This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಗುಣಮಟ್ಟದ ಕಾಮಗಾರಿಗೆ ಶಾಸಕ ದೊಡಗೌಡರ ಆದೇಶ


ನೇಸರಗಿ, ನ., ೦೫- ಗ್ರಾಮ ಮಟ್ಟದಲ್ಲಿ ನಡೆಯುವ ಕಾಮಗಾರಿಗಳನ್ನು ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸಿ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಿ ಮಾದರಿ ರಸ್ತೆ, ಶಾಲಾ ಕ್ರೀಡಾಂಗಣ ,ಸಿ ಸಿ ರಸ್ತೆ, ಇತರೆ ಆಯಾ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಅಳವಡಿಸಬೇಕೆಂದು ಚೆನ್ನಮ್ಮನ ಕಿತ್ತೂರ ಶಾಸಕರಾದ ಮಹಾಂತೇಶ ದೊಡಗೌಡರ ಹೇಳಿದರು.

ಅವರು ಶನಿವಾರ ದಿ. ೦೫-೧೧-೨೦೨೨ ರಂದು ಸಮೀಪದ ಹಣಬರಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಾಲ್ಕನೆಯ ವಾರ್ಡನ ಜನತಾ ಪ್ಲಾಟ್ ಮೂರು ವಟ್ಟಾರುಗಳ ೩೦ ಲಕ್ಷ ರೂಪಾಯಿಗಳ ಸಿ ಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಹಣಬರಹಟ್ಟಿ ಪಂಚಾಯತ ವ್ಯಾಪ್ತಿಯ ಹೊಸಕೋಟಿ ಗ್ರಾಮದಲ್ಲಿ ೩೦ ಲಕ್ಷ ರೂಪಾಯಿಗಳ ಭೂಮಿ ಪೂಜೆ ನೇರವೇರಿಸಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ ಕ್ಷೇತ್ರದ ಸಂಪೂರ್ಣ ಗ್ರಾಮಗಳ ಅಭಿವೃದ್ಧಿಗೆ ಸದಾ ಬದ್ದನಾಗಿದ್ದು,ನೇಸರಗಿ ಭಾಗದ ಎಲ್ಲಾ ವಿಭಾಗಗಳ ಅಭಿವೃದ್ಧಿಗೆ ಶ್ರಮಿಸುವದಾಗಿ ಮತ್ತು ಜನರು ತಮ್ಮ ಕೆಲಸ ಕಾರ್ಯಗಳನ್ನು ತಮ್ಮ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಲು ಸಲಹೆ ನೀಡಿದರಲ್ಲದೆ, ನಾಲ್ಕು ವರ್ಷಗಳ ಅವದಿಯಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದು ಮುಂದೆಯು ಕಾರ್ಯ ನಿರ್ವಹಿಸಲು ತಮ್ಮ ಸಹಕಾರ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಹಣಬರಹಟ್ಟಿ ಮಾದರಿ ಪ್ರೌಢಶಾಲಾ ಕ್ರಿಡಾಂಗಣದ ೨ ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಯನ್ನು ವಿಕ್ಷಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಬಿ ಎಫ್ ಕೊಳದೂರ, ಎಸ್ ಎಂ ಪಾಟೀಲ,ಗ್ರಾ. ಪಂ ಅಧ್ಯಕ್ಷ ಪ್ರಕಾಶ ಬಡವಣ್ಣವರ,ಗ್ರಾ ಪಂ ಸದಸ್ಯರಾದ ನಾಗವ್ವ ತಳವಾರ, ಮೀನಾಕ್ಷಿ ಬಿಲ್ಲ್, ಸುವರ್ಣ ತಳವಾರ, ಸುನಂದಾ ಉಳವಿ, ಸಕ್ರೆವ್ ಪವಾಡಿ, ಸಿದ್ದವ್ವ ಕೋತಿ, ಜಿನಪ್ಪ ಬಿಲ್ಲ,ದುಂಡವ್ವ ಮೊದಗಿ,ರಾಜು ಮಾದರ, ಕರೆಪ್ಪ ಕಾಕಿ, ಲಕ್ಷ್ಮಣ ಕೆಳಗಿನಮನಿ, ದ್ಯಾಮಪ್ಪ ತಳವಾರ, ಗ್ರಾಮದ ಮುಖಂಡರಾದ ಶ್ರೀಧರ ಯರಡಾಲ, ಸಂತೋಷ ಗೋವಿ, ವಿಠಲ್ ಬಿರಗಡ್ಡಿ, ಲಕ್ಷ್ಮಣ ಕಡಬಿ, ರಾಯಣಗೌಡ ಜಕ್ಕಣ್ಣವರ, ಆನಂದ ಕೋದಾನಪುರ, ಎಸ್ ಎಂ ಪಾಟೀಲ, ಶಿವಪ್ಪ ಚೋಬಾರಿ, ಸಲೀಮಷಾ ನದಾಫ, ಪಿಡಿಓ ಶಿವಾನಂದ ಕಲ್ಲೂರ,ಸಹಾಯಕ ಕಾರ್ಯನಿರ್ವಾಹಕ ಆರ್ ಜಿ ಎಲಿಗಾರ,ಇತರರು ಪಾಲ್ಗೊಂಡಿದ್ದರು.


Leave a Reply