ನನ್ನ ರಾಜಕೀಯ ಬದುಕು ಆಕಸ್ಮಿಕ, ಅನಿವಾರ್ಯವಲ್ಲ: ಸಂಸದೆ ಸುಮಲತಾ

Ravi Talawar
WhatsApp Group Join Now
Telegram Group Join Now

ಮಂಡ್ಯ,ಏ.03: ರಾಜಕೀಯಕ್ಕೆ ಬಂದದ್ದು ನಾನು ಆಕಸ್ಮಿಕ, ರಾಜಕೀಯ ನನಗೆ ಅಂದು ಮತ್ತು ಇಂದು ಕೂಡ ಅನಿವಾರ್ಯವಲ್ಲ, ಅಂಬರೀಷ್ ಅವರ ಅಭಿಮಾನ, ಪ್ರೀತಿ, ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದು ಸಂಸದೆಯಾದೆ. ಸ್ವತಂತ್ರ ಸಂಸದೆಯಾಗಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ, ಆದರೆ ಅದು ಸರಿಯಾಗಿ ಜನತೆಯನ್ನು ತಲುಪಿಲ್ಲ, ಪ್ರಚಾರ ಸಿಕ್ಕಿಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ಮಂಡ್ಯದಲ್ಲಿಂದು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಗಳಲ್ಲಿ 2 ವರ್ಷಗಳು ಕೊರೋನಾ ಸೋಂಕಿನಿಂದಾಗಿ ಸಾಕಷ್ಟು ಕೆಲಸಗಳಿಗೆ ಹಿನ್ನಡೆಯಾಯಿತು. 5 ವರ್ಷಗಳಲ್ಲಿ ಮೂರು ವರ್ಷಗಳಲ್ಲಿ ನನ್ನ ಕೈಮೀರಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಇಂದು ನರೇಗಾ ಕಾಮಗಾರಿಯಲ್ಲಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು. ಇದೇ ವೇಳೆ ಕಳೆದ 5 ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಸಾಧನೆ ಕೈಪಿಡಿಯನ್ನು ಬಿಡುಗಡೆ ಮಾಡಿದರು.

WhatsApp Group Join Now
Telegram Group Join Now
Share This Article