This is the title of the web page

ಮೂಡಲಗಿ ಪುರಸಭೆಯಿಂದ ಪ್ಲಾಸ್ಟಿಕ್ ನಿಷೇಧ ಜಾಥಾ

ಜುಲೈ 1ರಿಂದ ಪ್ಲಾಸ್ಟಿಕ್ ಬಳಕೆ, ಸಂಗ್ರಹಣೆ, ಸಾಗಣೆ, ಮಾರಾಟವನ್ನು ನಿಷೇಧಿಸಿರುವ ಬಗ್ಗೆ ಜಾಗೃತಿ...

0 109

ಮೂಡಲಗಿ ಜೂ.30 : ಮಾನ್ಯ ಸರ್ಕಾರದ ನಿರ್ದೇಶನದ ಮೇರೆಗೆ ದಿನಾಂಕ 01-07-2022 ರಿಂದ ಏಕಬಳಕೆಯ ಹಾಗೂ ಇತರೆ ಪ್ಲಾಸ್ಟಿಕ್ ಬಳಕೆ, ಸಂಗ್ರಹಣೆ, ಸಾಗಣೆ, ಮಾರಾಟವನ್ನು ನಿಷೇಧಿಸಿರುವುದನ್ನು ಈಗಾಗಲೇ ದಿನಪತ್ರಿಕೆಗಳಲ್ಲಿ ಹಾಗೂ ಮೈಕ ಅನೌನ್ಸಮೆಂಟ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲಗಳು, ಕಾಗದದ ಹಾಗೂ ಸೆಣಬಿನ ಚೀಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬಳಕೆಯು ಪರಿಸರದ ಮೇಲೆ ಅತೀವ ದುಷ್ಪರಿಣಾಮ ಬೀರುತ್ತಿದ್ದು ಮುಂದಿನ ಪೀಳಿಗೆಗೆ ಮಾರಕವಾಗುತ್ತದೆ ಎಂದು ಪುರಸಭೆಯ ಅಧ್ಯಕ್ಷರಾದ ಶ್ರೀ ಹಣಮಂತ. ಗುಡ್ಲಮನಿ ತಿಳಿಸಿದರು.


ಅವರು ಗುರುವಾರದಂದು ಪುರಸಭೆಯಿಂದ ಹಮ್ಮಿಕೊಂಡ ಪ್ಲಾಸ್ಟಿಕ್ ನಿಷೇಧ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ವಿಷಯ ತಿಳಿಸಿದರು. ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ಡಿ. ಎಸ್.ಹರ್ದಿ ಮಾತನಾಡಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪುರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮ ಮಾಡಲಾಯಿತು. ಹಾಗೂ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬಂದು ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಪುರಸಭೆಯ ಸಿಬ್ಬಂದಿಯವರಾದ ಆರೋಗ್ಯ ನಿರೀಕ್ಷಕ ಶ್ರೀ ಚಿದಾನಂದ ಮುಗಳಖೋಡ, ಶ್ರೀ ಎಚ್.ಬಿ. ಚಿಕ್ಕೋಣ, ಶ್ರೀ ಪಿ.ಎನ್. ಭೋವಿ, ಶ್ರೀ ಸಾಗರ ಇತಾಪಿ, ಶ್ರೀ ಸಿದ್ದಾರೂಢ. ಹುಕ್ಕೇರಿ, ಶ್ರೀ ಸುನೀಲ ಹಣಜಿ. ಶ್ರೀ ಎಸ್.ಪಿ. ಪೂಜೇರ, ಶ್ರೀ ಎನ್.ಪಿ. ಬುರುಡ. ಶಾಲಾ ಶಿಕ್ಷಕರಾದ ಶ್ರೀ ರಮಜಾನ. ಶೇಖ ಶ್ರೀ ಯಲ್ಲಪ್ಪಾ. ಗದಾಡಿ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಕೆ.ಸಿ.ಖನಶೆಟ್ಟಿ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು

You might also like
Leave a comment