This is the title of the web page
Left Banner (Left Skyscraper)
Right Banner (Right Skyscraper)

ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ಆಧಾರ ಕೇಂದ್ರ ಪ್ರಾರಂಭ

ಬಹುದಿನದ ಬೇಡಿಕೆ ಈಡೇರಿದ್ದರಿಂದ ಸಾರ್ವಜನಿಕರಲ್ಲಿ ಹರ್ಷ...

0 103

ಮೂಡಲಗಿ ಜೂ.23 : ತಾಲೂಕಿನ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಆಧಾರ ನೊಂದಣಿ ಕೇಂದ್ರವನ್ನು ಮೂಡಲಗಿಯ ತಹಶೀಲ್ದಾರ್ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಹಶೀಲ್ದಾರ ಡಿ.ಜಿ.ಮಹಾತ ಹೇಳಿದರು.


ಗುರುವಾರದಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಆಧಾರ ನೊಂದಣಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ತಾಲೂಕಿನ ಸಾರ್ವಜನಿಕರು ತಮ್ಮ ಹೊಸ ಆಧಾರ ಕಾರ್ಡ, ಮೊಬೈಲ ನಂಬರ ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗಾಗಿ ಆಧಾರ ನೊಂದಣಿ ಕೇಂದ್ರವನ್ನು ಸಂಪರ್ಕಿಸ ಬಹುದಾಗಿದೆ ಎಂದರು.ಪುರಸಭೆಯ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಉದ್ಘಾಟನೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಶಾಸಕರ ಆಪ್ತ ಸಹಾಯಕ ದಾಸಪ್ಪ ನಾಯಿಕ, ತಹಶೀಲ್ದಾರ ಗೇಡ್-2 ಶಿವಾನಂದ ಬಬಲಿ, ಪುರಸಭೆ ಸದಸ್ಯರಾದ ಆದಂಸಾಬ ತಾಂಬೂಳಿ, ಸಮಾಜ ಸೇವಕ ಈರಪ್ಪ ಢವಳೇಶ್ವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

You might also like
Leave a comment