This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಗ್ರಾಮೀಣ ಭಾಗದಲ್ಲಿ ಡಿಜಿಟಲ್, ಆನಲೈನ ಪ್ರಯೋಜನಕಾರಿ : ಶಾಸಕ ಮಹಾಂತೇಶ ದೊಡಗೌಡರ


ನೇಸರಗಿ ಅ., 18- ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ,ರೈತರ,ಮಹಿಳೆಯರ ,ಉದ್ಯೋಗ ಅದ್ಯಯಣ,ಆನಲೈನ ಶಿಕ್ಷಣ ಪಡೆಯುವ ,ಡಿಜಿಟಲ್,ಆನಲೈನ ನಲ್ಲಿ ಉದ್ಯೋಗ ನಿರ್ವಹಿಸುವ ಪುರುಷ ಮಹಿಳೆಯರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಅತ್ಯುನ್ನತ ಕೆಲಸ ನಿರ್ವಹಿಸುತ್ತಿದೆ ಎಂದು ಚೆನ್ನಮ್ಮನ ಕಿತ್ತೂರ ಶಾಸಕರಾದ ಮಹಾಂತೇಶ ದೊಡಗೌಡರ ಹೇಳಿದರು.


ಅವರು ಮಂಗಳವಾರದಂದು ಇಲ್ಲಿನ ಶ್ರೀ ಚನ್ನವೃಷಬೇಂದ್ರ ಕಲ್ಯಾಣ ಮಂಟಪ ನೇಸರಗಿಯಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಸಿ ಎಸ್ ಸಿ ಇ – ಆಡಳಿತ ಇಂಡಿಯಾ ಲಿಮಿಟೆಡ್ ಇವರ ಆಶ್ರಯದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಲ್ಲಿ ಪಾಲ್ಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜ್,ಸರ್ಕಾರಿ ಐಟಿಐ ಕಾಲೇಜ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನೇಸರಗಿ ಇದರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿಂದಿನ ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂದಿ ಆಗಿನ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳು ಜನರ ಕೈಗೆ ಸೇರುವ ಹೊತ್ತಿಗೆ ಶೇ. 80. ಹಣ ಪೋಲಾಗಿ ಜನರಿಗೆ 20% ಮಾತ್ರ ಸಿಗುತ್ತಿದ್ದು ವಿಪರ್ಯಾಸ ಎಂದಿದ್ದರು. ಆದರೆ ಈಗ ಚಾಯ ಮಾರುವ ವ್ಯಕ್ತಿ ಮುಖ್ಯ ಮಂತ್ರಿಗಳಾಗಿ, ನಂತರ ಅಖಂಡ ಭಾರತ ದೇಶದ ಪ್ರಧಾನ ಮಂತ್ರಿ ಗಳಾಗಿ 100 ಕ್ಕೆ 100% ರಷ್ಟು ಎಲ್ಲಾ ಯೋಜನೆಗಳ ಅನುಧಾನ ಜನರಿಗೆ ಅವರವರ ಖಾತೆಗಳಿಗೆ ಒದಗಿಸುವ ವ್ಯವಸ್ಥೆ ಮಾಡಿದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಸಲ್ಲತ್ತದೆ ಎಂದರು.ದೇಶದ ಎಲ್ಲಾ ಸಮುದಾಯದ ಜನರ ಅಭಿವೃದ್ಧಿಗೆ ರೈತರ ಪ್ರಧಾನಮಂತ್ರಿ ಸಮ್ಮಾನ ಯೋಜನಾ,ಬಡ ಮಹಿಳೆಯರ ಉದ್ದಾರಕ್ಕೆ ಉಜ್ವಲ ಗ್ಯಾಸ ವಿತರಣೆ ಮಾಡಿ ಬಡ ಮಹಿಳೆಯರ ಕಷ್ಟ ನಿವಾರಣೆ,ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ ಜೆ ಜೆ ಎಂ ಮುಖಾಂತರ ನೀರಿನ ಸೌಲಭ್ಯ ದೊರಕಿಸಿ ಹೆಣ್ಣು ಮಕ್ಕಳ ಕಷ್ಟದಲ್ಲಿ ಬಾಗಿಯಾದ ಮೊದಲ ಪ್ರದಾನಿಯಾದರು. ಸ್ವ ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ, ಕರೋನಾ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ಒದಗಿಸಿ, ಮೂರು ವಿಭಾಗಗಳ ವ್ಯಾಕ್ಸಿನ ವಿತರಣೆ
ಮತ್ತು ಏಕ್ ದೇಶ ಭಾರತ ಏಕ ಯೋಜನೆ, 371 ರದ್ದು,ಡಿಜಿಟಲ್ ಇಂಡಿಯಾ,ಸ್ವದೇಶಿ ,ಆನಲೈನ ಶಿಕ್ಷಣ,ಪರೀಕ್ಷಾ ಮುಖಾಂತರ ಅನೇಕ ಜನರ ಉದ್ಯೋಗದ ಕೇಂದ್ರವಾಗಲು ಪ್ರಧಾನಿ ಮೋದಿ ಪಾತ್ರ ದೊಡ್ಡದಿದ್ದು ಹಾಗೇಯೇ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ,ಎಲ್ಲಾ ಜನಾಂಗಗಳ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡುತ್ತಿದ್ದು ಇದರ ಉಪಯೋಗ ಪಡೆದು ಮೊಬೈಲ್ ಮೂಲಕ ಡಿಜಿಟಲ್, ಆನಲೈನ ಶಿಕ್ಷಣ ಪ್ರಯೋಜನ ಪಡೆದು ತಮ್ಮ ಭವಿಷ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಂಡು ತಮ್ಮ ತಮ್ಮ ಕುಟುಂಬಕ್ಕೆ ಆಧಾರಸ್ಥಂಬವಾಗಬೇಕು. ಬಡ ಉತ್ತಮ ವಿದ್ಯಾರ್ಥಿಗಳ ಉತ್ತೇಜನಕ್ಕೆ ಮೊನ್ನೆ ಆಧಿವೇಷನದಲ್ಲಿ ಪ್ರಶ್ನೆ ಕೇಳಿದ್ದು ಅದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ನಮ್ಮ ತಂದೆ ದಿ.ಬಸವಂತರಾಯ ಪೌಂಡೇಷನ ವತಿಯಿಂದ ಕಿತ್ತೂರ ಮತ್ತು ನೇಸರಗಿಯಲ್ಲಿ ಉಚಿತ ಸ್ಪರ್ದಾತ್ಮಕ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಇದರ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಕರೆ ನೀಡಿದರು.


