ನರೇಗಾ ಅಕ್ರಮ: ತಾಂತ್ರಿಕ ಅನುಮೋದನೆಗೆ ಲಂಚ; ಲೋಕಾ ಬಲೆಗೆ ಬಿದ್ದ ಪಂಚಾಯತ್‌ರಾಜ್ ಎಂಜನೀಯರಿಂಗ್ ಎಇಇ

Ravi Talawar
WhatsApp Group Join Now
Telegram Group Join Now

ಬೆಳಗಾವಿ, ಮಾರ್ಚ್27: ಖಾನಾಪುರ ಉಪವಿಭಾಗದ ಪಂಚಾಯತ್‌ರಾಜ್ ಎಂಜನೀಯರಿಂಗ್ ಎಇಇ ದುರಂದುಂಡೇಶ್ವರ ಬನ್ನೂರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನರೇಗಾ ಕಾಮಗಾರಿಗಳಿಗೆ ತಾಂತ್ರಿಕ ಅನುಮೋಧನೆ ನೀಡಲು ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ. ಅಧಿಕಾರಿ ವಾಸವಿರುವ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿನ ಮನೆ ಮೇಲೆ ದಾಳಿ ಮಾಡಿ  ಶೋಧನೆ ನಡೆಸಲಾಗಿದೆ. ಈವೇಳೆಯಲ್ಲಿ ದಾಖಲೆಗಳಿಲ್ಲದ ಒಟ್ಟು ರೂ.27,75,000/- ನಗದು ಮತ್ತು ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಸದ್ಯಕ್ಕೆ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಅಧಿಕಾರಿಗಳು ಈ ಸಂಬಂಧವಾಗಿ ತನಿಖೆಯನ್ನು ಮುಂದುವರೆಸಿದ್ದಾರೆ.

WhatsApp Group Join Now
Telegram Group Join Now
Share This Article