This is the title of the web page

ಕೆಸರು ಗದ್ದೆಯಾದ ನೇಸರಗಿ ಮುಖ್ಯ ರಸ್ತೆ

0 40

ವರದಿ(ಗಂಗಾಧರ ಗುಜನಟ್ಟಿ)
ನೇಸರಗಿ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೇಸರಗಿ ಕ್ರಾನೇಸರಗಿ ಮುಖ್ಯ ರಸ್ತೆಸ್ ನಿಂದ ಮಲ್ಲಾಪೂರ ಕೆ ಎನ್ ಗ್ರಾಮದವರೆಗೆ ಮೊದಲೇ ಬಾಗಶ: ಹಾಳಾಗಿದ್ದ ರಸ್ತೆ ಇಂದು ರಸ್ತೆ ತುಂಬೆಲ್ಲ ಗುಂಡಿಗಳಿಂದ ಕೂಡಿ ನೀರು ನಿಂತು ಬಸ್,ಟ್ರಕ್,ಲಘು ವಾಹನ ,ದ್ವಿಚಕ್ರ ವಾಹನ ಸವಾರರು ಮತ್ತು ದಾರಿಹೋಕರ ಪರಿಸ್ಥಿತಿ ನೋಡಲು ಬಹಳ ಕ್ಲಿಷ್ಟವಾಗಿದೆ. ಬಸ್ ನಿಲ್ದಾಣದ ಮುಂದಿನ ರಸ್ತೆಯ ಅಂತೂ ಅಲ್ಲಿ ಸಂಚರಿಸುವ ಜನರ ಪರಿಸ್ಥಿತಿ ಹೇಳಲಾಗದು.ದಾರಿಹೋಕರು ಬೇರೆ ಗ್ರಾಮಕ್ಕೆ ಸಂಚರಿಸುವಾಗ ತಮ್ಮ ವಸ್ರ್ತಗಳಿಗೆ ರಸ್ತೆಯ ರಾಡಿ ಸಿಂಪರಣೆ ಸರ್ವೆಸಾಮಾನ್ಯವಾಗಿದ್ದು ಇನ್ನೇನು ಜತ್ತ ಜಾಂಬೋಟಿ ರಸ್ತೆ ಅಗಲಿಕರಣ ಕಾಮಗಾರಿ ಪ್ರಾರಂಬವಾಗುವ ಹಂತದಲ್ಲಿ ಇನ್ನೂ ಯಾವಾಗ ಮಾರಾಯ! ಸುಂದರ ಅಂತರ ರಾಜ್ಯ ಹೆದ್ದಾರಿ ಆದಷ್ಟು ಬೇಗ ರಸ್ತೆ ನಿರ್ಮಾಣವಾಗಲಿ ಮತ್ತು ಹೆದ್ದಾರಿ ಆಗುವವರೆಗೆ ದುರಸ್ತಿ ಕಾರ್ಯ ಮಾಡಿ ಜನರಿಗೆ ಅಲ್ಪವಾದರೂ ಸಹಾಯ ಮಾಡಬೇಕೆಂದು ಜನಪ್ರತಿನಿಧಿ,ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.ಗ್ರಾಮದಲ್ಲಿ ಅನೇಕ ಉನ್ನತ ಮಟ್ಟದ ಸರ್ಕಾರಿ,ಖಾಸಗಿ ಪ್ರಾಥಮಿಕ, ಪ್ರೌಡಶಾಲೆ,ಕಾಲೇಜು,ಪ್ರಥಮ ದರ್ಜೆ ,ಐಟಿಐ,ಸ್ನಾತಕೋತ್ತರ ಕೋರ್ಸಗಳು ,ವೈದ್ಯಕೀಯ ಕೋರ್ಸುಗಳನ್ನು ಹೊಂದಿರುವ ವಿದ್ಯಾಕೇಂದ್ರಗಳನ್ನು ಹೊಂದಿರುವ ನೇಸರಗಿ ಗ್ರಾಮಕ್ಕೆ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದಿನಾಲು ಹಳ್ಳಿಗಳಿಂದ ಆಗಮಿಸುವ ಸಲುವಾಗಿ ರಸ್ತೆ ಕಾಮಗಾರಿ ಆಗುವ ತನಕ ದುರಸ್ತಿ ಕಾರ್ಯ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೇಳಿಕೆಗಳು
ನೇಸರಗಿ ಗ್ರಾಮ ಹೊಬ್ಬಳ್ಳಿ ಮಟ್ಟದ ದೊಡ್ಡ ಗ್ರಾಮವಾಗಿದ್ದು,ಶಿಕ್ಷಣ, ವೈದ್ಯಕೀಯ, ವ್ಯಾಪಾರಕ್ಕೆ, ಕೆಲಸ ಕಾರ್ಯಗಳಿಗೆ ,ಕೂಲಿ ಕಾರ್ಮಿಕರು ಹೆಚ್ಚಾಗಿ ಸಂಚರಿಸುವ ಮುಖ್ಯ ಕೇಂದ್ರವಾಗಿದ್ದು ಈ ಭಾಗದ ರಸ್ತೆಗಳು ಮಳೆಗೆ ಹದೆಗೆಟ್ಟಿದ್ದು ಶೀಘ್ರವಾಗಿ ರಸ್ತೆ ದುರಸ್ತಿ ಮಾಡಬೇಕು.ಇಲ್ಲದಿದ್ದರೆ ಹೋರಾಟ ಮಾಡಲಾಗುವದು.
ನಿಂಗಪ್ಪ ಅರಿಕೇರಿ.ಮಾಜಿ ಜಿ ಪಂ ಸದಸ್ಯರು, ನೇಸರಗಿ ಹಾಗೂ ನೇಸರಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು.

ರಸ್ತೆ ತೀರಾ ಹದಗೆಟ್ಟಿದ್ದು ಅನೇಕ ಬೈಕ್ ಸವಾರರು ಅನೇಕ ಬಾರೀ ಕೆಟ್ಟ ರಸ್ತೆಯಿಂದ ಅಪಘಾತಗಳಾಗುತ್ತಿದ್ದು. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಂಜು ಮದೆನ್ನವರ ನೇಸರಗಿ ಗ್ರಾಮಸ್ಥ,

ಅತೀಯಾದ ಮಳೆಯಿಂದ ಎಲ್ಲಾ ಕಡೆಗಳಲ್ಲಿ ರಸ್ತೆ ಹದಗೆಟ್ಟಿದ್ದು ಮಳೆ ನಿಂತ ಮೇಲೆ ಅಂತರ ರಾಜ್ಯ ಹೆದ್ದಾರಿ ಕಾಮಗಾರಿ ಆಗುವವರೆಗೂ ಕಡಿ,ಮಣ್ಣಿನಿಂದು ತಗ್ಗಾದ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುವದು.ಸಾರ್ವಜನಿಕರು ಸಹಕರಿಸಬೇಕು.
ಆರ್ ಬಿ.ಹೆಡಗೆ ಸಹಾಯಕ ಅಭಿಯಂತರರು. ‌‌‌‌ ಪಿಡಬ್ಲೂಡಿ.ಬೈಲಹೊಂಗಲ

You might also like
Leave a comment