ಗ್ರಾಮೀಣ ಡಿಜಿಟಲ್ ಸೌಲಬ್ಯಗಳ ಕುರಿತು ಸಿಎಸಸಿಇ ಆಡಳಿತ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಕರೆರುದ್ರನ್ನವರ,ಅರ್ಬನ ಬ್ಯಾಂಕ್ ನಿರ್ದೆಶಕ ಮಹಾಂತೇಶ ಕೂಲಿನವರ,ಪ್ರಥಮ ದರ್ಜೆ ಪದವಿ ಕಾಲೇಜ ಪ್ರಾಸ್ಸುಪಾಲರಾದ ಮಾರುತಿಗೌಡ ವಾಯ್ ಹಿತ್ತಾಲಗೌಡರ ಅವರು ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ‌ ಉಪಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೆಶಕ ಬಿ ಎಪ್ ಕೊಳದೂರ,ಯುವ ದುರೀಣ ಅಮೀತ ವ್ಹಿ ಪಾಟೀಲ, ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರಾನ್ಸುಪಾಲರಾದ ಎನ್ ಎಂ ಕುದರಿಮೋತಿ,ಐಟಿಐ ಕಾಲೇಜ ಪ್ರಾನ್ಸುಪಾಲರಾದ ಕೆ ಬಿ ಇಟಗಿ, ಎಸ್ ಎಂ‌ ಪಾಟೀಲ,ಮಲ್ಲೆಶಪ್ಪ ಮಾಳಣ್ಣವರ,ಶಂಕರ ತಿಗಡಿ,ವೀರಪ್ಪಣ್ಣ ಚೋಭಾರಿ, ಮಹಾಂತೇಶ ಮೊಹರೆ, ಶ್ರೀಶೈಲ ಕಮತಗಿ, ಸೋಮಪ್ಪ ಮಾಳಣ್ಣವರ,ಸೋಮನಗೌಡ ಪಾಟೀಲ,ಅಡಿವಪ್ಪ ಹೊಸಮನಿ,ಶಶಿಧರ ಪಾಟೀಲ, ಪತ್ರಕರ್ತ ಸಿ ವಾಯ್ ಮೆನಸಿಕಾಯಿ, ಅಡಿವಪ್ಪ ಚಿಗರಿ ಎಲ್ಲ ಭೋದಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Leave a Reply