ಇಂಡಿ: ಇಂದು ಸಹಕಾರಿ ಸಂಘಗಳಿಗೆ ಸಾಲ ನೀಡಬೇಕಾದರೆ ಹಿಂಜರಿಯುವ ಕಾಲ ಹಿಗಿದ್ದರು ನಮ್ಮ ಮೇಲೆ ವಿಶ್ವಾಸ ವಿಟ್ಟು ಕೊಟ್ಯಾಂತರ ರೂಪಾಯಿ ಸಾಲ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚುತಿ ಬರದ ಹಾಗೆ ಕಾಲಮಿತಿಯೊಳಗಾಗಿ ಕಂತು ಮತ್ತು ಬಡ್ಡಿ ಕಟ್ಟಿದ್ದರಿಂದ ರಾಜ್ಯದಲ್ಲಿ ಒಂದನೇ ಸ್ಥಾನದಲ್ಲಿದ್ದೆವೆ ಎಂದು ವಿಧಾನಸಭೆಯ ಅಂದಾಜು ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಮತ್ತು ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯವಂತರಾಯಗೌಡ ಪಾಟೀಲ ಹೇಳಿದರು.
ಅವರು ಸೋಮವಾರರಂದು ತಾಲೂಕಿನ ಶ್ರೀ ಭೀಮಾಶಂಕರ್ ಸಾಹಕಾರಿ ಸಕ್ಕರೆ ಕಾರ್ಖಾನೆ ನಿ, ಮರಗೂರ ಇದರ ೨೦೨೨-೨೩ ನೇ ಸಾಲಿನ ೫ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಳೇದ ೨೦೨೨-೨೩ ಸಾಲೀನಲ್ಲಿ ಕೇವಲ ೧೩೮ ದಿನದಲ್ಲಿ ೫ ಲಕ್ಷ ಕಬ್ಬು ನುರಿಸಿ ೫.೨೫ ಲಕ್ಷ ಕ್ವಿಂಟಾಲ ಸಕ್ಕರೆ ಉತ್ಪಾದನೆ ಮಾಡಿದ್ದೆವೆ. ಇದಕ್ಕೆ ಸಹಕಾರ ನೀಡಿದ ರೈತರಿಗೆ ಯಾವುದೆ ತರ ಮೋಸ ವಂಚನೆ ಮಾಡುವುದಿಲ್ಲ. ಮಾರಾಟವಾದ ಸಕ್ಕರೆ ಕಬ್ಬು ಒಂದೆ ಕಾಟಾದ ಮೇಲೆ ಮಾಡಲಾಗುತ್ತೆವೆ. ಇನ್ನೂಳಿದ ಸಕ್ಕರೆ ಕಾರಖಾನೆಗಳಿಗಿಂತ ನಮ್ಮ ಕಾರ್ಖಾನೆ ಎಫ್ ಅರ್ ಪಿ ನಿಗದಿತ ದರಕಿಂತ ಹೆಚ್ಚಿನ ದರ ರೈತರಿಗೆ ಸಕಾಲಕ್ಕೆ ನೀಡಿದ್ದೆವೆ. ಈ ಕಾರಖಾನೆ ಸ್ವಂತ ಆಸ್ತಿ ಮಾಡಿಕೊಳ್ಳಲು ಹೋದಾಗ ಯಾರು ಚಕಾರವೆತ್ತಿರಲಿಲ್ಲ. ಆದರೆ ಇಂದು ಆ ಕಾಲ ಬದಲಾಗಿದ್ದು ೧೬೫೦೦ ಜನ ಶೇರುದಾರರೆ ಮೂಲ ಮಾಲಿಕರನ್ನಾಗಿ ಮಾಡಿದ್ದೆನೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದಿಂದ ೪೦ ಕೋಟಿ ರೂಪಾಯಿ ಹಣ ನೀಡಿದ್ದ ಅವರನ್ನು ಸ್ಮರಿಸಬೇಕಾಗುತ್ತದೆ ಎಂದ ಸಹಕಾರಿ ತತ್ವದ ತಳಹದಿ ಮೇಲೆ ಇಂದು ನಾವು ಆಡಳಿತ ನೀಡುತ್ತಿದ್ದೆ. ಸಲಹೇ ಸೂಚನೆ ನೀಡಿ ಮುಕ್ತವಾಗಿ ಚರ್ಚಿಸಲು ಎಲ್ಲರಿಗೂ ಅವಕಾಶ ಇದೆ ಎಂದರು.
ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯೂವಲ್ಲಿ ಉತ್ತರಪ್ರದೇಶ ಮೊದಲನೇ ಸ್ಥಾನ, ಮಹಾರಾಷ್ಟ ೨ನೇ ಸ್ಥಾನ, ಕರ್ನಾಟಕ ೩ ನೇ ಸ್ಥಾನದಲ್ಲಿದೆ. ಅದರೆ ಈ ಬಾರಿ ಸಮರ್ಪಕವಾಗಿ ಮಳೆ ಬಾರದೆ ಇರುವುದರಿಂದ ಬರಗಾಲದ ಛಾಯೆ ಆವರಿಸಿದೆ. ಪ್ರಸ್ತೂತ ಕಬ್ಬು ಬೆಳೆ ಪ್ರದೇಶ ಕಡಿಮೆಯಾಗಿದ್ದರಿಂದ ಮುಂಬರುವ ಹಂಗಾಮಿನಲ್ಲಿ ಕಬ್ಬು ನುರಿಸುವಿಕೆ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.
ಸಕ್ಕರೆ ಕಾರಖಾನೆಯ ಶ್ರೇಯೋಭಿವೃದ್ದಿಗೆ ಸಹಕರಿಸಿ ಅತಿ ಹೆಚ್ಚು ಕಬ್ಬು ಪೊರೈಸಿದ ಧರ್ಮರಾಯ ನಿಂಬರಗಿ, ಬಸವಂತ್ರಾಯ ಭೈರಗೊಂಡ, ಭೀರಪ್ಪ ಪೂಜಾರಿ, ತುಕಾರಾಮ ಸಂಕಪಾಲ ರೈತರಿಗೆ ಸನ್ಮಾನಿಸಿ ೧೦ ಗ್ರಾಮ ಚಿನ್ನದ ಉಂಗುರು ತೊಡಿಸಿ ಕಾರಖಾನೆ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.
ವೇದಿಕೆ ಮೇಲೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವಿಶ್ವನಾಥ್ ಬಿರಾದಾರ್ , ನಿರ್ದೇಶಕರಾದ ಎಮ್,ಆರ್,ಪಾಟೀಲ, ಬಿ,ಎಮ್,ಕೋರೆ, ಸಿದ್ದಣ್ಣ ಬಿರಾದಾರ, ಜಟ್ಟೆಪ್ಪ ರವಳಿ, ಸುಶಾಂತ ಪಾಟೀಲ ,ಅಶೋಕ್ ಗಜಾಕೋಶ್, ಅರ್ಜುನ್ ನಾಯಕೋಡಿ, ಲಲಿತಾ ನಡಗೇರಿ, ದಾನಮ್ಮ ಬಿರಾದಾರ, ಮಹಾದೇವ ನಾಗರೆ, ವ್ಯವಸ್ಥಾಪಕ ನಿರ್ದೇಶಕ ಎಸ್, ಕೆ, ಭಾಗ್ಯಶ್ರೀ ಇದ್ದರು.
ಸಿಬ್ಬಂದಿಗಳಾದ ಎಸ್, ಎಮ್, ದೇಸಾಯಿ, ಸಿ,ಇ,ಒ ರುದ್ರಮಠ, ಎನ್,ಎ,ಪಾಟೀಲ, ಪ್ರಕಾಶ್ ಕೋರೆ ಹಾಗೂ ಅಡಳಿತ ಮಂಡಳಿ, ಸಿಬ್ಬಂದಿ, ಇಂಡಿ ಮತ್ತು ಸಿಂದಗಿ ತಾಲೂಕಿನ ಸಾವಿರಾರು ರೈತರು ಪಾಲ್ಗೊಂಡಿದ್ದರು.