕ ದೇಣಿಗೆ ನೀಡಿದ ೩,೦೦೦ ಕಂಪನಿಗಳ ಪೈಕಿ ೨೬ ಕಂಪನಿಗಳು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳಿಂದ ಕ್ರಮವನ್ನು ಎದುರಿಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಈ ೨೬ ಕಂಪನಿಗಳಲ್ಲಿ ೧೬ ಮಂದಿ ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡಿವೆ. “ಇವುಗಳಲ್ಲಿ (೧೬ ಕಂಪನಿಗಳು) ಶೇಕಡಾ ೩೭ ರಷ್ಟು ಮೊತ್ತವು ಬಿಜೆಪಿಗೆ ಮತ್ತು ಶೇಕಡಾ ೬೩ ರಷ್ಟು ಬಿಜೆಪಿಯನ್ನು ವಿರೋಧಿಸುವ ವಿರೋಧ ಪಕ್ಷಗಳಿಗೆ ಹೋಗಿವೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article