This is the title of the web page

ಜೆಜೆಎಂ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಅನುಕೂಲ : ಶಾಸಕ ದೊಡ್ಡಗೌಡರ

ನೀರನ್ನು ಮಿತವ್ಯಯವಾಗಿ ಬಳಸಲು ಶಾಸಕ ಮಹಾಂತೇಶ ದೊಡ್ಡಗೌಡರ ಕರೆ

0 218

ನೇಸರಗಿ ಜು., 05- ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ದೇಶದ ಎಲ್ಲ ಮನೆ ಮನೆಗಳಿಗೆ ನೀರು ಒದಗಿಸುವ ಜಲ್ ಜೀವನ ಮಶಿನ್ ಯೋಜನೆಯು ಗ್ರಾಮೀಣ ಮಹಿಳೆಯರ ಆಶ್ರಯದ ಯೋಜನೆಯಾಗಿದ್ದು ಇದ್ದರ ಸದುಪಯೋಗ ಪಡೆದು ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಚ.ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಸುತಗಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದಲ್ಲಿ 1 ಕೊಟಿ 72 ಲಕ್ಷ ರೂಪಾಯಿಗಳ ಜೆ ಜೆ ಎಂ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ ಈ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಸರಿಯಾದ ರೀತಿಯಲ್ಲಿ ಸುರಕ್ಷಿತ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಗ್ರಾಮದ ಜನ ಕಾಮಗಾರಿ ನಡೆಯುವಾಗ ಸಲಹೆ ಆದೇಶ ನೀಡಿ ತಮ್ಮ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಚೆನ್ನಾಗಿ ಪಡೆಯಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೆಶಕ ಬಿ ಎಪ್ ಕೊಳದೂರ,ಎಸ್ ಎಂ ಪಾಟೀಲ, ಪಿ ಎಸ್ ಐ ವಾಯ್ ಎಲ್ ಶೀಗಿಹಳ್ಳಿ, ಗ್ರಾ ಪಂ ಅದ್ಯಕ್ಷ ಸೋಮಪ್ಪ ಉಪ್ಪಾರಟ್ಟಿ,ಉಪಾಧ್ಯಕ್ಷ ಬಸವರಾಜ ತುಬಾಕಿ,ಮುಖಂಡರಾದ ಅಡಿವಪ್ಪ ಹೊಸಮನಿ,ಮಹಾಂತೇಶ ಮೊಹರೆ,ಪ್ರಕಾಶ ಮೊಹರೆ,ಅಡವಿಸಿದ್ದೇಶ್ವರ ಮಾಜಿ ಸೈನಿಕರ ಸಂಘದ ಅದ್ಯಕ್ಷ ಸೋಮಪ್ಪ ತಕ್ಕುನವರ,ಉಪಾಧ್ಯಕ್ಷ ಕಲ್ಲಪ್ಪ ದೇಯಣ್ಣವರ, ಪ್ರಕಾಶ ಮೊಹರೆ,ಸೋಮಪ್ಪ ದೇಯಣ್ಣವರ,ಶಶಿಧರ ಪಾಟೀಲ, ಪಿಡಿಓ ವನಜಾಕ್ಷಿ ಪಾಟೀಲ,ಈರಸಂಗಯ್ಯ ವಿರಕ್ತಮಠ, ಶಾಂತವ್ವ ದೇಯಣ್ಣವರ, ಲಕ್ಷ್ಮೀ ತಳವಾರ,ಸುವರ್ಣಾ ಜಮಾದಾರ,ಸೋಮಪ್ಪ ಶೇಗುಣಸಿ,ಮಲ್ಲೇಶ ನಾವಲಗಿ,ಮಹೇಶ ಮುಚ್ಚಂಡಿ, ಶಿವಪ್ಪ ಶೇಗುಣಗಿ,ನಿಂಗಣ್ಣ ಚೋಭಾರಿ, ಬಾಬು ಬೂದಿಹಾಳ,ಮಲ್ಲಿಕಾರ್ಜುನ ಶಿಂತ್ರಿ,ಮಲ್ಲೇಶ ಕವಲದ,ರಾಜು ಮುಚ್ಚಂಡಿ, ಮಹಾದೇವ ಲೆಂಕೆನ್ನವರ, ಅಡವಿಸಿದ್ದೇಶ್ವರ ಮಾಜಿ ಸೈನಿಕರ ಸಂಘದ ಸದಸ್ಯರು, ಗ್ರಾ ಪಂ ಸಿಬ್ಬಂದಿ, ಗ್ರಾಮದ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

You might also like
Leave a comment