This is the title of the web page
Left Banner (Left Skyscraper)
Right Banner (Right Skyscraper)

ಸರಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜನೆ

0 105

ಮೂಡಲಗಿ, ತಾಲೂಕಿನ ಹಳ್ಳೂರ ಗ್ರಾಮದ ವಿಜಯ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿ ಸಲಾಗಿತ್ತು. ಶಾಲೆಯ ಎಸ್. ಡಿ.ಎಂ.ಸಿ ಸದಸ್ಯರು ರಿಬ್ಬನ್ನ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆರ್.ಬಿ ಕೊಪ್ಪದ ಮಾತನಾಡಿ, ಇದೊಂದು ಮಾದರಿ ಸಂತೆಯಾಗಿದ್ದು ಮಕ್ಕಳಲ್ಲಿ ವ್ಯವಹಾರದ ಕಲ್ಪನೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.ಶಾಲೆಯ ಸಂತೆಯಲ್ಲಿ ಎಲ್ಲ ತರಗತಿಯ ಮಕ್ಕಳು ವಿವಿಧ ರೀತಿಯ ತರಕಾರಿ, ಹಣ್ಣು, ಹಂಪಲ, ಬಿಸ್ಕತ್, ತಂಪಾದ ಪಾನೀಯ ಸೇರಿದಂತೆ ದಿನ ನಿತ್ಯ ಬಳಕೆ ಮಾಡುವಂತಹ ವಸ್ತುಗಳನ್ನು ಮಾರಾಟ ಮಾಡಿ ಗಮನ ಸೆಳೆದರು. ಈ ಶಾಲೆಯ ಸಂತೆಗೆ ವಿದ್ಯಾರ್ಥಿಗಳ ಪಾಲಕರು, ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವ ಶಾಲೆಯ ಶಿಕ್ಷಕರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಆರ್ ಪಾಲಭಾವಿ, ಏನ್.ಎಸ್ ಶಾಬನ್ನವರ, ಬಿ.ಎಂ ಸೊಲ್ಲಾಪುರಿ, ಎಸ್.ಡಿ.ಎಂ.ಸಿ ಸದಸ್ಯರಾದ ಹಣಮಂತ ಹಾದಿಮನಿ, ನಾಗರಾಜ್ ಮುಘಳಖೋಡ, ಸಂಜು ಹೊಸಟ್ಟಿ ಹಾಗೂ ಇನ್ನಿತರು ಭಾಗವಹಿಸಿದ್ದರು.

You might also like
Leave a comment