ಇಂಡಿ: ನಮ್ಮ ಸಂಸ್ಕೃತಿ ಆಚಾರ ವಿಚಾರ ಭಿನವಾಗಿದ್ದರು ವಿವಿಧತೆಯಲ್ಲಿ ಏಕತೆ ಕಾಣುವ ಯಶಶ್ವಿ ಪ್ರಜಾಪ್ರಭುತ್ವ ರಾಷ್ಟç ಯಾವುದಾದರು ಅದು ಭಾರತ ದೇಶವಾಗಿದೆ. ಸ್ವಾತಂತ್ರö್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸುವುದು ನಮ್ಮ ಪೂರ್ವಜರು ಕೊಟ್ಟ ಬಳುವಳಿಯಾಗಿದೆ. ಅವರ ತ್ಯಾಗ ಬಲಿದಾನದಿಂದ ಇಂದು ಭವ್ಯ ಭಾರತ ದೇಶ ಸ್ವತಂತ್ರವಾಗಿ ಪ್ರಪಂಚದ ಗಮನ ನಮ್ಮತ್ತ ಸೆಳೆಯುವಂತಾಗಿದ್ದು ಇಂದು ನಾವೆಲ್ಲರು ಅವರನ್ನು ಸ್ಮರಿಸಬೇಕಾಗಿದೆ ಎಂದು ಶಾಸಕ ಹಾಗೂ ವಿಧಾನಸಭೆಯ ಅಂದಾಜು ಸ್ಥಾಯಿ ಸಮಿತಿಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ ೭೭ ನೇಯ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮನ್ನಾಳಿ ಹೊದ ಎಲ್ಲ ಸರ್ಕಾಗಳ ಪರಿಶ್ರಮದ ಫಲವಾಗಿ ಇಂದು ಭಾರತ ಅರ್ಥಿಕವಾಗಿ, ವಿಜ್ಞಾನ, ತಂತ್ರಜ್ಞಾನ, ಮೂಲ ಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ ಹೆಮ್ಮೆ ನಮಗಿದೆ. ಅದರಲ್ಲೂ ಚಂದ್ರಯಾನ ೩ ಬಾಹ್ಯಾಕಾಶ ನೌಕೆ ತಂಡದಲ್ಲಿ ಇಂಡಿಯ ಯುವಕ ವಿಕಾಶ ರಾಠೋಡ ಇರುವುದು ಹೆಮ್ಮೆಯ ಸಂಗತಿ
ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ೫೨೪ ಮಿ. ಮಾಡಿ ನಮಗೆ ಸಿಗಬೇಕಾದ ೧೩೦ ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಬೇಕಾಗಿದೆ. ತಾಲೂಕಿನಲ್ಲಿ ಕೈಗಾರಿಕೆ ಅಭಿವೃದ್ಧಿ, ರೇವಣಸಿದ್ದೇಶ್ವರ ಏತ ನೀರಾವರಿ, ಶೈಕ್ಷಣಿಕ ಪ್ರಗತಿ ಸಾಧಿಸುವ ಜೊತೆಗೆ ಒಳ್ಳೆಯ ಸಂಸ್ಕಾರದಿAದ ನಾವೆಲ್ಲರು ಬಾಳಿ ಬದುಕಬೇಕಾಗಿದೆ ಎಂದರು.
ಕAದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದ ಅವರು ಭಾವೈಕ್ಯತೆ ನಮ್ಮ ದೊಡ್ಡ ಶಕ್ತಿ, ಹಿರಿಯರ ತ್ಯಾಗ ಬಲಿದಾನದಿಂದ ಸ್ವಾತಂತ್ರö್ಯ ದೊರೆತ್ತಿದ್ದು ಪ್ರಜಾಪ್ರಭುತ್ವ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ತಹಸೀಲ್ದಾರ ನಾಗಯ್ಯ ಹಿರೇಮಠ, ಬಸವರಾಜ ಗೊರನಾಳ ಮಾತನಾಡಿದರು. ವೇದಿಕೆಯ ಮೇಲೆ ತಾ.ಪಂ ಇಒ ಸುನೀಲ ಮುದ್ದೀನ, ಡಿ.ವಾಯ್.ಎಸ್.ಪಿ ಚಂದ್ರಕಾAತ ನಂದರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೃಷಿಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಭಾರತಿ ಮೆಂಡೆಗಾರ, ಅಂತರ ರಾಷ್ಟಿçÃಯ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಗರ ವಾಘಮೋರೆ, ಈಶ್ವರ ಸಾವಲಕರ, ಅಂತರರಾಷ್ಟಿçÃಯ ಕುಸ್ತಿಯಲ್ಲಿ ಸಾದನೆ ಮಾಡಿದ ರಾಘವೇಂದ್ರ ವಾಲಿಕಾರ, ರಾಜೇಶ ಪವಾರ, ಕುಶಾಲ ದೇಸಾಯಿ, ನಿವೃತ ನೌಕರರಾದ ಎಸ್.ಆರ್.ಸುಲಾಖೆ, ಬಿ.ಎಸ್.ಹೂಗಾರ, ವಿ. ಎಚ್.ಜಾಮಗೊಂಡಿ, ಎಸ್.ಬಿ.ಹೊಸಮನಿ, ನಿವೃತ್ತ ಸೈನಿಕರಾದ ಎಲ್.ಕೆ.ರಾಮಪ್ಪ, ಎಸ್.ಎಂ.ಬಿರಾದಾರ, ಶಂಕರ ನೇದಲಗಿ, ಕಮಲ ನದಾಫ, ಕೆ.ಎ.ತೆನೆಹಳ್ಳಿ, ಪರ್ತಕರ್ತ ಐ.ಸಿ.ಪೂಜಾರ್ ಮತ್ತಿತರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತೇಜಸ್ವಿನಿ ಮುರಳಿ, ನೀಲಾ ಇಂಡಿಕರ, ಮಹಾಲಕ್ಷಿö್ಮ ಬಡಿಗೇರ, ಸರೋಜಾ ಪಾಟೀಲ,ಪ್ರಿಯಾ ಸನಗೊಂಡ,ಪ್ರೇಮಾ ಗುಡ್ಲ,ದಾನಮ್ಮ ಕುಂಬಾರ, ನಿಬಂಧ ಸ್ಪರ್ಧೇಯಲ್ಲಿ ಸಮರ್ಥ ಗುರವ, ನಾಜಮೀನ ವಾಲಿಕಾರ, ವರ್ಷಾ ಗೊರೆ, ಇವರನ್ನು ಸನ್ಮಾನಿಸಲಾಯಿತು.
ಪಟ್ಟಣದ ತಾಲೂಕಾ ಕ್ರೀಡಾಂಗಣಸಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡುತ್ತಿರುವದು.

Leave a comment
Leave a comment