This is the title of the web page

ನಿಡಸೋಸಿ ಮಠದ ಸ್ವಾಮಿಜಿಗಳ ಕಾರು ಅಪಘಾತ

0 157

ಹುಬ್ಬಳ್ಳಿ ಜು., ೦೬- ಹುಬ್ಬಳ್ಳಿಯಲ್ಲಿ ನಿನ್ನೆ ಹತ್ಯೆಗೀಡಾದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯಸಂಸ್ಕಾರ ಮುಗಿಸಿಕೊಂಡು ಬೆಳಗಾವಿಗೆ ವಾಪಸ್ ಅಗಮಿಸುತ್ತಿದ್ದಾಗ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದ ತೆಗೂರು ಬಳಿ ನಿಡಸೋಸಿ ಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳ ಕಾರು ಅಪಘಾತಕ್ಕೆ ಇಡಾಗಿದೆ.
ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಡಸೋಸಿ ಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಐದು ಜನರು ಇದ್ದರು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಕಾರಿನ್ನಲ್ಲಿರುವ ಎಲ್ಲರೂ ಆರಾಮಾಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯಿಂದಲೇ ಹೇಳಿಕೆ ಬಿಡುಗಡೆಮಾಡಿರುವ ಶ್ರೀಗಳು, ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

You might also like
Leave a comment