This is the title of the web page

ಅರಭಾವಿ ಬ್ಲಾಕ್ ಕಾಂಗ್ರೇಸ್ ಯುವ ಘಟಕದ ಪೂರ್ವಭಾವಿ ಸಭೆ

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯುವ ಕಾರ್ಯಕರ್ತರು ಕ್ರೀಯಾಶೀಲರಾಗಲು ಅರವಿಂದ ದಳವಾಯಿ ಕರೆ...

0 9

ಮೂಡಲಗಿ ಜು.29 : ಅರಭಾವಿ ಕ್ಷೇತ್ರದ ಆಶೋತ್ತರಗಳಿಗೆ ಸ್ಪಂದಿಸುವದು ನಮ್ಮ ಕರ್ತವ್ಯವಾಗಿದ್ದು, ಕ್ಷೇತ್ರದಲ್ಲಿಯ ರಸ್ತೆ ಗುಡಿ, ಗುಂಡಾರಗಳಿಗೆ ಯಾವುದೇ ಅಭಿವೃದ್ದಿಕಾರ್ಯಗಳಿಗೆ ವಿಧಾನ ಪರಿಷತ್ ನಿಧಿಯಿಂದ ಕೆಲಸ ಮಾಡುವುದಾಗಿ ಬೆಳಗಾವಿ ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಮೃಣಾಲ ಹೆಬ್ಬಾಳ್ಕರ ಹೇಳಿದರು.

ತಾಲೂಕಿನ ಗುರ್ಲಾಪೂರ ಗ್ರಾಮದ ಪ್ರವಾಸಿ ಮಂದಿರಲ್ಲಿ ಅರಭಾವಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಯುವ ಘಟಕದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಅಖಿಲ ಭಾರತ ಕಾಂಗ್ರೇಸ್ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಂಟಿ ಶೇಳಕೆ ಮಾತನಾಡಿ, ಕ್ಷೇತ್ರದಲ್ಲಿ ಕಾಂಗೇಸ್ ಪಕ್ಷವನ್ನು ಬಲಪಡಿಸಲು ಯುವಕರು ಮುಂದಾಗಬೇಕು. ಆಡಳಿತ ಬಿಜೆಪಿ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಅರಭಾವಿ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿ ಗುಂಡಿಗಳಿಂದ ತುಂಬಿದ್ದು ಅವುಗಳ ಕಾರ್ಯ ಆಗುವವರೆಗೂ ಸರಕಾರದ ವಿರುದ್ದ ಯುವ ಕಾರ್ಯಕರ್ತರು ಆಂದೋಲನ ಮಾಡಬೇಕು ಎಂದರು. ಮಹಾರಾಷ್ಟದ ಯುವ ಕಾಂಗ್ರೇಸ ಮುಖಂಡ ಶಂಭುರಾಜೇ ದೇಸಾಯಿ, ಬೆಳಗಾವಿ ಜಿಲ್ಲಾ ಯುವ ಕಾಂಗ್ರೇಸ ಅಧ್ಯಕ್ಷ ಕಾರ್ತಿಕ್ ಪಾಟೀಲ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅರಭಾವಿ ಕಾಂಗ್ರೇಸ್ ಪಕ್ಷದ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಬಿಜೆಪಿ ಸರಕಾರ ಬಂದಾಗಿನಿಂದ ಬೆಲೆ ಏರಿಕೆ ಗಗನಕ್ಕೆ ಎರುತ್ತಿದ್ದು, ನಿತ್ಯ ಬಳಕೆಯ ಹಾಲು ಮೊಸರು ಗಳಮೇಲೆ ಜಿಎಸ್‌ಟಿ ಹೆರಿ ಬಡಬಗ್ಗರ ಮೇಲು ಬೆಲೆ ದಬ್ಬಾಳಿಕೆಯಾಗಿದೆ. ಅರಬಾವಿಯಲ್ಲಿ ಬದಲಾಣೆಯಾಗಬೇಕಾದರೇ, ರಾಜ್ಯದಲ್ಲಿ ಬದಲಾಣೆಯಗಬೇಕಾದರೇ, 40% ಕಮಿಷನ್ ಸರಕಾರ ಬದಲಾಣೆಯಾಗಬೇಕಾದರೇ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯುವ ಕಾರ್ಯಕರ್ತರು ಕ್ರೀಯಾಶೀಲರಾಗಿ ಕಾರ್ಯರ್ನಿಹಿಸಬೇಕಾಗಿದೆ ಎಂದರು.

 

ಸಭೆಯಲ್ಲಿ ಕಾಂಗ್ರೇಸ್ ಯುವ ಘಟಕದ ವಿವಿಧ ಪದಾಧಿಕಾರಿಗಳಿಗೆ ಆದೇಶ ಪತ್ರ ನಿಡಲಾಯಿತು.ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ,  ಅರಬಾವಿ ಯುವ ಘಟಕದ ಅಧ್ಯಕ್ಷ ಇರ್ಷಾದ ಪೈಲವಾನ, ವಿಠಲ ಖಾನಟ್ಟಿ, ವೀರುಪಕ್ಷ ಮೂಗಳಖೋಡ, ಬಸಗೌಡ ಪಾಟೀಲ, ಚಂದ್ರು ನಾಯಿಂಗ್ಲಜ ಹಾಗೂ ಯುವ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

You might also like
Leave a comment