ಚಿಕ್ಕೋಡಿ ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಸಿಗುತ್ತಿದ್ದು, ನನ್ನ ಆಯ್ಕೆ ನಿಶ್ಚಿತ: ಪ್ರಿಯಂಕಾ ಜಾರಕಿಹೊಳಿ

Ravi Talawar
WhatsApp Group Join Now
Telegram Group Join Now
ಚಿಕ್ಕೋಡಿ04: ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಜನ ಬೆಂಬಲ ದೊರೆಯುತ್ತಿದ್ದು, 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಕವಟಗಿಮಠ ನಗರದ ಸ್ವಗೃಹದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ   ಕಾಂಗ್ರೆಸ್ ಪಕ್ಷದ ಅಲೆ ಇದೆ. ಪ್ರಚಾರ ಸಭೆಯಲ್ಲಿಯೂ ಅಪರ ಸಂಖ್ಯೆಯ ಜನ ಸೇರುತ್ತಿದ್ದಾರೆ. ಅಭಿವೃದ್ಧಿಗಾಗಿ ಜನ ನನಗೆ ಆಶೀರ್ವದಿಸಬೇಕೆಂದು ಕೋರಿದರು.
ಪ್ರಚಾರ ಸಭೆಗಳಲ್ಲಿ ಜನ ನೀರಾವರಿ ಯೋಜನೆ, ಯುವಕರ ಉದ್ಯೋಗ ಕಲ್ಪಿಸಬೇಕೆಂದು ಮನವಿಗಳನ್ನು ಸಲ್ಲಿಸಿದ್ದಾರೆ. ಜನತೆ ಆಶೀರ್ವದಿಸಿದರೆ ಪ್ರಾಮಾಣಿಕವಾಗಿ ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಯವಕರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ಸ್ಪಂದಿಸುತ್ತೇನೆಂದು ತಿಳಿಸಿದರು.
ಚಿಕ್ಕೋಡಿ ಜನತೆಯ ಆಶೀರ್ವದಿಸಿದರೆ ಖಂಡಿತವಾಗಿ ಚಿಕ್ಕೋಡಿಯಲ್ಲೇ ಮನೆ ಮಾಡುತ್ತೇನೆ. ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಿ, ಸಾಫ್ಟವೇರ್ ಕಂಪನಿ, ಎಂಎನ್ ಸಿ ಕಂಪನಿಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಇನ್ನು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಚಿಕ್ಕೋಡಿಯಲ್ಲಿ ಆರಂಭಿಸುವುದಾಗಿ ಭವರಸೆ ನೀಡಿದರು.
ರಾಜ್ಯದಲ್ಲಿ ಎಷ್ಟು ಸೀಟು ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,
ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳಲ್ಲಿ ನನ್ನನ್ನು ಸೇರಿ 15 ರಿಂದ 18 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಚಿಕ್ಕೋಡಿ, ಗೋಕಾಕ ಜಿಲ್ಲೆ ಘೋಷಣೆ ಬಗ್ಗೆ ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸುತ್ತೇನೆ. ಬಿಹಾರ್ ಮೂಲದವರು ಚಿಕ್ಕೋಡಿ ಕ್ಷೇತ್ರದಲ್ಲಿ ಕಾರ್ಡುಗಳನ್ನು ಹಂಚುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲಾ. ನಾವೆನಿದ್ದರೂ ಅಭಿವೃದ್ಧಿ ಪರ ರಾಜಕೀಯ ಮಾಡುವವರು ಎಂದು ತಿಳಿಸಿದರು.
ಇನ್ನು ಹುಕ್ಕೇರಿ ಸಮಾವೇಶದಲ್ಲಿ ಕೇಂದ್ರ ಸಚಿವ ಅಮೀತ್ ಶಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಕುಟುಂಬದಲ್ಲಿ ಮೈನಿಂಗ್ ಬಿಜನ್ಸೆಸ್ ಇಲ್ಲವೇ ಇಲ್ಲ. ಕೇಂದ್ರ ಸಚಿವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ಈಗಾಗಲೇ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ಶಾಸಕರು,  ಮುಖಂಡರು, ಕಾರ್ಯಕರ್ತರು ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಬಾವುಟ ಹಾರಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಈ ಭಾಗದ ಸರ್ವರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಆಶೀರ್ವದಿಸಬೇಕು. ನಾನು ಜಯಗಳಿಸಿದರೆ ದೇಶದಲ್ಲಿಯೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾದ ಕೀರ್ತಿ ಸಿಗುತ್ತದೆ. ಈ ಕೀರ್ತಿಯನ್ನು ಚಿಕ್ಕೋಡಿ ಜನತೆಗೆ ಒಪ್ಪಿಸುತ್ತೇನೆಂದರು.
WhatsApp Group Join Now
Telegram Group Join Now
Share This Article