This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಕಣ್ಮನಸೂರೆಗೊಂಡ ಮೂಡಲಗಿ ತಾಲೂಕಾ ಕರ್ನಾಟಕ ರಾಜ್ಯೋತ್ಸವ ಶೀಘ್ರದಲ್ಲೇ ಅಪ್ಪು ಹೆಸರಿನಲ್ಲಿ ಕೆಎಂಎಫ್ ಉತ್ಪನ್ನಬಿಡುಗಡೆ : ಬಾಲಚಂದ್ರ ಜಾರಕಿಹೊಳಿ


ಮೂಡಲಗಿ ನ.04: ಅರಭಾವಿಕ್ಷೇತ್ರದ ಮೂಡಲಗಿಯಲ್ಲಿ ಮಾಡುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ ಅವರಿಗೆ ಸಮರ್ಪಣೆ ಮಾಡುತ್ತಿದ್ದು, ಅಪ್ಪುಅಗಲಿ ಒಂದು ವರ್ಷಗತಿಸಿದರೂ ಅವರ ಜನಪ್ರಿಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ, ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕಬಾಲಚಂದ್ರಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ರಾಜ್ಯೋತ್ಸವ ಸಮಿತಿಯಿಂದ ಗುರುವಾರ ಆಚರಿಸಿದ 67ನೇ ಕರ್ನಾಟಕ ರಾಜ್ಯೋತ್ಸವದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ,ಧರ್ಮ,ಮೇಲು,ಕೀಳುಭಾವನೆಗಳನ್ನು ತೊರೆದುಕರ್ನಾಟಕವು,ಸೌಹಾರ್ದತೆಗೆಹೆಸರುವಾಸಿಯಾದಹೆಮ್ಮೆಯನಾಡು, ಕನ್ನಡ ನಾಡಿನ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಗೌರವವನ್ನು ಹೊಂದಿರಬೇಕು ಎಂದರು. ಮೂಡಲಗಿಯ ರಾಜ್ಯೋತ್ಸವದ ಮೆರವಣಿಗೆಯು ಮೈಸೂರು ದಸರಾ ಉತ್ಸವವನ್ನು ನೆನಪಿಸುವ ರೀತಿಯಲ್ಲಿ ಅದ್ದೂರಿಯಾಗಿ ಜರುಗಿದ್ದು, ಇದು ಮೂಡಲಗಿಯ ಇತಿಹಾಸದಲ್ಲಿ ಅದ್ದೂರಿಯ ಮೆರವಣಿಗೆಯಾಗಿದೆ ಎಂದು ಹೇಳಿದರು.

ಮುಗಿಲು ಮುಟ್ಟುವ ಕನ್ನಡ ಪರ ಘೋಷಣೆಗಳು,ಎಲ್ಲೆಡೆ ಕನ್ನಡ ಬಾವುಟ ಹಾರಾಟ,  ಮೂಡಲಗಿ ತಾಲ್ಲೂಕಿನ ಕಲಾ ಸಂಸ್ಕೃತಿಯನ್ನು ಬಿಂಬಿಸುವ ತಾಲ್ಲೂಕಿನ ವಿವಿಧ ಕಲಾ ತಂಡಗಳಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಮೆರವಣಿಗೆಯು ಮೈಸೂರು ದಸರಾ ಉತ್ಸವವನ್ನು ನೆನಪಿಸುವಂತಿತ್ತು.

ಪುನೀತ್ ಭಾವ ಚಿತ್ರವನ್ನು ಹಿಡಿದು ಸಂಭ್ರಮಿಸಿದ ಅವರು, ಕೆಎಂಎಫ್ಉತ್ಪನ್ನಗಳಿಗೆಅಂಬಾಸಿಡರ್ಆಗಿದ್ದಅಪ್ಪು ಹೆಸರಲ್ಲಿ ಇಷ್ಟರಲ್ಲಿಯೇ ಕೆಎಂಎಫ್ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ವು ಅವರನ್ನು ಸದಾ ಸ್ಮರಿಸುತ್ತದೆಎಂದರು.ಮೆರವಣಿಗೆಯಲ್ಲಿ ಭಾಗವಹಿಸಿದ್ದ ದತ್ತಾತ್ರೇಯಬೋಧ ಸ್ವಾಮೀಜಿಯವರು ಮಾತನಾಡಿ, ಜನಮನ ಸೂರೆಗೊಳಿಸುವಂತಕನ್ನಡ ರಾಜ್ಯೋತ್ಸವದ ಮೆರವಣಿಗೆಯು ತಾಲ್ಲೂಕಿನ ಜನರಲ್ಲಿ ಕನ್ನಡ ಅಭಿಮಾನವನ್ನು ಉಕ್ಕಿಸಿದೆ ಎಂದು ಶ್ಲಾಘಿಸಿ,  ಪ್ರತಿಯೊಬ್ಬರೂ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗನೂರ ಪಟ್ಟಣದಿಂದ ನೂರಕ್ಕೂ ಅಧಿಕ ವಾಹನಗಳಲ್ಲಿ ಜಯಘೋಷಗಳೊಂದಿಗೆ ಮೆರವಣಿಗೆ ಪ್ರಾರಂಭದ ಸ್ಥಳವಾದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಾಲೇಜುವರೆಗೆ ಬರಮಾಡಿಕೊಂಡರು. ಎಸ್.ಎಸ್.ಆರ್ಕಾಲೇಜಿನಿಂದಪ್ರಾರಂಭಗೊಂಡನಾಡದೇವಿಭುವನೇಶ್ವರಿಭಾವಚಿತ್ರದಮೆರವಣಿಗೆಯುಕಣ್ಮನಸೆಳೆಯಿತು.ಅಲಂಕೃತಆನೆ,ಕುದರೆ ಹಾಗೂ ಒಂಟೆಗಳು ಮೆರವಣಿಗೆಗೆ ವಿಶೇಷಮೆರಗು ನೀಡಿದ್ದವು. ಉದಗಟ್ಟಿ ಯದಟ್ಟಿ ಕುಣಿತ, ಕಲ್ಲೋಳಿಯ ಪ್ರಸಿದ್ದ ಸಂಬಾಳವಾದ್ಯ, ಜೋಕಾನಟ್ಟಿಯ ಯುವತಿಯರ ಡೊಳ್ಳುಕುಣಿತ, ಮೂಡಲಗಿಯ ಸಿದ್ದಿಸೋಗು, ಕೋಲಾಟ ಮೂಡಲಗಿ ತಾಲ್ಲೂಕಿನ ವಿವಿಧಗ್ರಾಮಗಳಿಂದ ಬಂದಿದ್ದ ಜಾನಪದ ಕಲಾತಂಡಗಳು, ನಾಡು, ನುಡಿಯನ್ನುಬಿಂಬಿಸುವಶಾಲಾಮಕ್ಕಳರೂಪಕಗಳುಮೈಲುದ್ದದಮೆರವಣಿಗೆಗೆಕಳೆಕಟ್ಟಿದ್ದವು.

ಮೂಡಲಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳ ಜನಪ್ರತಿನಿದಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು,  ಕನ್ನಡ ಪರ ಸಂಘಟನೆಗಳು, ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಭಾಗವಹಿಸಿದ್ದರು.


Leave a Reply