Live Stream

September 2022
T F S S M T W
1234567
891011121314
15161718192021
22232425262728
2930  

| Latest Version 8.0.1 |

Local News

ಡಾ.ಅಶೋಕ ದಳವಾಯಿಗೆ ‘ಪೋಷಕ ಅನಾಜ’ ಪ್ರಶಸ್ತಿ ಹೈದರಾಬಾದನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ..


ಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ ಗುರುತಿಸಿ ಅವರಿಗೆ 2022 ನೇ ಸಾಲಿನ ‘ಪೋಷಕ ಅನಾಜ’ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರತಿಷ್ಟಿತ ಭಾರತೀಯ ಕೃಷಿ ಸಂಶೋಧನ ಅನುಸಂಧಾನ, ನವದೆಹಲಿ, (ICAR) ಇವರ ಅಧೀನ ಹೈದರಾಬಾದನ ಸಂಸ್ಥೆಯಾದ ಭಾರತೀಯ ಕಿರುಧಾನ್ಯ ಅಭಿವೃದ್ಧಿ ಸಂಸ್ಥೆಯವರು ಸಪ್ಟೆಂಬರ 23 ರಂದು ಹೈದರಾಬಾದನಲ್ಲಿ ನಡೆಯುವ ವಿಷೇಶ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ. ದಳವಾಯಿಯವರು ಕಳೆದ ನಾಲ್ಕು ದಶಕಗಳ ಕಾಲ ಆಡಳಿತ, ಕೃಷಿ, ಸಾರ್ವಜನಿಕ ಜೀವನ ಮತ್ತು ವಿಶೇಷವಾಗಿ ಕಿರುಧಾನ್ಯಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರತಿಷ್ಟಿತ ಪ್ರಶಸ್ತಿ ನೀಡಲಾಗುತ್ತಿದೆ. 1984ನೇ ತಂಡದ ಐಎಎಸ್ ಅಧಿಕಾರಿಯಾದ ದಳವಾಯಿಯವರ ಕೊಡುಗೆಯನ್ನು ಗುರುತಿಸಿ ಈಗಾಗಲೇ ದೇಶಾದ್ಯಂತ ಐದು ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಇನ್ನೂ ಹಲವಾರು ಗೌರವಗಳು ಸಂದಿವೆ. ದಳವಾಯಿಯವರು ಇನ್ನೂ ಹೆಚ್ಚಿನ ಸ್ಥಾನ, ಮಾನ ಪಡೆಯಲಿ ಎಂದು ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.


Chandrashekar Pattar

Leave a Reply