ಬೆಳಗಾವಿಯಲ್ಲಿ ಒಪನ್ ಟೇಬಲ್ ಟೆನಿಸ್ ಪಂದ್ಯಾವಳಿ: ಪ್ರಥಮ ಸ್ಥಾನ ಪಡೆದ ಮೃತಿಯಾ ಕಲಾಮಕರ

Ravi Talawar
WhatsApp Group Join Now
Telegram Group Join Now

ಬೆಳಗಾವಿ .01:. ನಗರದ ಆಂಜನೇಯ ನಗರದ ಶ್ರೀ  ಸ್ಪೋರ್ಟ್ಸ್ ಅಕ್ಯಾಡೆಮಿ ಮತ್ತು ವಿಶ್ವಾಸ ಪೌಂಡೇಷನ ವತಿಯಿಂದ ಹಾಗೂ ಖ್ಯಾತ ವೈದ್ಯ ಡಾ. ಜಯಪ್ರಕಾಶ ಅಪ್ಪಾಜಿಗೋಳ ಇವರ ಸಹಯೋಗದೊಂದಿಗೆ ರವಿವಾರದಂದು ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನ್ನಿಸ್ ಚಾಂಪಿಯನ್  ಸಂಜಯ ಹಮ್ಮಣ್ಣವರ ಅವರ ನೇತೃತ್ವದಲ್ಲಿ  ಆಯೋಜಿಸಲಾಗಿದ್ದ ಒಪನ್ ಟೇಬಲ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಬೆಳಗಾವಿ, ಗೋವಾ, ಕೊಲ್ಲಾಪುರ ನಗರಗಳ 16 ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಕ್ರೀಡೆಯಲ್ಲಿ ಮೃತಿಯಾ ಕಲಾಮಕರ ಪ್ರಥಮ ಸ್ಥಾನ ಪಡೆದರೆ ದ್ವೀತಿಯ ಸ್ಥಾನ ಸಂಕಲ್ಪ ಬಂದಿವಾಡೇಕರ,ತೃತೀಯ ಸ್ಥಾನ ನೀಜಾ ಕಾಮತ ಮತ್ತು ಪ್ರತೀಕ ಶಿವನಾಯ್ಕ ಪಡೆದರು. ಸಿದ್ಧಾರ್ಥ ಪುಠಾಣೆ (ಮುಖ್ಯ ಕಾರ್ಯನಿರ್ವಾಹಕರು) ಮತ್ತು   ಎಸ್ ಎಸ್‌ ಅಪ್ಪಾಜಿಗೋಳ ( ನಿವೃತ್ತ ದೈಹಿಕ ಶಿಕ್ಷಕ ವಿದ್ಯಾಮಂದಿರ ಪ್ರೌಢಶಾಲೆ,ನೇಸರಗಿ ) ಇವರುಗಳು ಕ್ರೀಡಾಕೂಟ ಉದ್ಘಾಟಿಸಿದರು .

ವಿಜೇತರಿಗೆ ಬೆಳಗಾವಿ ವಾಯವ್ಯ ಲ್ಯಾಬ್ ಕಾರ್ಯನಿರ್ವಾಹಕರಾದ ಆರ್ ಕೆ.ಪಾಟೀಲ ಪ್ರಶಸ್ತಿ  ವಿತರಿಸಿದರು.  ಕಾರ್ಯಕ್ರಮದಲ್ಲಿ  ವಿರೇಶ ಪುಣೇದ,  ಸುಧೀರ ನಿರ್ವಾಣಿ, ಬಸಪ್ಪ ಸುಣದೋಳಿ,ಡಾ.ಅಜಯ ಅಂಗಡಿ, ರಾಜು ಮಹಾಂತಶೆಟ್ಟಿ,  ಭೀಮಸಿ ಕೆಳಗೇರಿ,ಸುನೀಲ ದೇವಮಾನೆ,  ಬಿರಡೆ ಸರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 

WhatsApp Group Join Now
Telegram Group Join Now
Share This Article