This is the title of the web page
Left Banner (Left Skyscraper)
Right Banner (Right Skyscraper)

ಮೂಡಲಗಿ ತಾಲೂಕಿನಲ್ಲಿ ಜರುಗಿದ ಶಾಂತಿಯುತ ಮತದಾನ

0 43

ಮೂಡಲಗಿ ಜೂ.13 : ಸೋಮವಾರದಂದು ನಡೆದ ಕರ್ನಾಟಕ ವಿಧಾನ ಪರಿಷತ್ ವಾಯುವ್ಯ ಮತ ಕ್ಷೇತ್ರ ಚುನಾವಣೆಯಲ್ಲಿ ಮೂಡಲಗಿ ತಾಲೂಕಿನಲ್ಲಿ ಶಿಕ್ಷಕರ ಮತ ಕ್ಷೇತ್ರ ಶೇ.83 ಮತ್ತು ಪದವೀಧರ ಮತಕ್ಷೇತ್ರದಲ್ಲಿ ಶೇ.61 ರಷ್ಟು ಮತದಾನವಾಯಿತು. ಮೂಡಲಗಿ ತಾಲೂಕಿನಾದ್ಯಾಂತ ಮೂಡಲಗಿ, ಕಲ್ಲೋಳಿ, ಅರಭಾವಿ, ಮುಸಗುಪ್ಪಿ ಮತ್ತು ಯಾದವಾಡ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
ಮೂಡಲಗಿ ತಾಲೂಕಿನಲ್ಲಿ ಪದವಿಧರ ಮತಕ್ಷೇತ್ರದ ಒಟ್ಟು 2872 ಮತದಾರಲ್ಲಿ 1756 ಮತದಾರರು ಮತಚಲಾಯಿಸಿದ್ದು, ಶಿಕ್ಷಕರ ಮತಕ್ಷೇತ್ರದಲ್ಲಿ 430 ಮತದಾರಲ್ಲಿ 358 ಮತದಾರರು ಮತ ಚಲಾಯಿಸಿದರು. ತಾಲೂಕಿನ ಮತಗಟ್ಟೆಗಳಿಗೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮತ್ತಿತರು ಭೇಟಿ ನೀಡಿದರು.

You might also like
Leave a comment