ಕೊಣ್ಣೂರು ಚೆಕ್ ಪೋಸ್ಟ್ ಗೆ ನರಗುಂದ ತಹಶೀಲ್ದಾರ ಹಾಗೂ ಇಒ ಭೇಟಿ

Ravi Talawar
WhatsApp Group Join Now
Telegram Group Join Now

ಗದಗ ಎಪ್ರಿಲ್ 18  ಲೋಕಸಭೆ ಚುನಾವಣೆ ಹಿನ್ನಲೆ ತಾಲೂಕಿನ ಕೊಣ್ಣೂರು ಮತ್ತು ಕಲಕೇರಿ ಚೆಕ್ ಪೋಸ್ಟ್ ಗಳಲ್ಲಿ ಚುನಾವಣೆ ಅಕ್ರಮ ತಡೆಗಟ್ಟಲು  ತಾಲೂಕು ಆಡಳಿತ ಮತ್ತು ಚುನಾವಣೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರತಿನಿತ್ಯ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡುತ್ತಿರುವ ಚುನಾವಣೆ ಅಧಿಕಾರಿಗಳು ಅಕ್ರಮ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

 ನರಗುಂದ ತಹಶೀಲ್ದಾರ ಶ್ರೀಶೈಲ್ ತಳವಾರ ಹಾಗೂ ನರಗುಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕಿನ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳು ಆದ ಸೋಮಶೇಖರ್ ಬಿರಾದರ್ ಅವರುಗಳು ಕೊಣ್ಣೂರು ಚೆಕ್ ಪೆÇೀಸ್ಟ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಕ್ ಪೋಸ್ಟ್ ನಲ್ಲಿ ನಡೆಸಲಾಗುವ ತಪಾಸಣೆಯ ದಾಖಲೆಗಳನ್ನು ಮತ್ತು ತಪಾಸಣೆ ಕಾರ್ಯವನ್ನು ಸೆರೆಹಿಡಿಯುವ ಕ್ಯಾಮೆರಾ ಸರಿಯಾಗಿ ನಿರ್ವಹಣೆ ಆಗುತ್ತಿದೆಯಾ ಎಂಬುದರ ಕುರಿತು ಪರಿಶೀಲಿಸಿದರು.  ಕೆಲವು ವಾಹನಗಳನ್ನು ತಡೆದ ಇಓ ಮತ್ತು ತಹಶೀಲ್ದಾರ ಅವರು, ಸೂಕ್ತ ದಾಖಲೆಗಳಿಲ್ಲದೇ ಏನಾದರೂ ಹಣ, ಮಧ್ಯ, ಚಿನ್ನಾಭರಣ ಹಾಗೂ ವಾಣಿಜ್ಯ ಸರಕುಗಳನ್ನು ಸಾಗಾಟ ಮಾಡಲಾಗುತ್ತಿದ್ದೆಯಾ  ಎಂದು  ಪರಿಶೀಲಿಸಿದರು. ಅಲ್ಲದೇ ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಚುನಾವಣೆ ಅಕ್ರಮದಲ್ಲಿ ಯಾರೇ ಭಾಗಿಯಾದರೂ ಅಂತಹವರ ವಿರುದ್ಧ ಚುನಾವಣೆ ನಿಯಮಾನುಸಾರ ಕ್ರಮಕ್ಕೆ ಮುಂದಾಗಬೇಕು  ಎಂದುಸೂಚಿಸಿದರು.
WhatsApp Group Join Now
Telegram Group Join Now
Share This Article