ನವದೆಹಲಿ ಸೆ., ೨೧ : ಪಿಎಂ ಕೇರ್ಸ ನಿಧಿಗೆ ಹೊಸ ಟ್ರಸ್ಟಿಗಳಾಗಿ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ ಟಾಟಾ ಅವರನ್ನು ಮತ್ತು ಈ ನಿಧಿಗೆ ಸಲಹೆಗಾರರನ್ನಾಗಿ ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆಯಾದ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿ ಕೇಂದ್ರ ಸರಕಾರವು ಇಂದು ಆದೇಶ ಹೊರಡಿಸಿದೆ.
ಇರೊಂದಿಗೆ ಹೊಸ ಟ್ರಸ್ಟಿಗಳಾಗಿ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಟಿ.ಥಾಮಸ್, ಮಾಜಿ ಉಪಸಭಾಪತಿ ಕರಿಯಾ ಮುಂಡಾ ಅವರನ್ನು ಸಹ ನಾಮನಿರ್ದೇಶನ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿ ಪ್ರಧಾನಿ ಕಾರ್ಯಾಲಯ ಮಾಧ್ಯಮ ಹೇಳಿಕೆಯನ್ನು ಬಿಡುಗಡೆಮಾಡಿದೆ.
ಈಗಾಗಲೇ ಪಿ.ಎಂ. ಕೇರ್ಸ ನಿಧಿಯ ಟ್ರಸ್ಟಿಗಳಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಮತ್ತು ಕೇಂದ್ರ ಗ್ರಹ ಸಚಿವ ಅಮಿತ ಶಾ ಅವರು ಇದ್ದಾರೆ.
ಪಿಎಂ ಕೇರ್ಸ ನಿಧಿಯ ಸಲಹಾ ಮಂಡಳಿಗೆ ಮಾಜಿ ಸಿ.ಎ.ಜಿ. ರಾಜೀವ ಮಹರ್ಷಿ, ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆಯಾದ ಸುಧಾಮೂರ್ತಿ ಮತ್ತು ಆನಂದ ಶಾ ಅವರನ್ನು ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.