ಇಂಡಿ.ಸಂಗನಬಸವ ಶ್ರೀಗಳು ವಿಜಯಪೂರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರೆ ಇಂಡಿ ತಾಲೂಕಿಗೆ ಸರಕಾರದಿಂದ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಇಂಡಿ ತಾಲೂಕು ವಿದ್ಯಾಕಾಶಿ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23
ನೇ ಸಾಲಿನಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ಬಿ.ಎ,ಬಿಕಾಂ ವಿದ್ಯಾರ್ಥಿಗಳ ಬಿಳ್ಕೊಂಡುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಬಡವರ ದೀನ ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಇಂಡಿ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಕಾಲೇಜುಗಳು, ಶಾಲಾ ಕಟ್ಟಡಗಳು, ಹಾಸ್ಟೇಲಗಳು ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಯ ಪರ್ವ ಮಾಡಲಾಗಿದೆ.
ಇಂಡಿ ಮತ್ತು ಝಳಕಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಇಂಡಿಯಲ್ಲಿ ಸರಕಾರಿ ಐಟಿಐ, ಝಳಕಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಸೇರಿದಂತೆ ಗ್ರಾಮಗಳಲ್ಲಿ ವಸತಿನಿಲಯಗಳು ಮತ್ತು ಶಾಲಾ ಕಟ್ಟಡಗಳನ್ನು ಮಕ್ಕಳಿಗೆ ಓದಲು ಅಭಿವೃದ್ದೀ ಪೂರಕ ವಾತಾವರಣ ಮಾಡಲಾಗಿದೆ ಎಂದರು.

ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮತ್ತು ಶ್ರೀಮಂತ ರಾಷ್ಟç ನಿರ್ಮಾಣದಲ್ಲಿ ಶಿಕ್ಷಣ ಪಾತ್ರ ಮಹತ್ವದ್ದು, ವಿದ್ಯಾರ್ಥಿಗಳು ಶ್ರೇಷ್ಠ ಶಿಕ್ಷಣವಂತರಾಗಿ ಶಾಲೆಯ ಊರಿನ ಕೀರ್ತಿ ಹೆಚ್ಚಿಸಲು ಸಲಹೆ ನೀಡಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿ ಬೆಂಗಳೂರಿನ ಸಿ.ಐ.ಡಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಗೌಡಪ್ಪ ಬಿರಾದಾರ ಮಾತನಾಡಿ ವಿದ್ಯಾರ್ಥಿಗಳು ಸ್ಫರ್ಧಾ ಮನೋಭಾವ ಬೆಳೆಸಿಕೊಂಡು ಜೀವನ ಮಟ್ಟ ರೂಪಿಸಿಕೊಳ್ಳಲು ಕೇಳಿಕೊಂಡರು.
ಪ್ರಾಚಾರ್ಯ ಆರ್.ಎಚ್.ರಮೇಶ, ತಿಪ್ಪಣ್ಣ ವಾಗ್ದಾಳ, ಡಾ. ಶಿರೀನು ಸುಲ್ತಾನಾ ಇನಾಮದಾರ, ಶ್ರೀಮತಿ ರಾಜಲಕ್ಷ್ಮಿ, ಶಿವಯೋಗಪ್ಪ ಮಾಡ್ಯಾಳ ಮಾತನಾಡಿದರು.