ಕಾಂಗ್ರೆಸ್​​ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ: ಸಚಿವ ಕೃಷ್ಣ ಬೈರೇಗೌಡ

Ravi Talawar
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ,24: ಚಿಕ್ಕಬಳ್ಳಾಫುರದಲ್ಲಿ ಒಕ್ಕಲಿಗರನ್ನು  ಹೊಡೆದು ಆಳಲು ಯತ್ನಿಸಿದ್ದಾರೆ. ಕಾಂಗ್ರೆಸ್​​ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ. ಹೀಗಾಗಿ ಒಕ್ಕಲಿಗರು ಒಗ್ಗಟ್ಟಾಗಿ ಕಾಂಗ್ರೆಸ್​ಗೆ ಬೆಂಬಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೃಷ್ಣ ಬೈರೇಗೌಡ, ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿಗೆ ಟಿಕೆಟ್ ಕೊಟ್ಟಿಲ್ಲ. ಕಾಂಗ್ರೆಸ್​ನಲ್ಲಿ 8 ಒಕ್ಕಲಿಗ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಭವಿಷ್ಯದಲ್ಲಿ ಒಕ್ಕಲಿಗ ನಾಯಕತ್ವ ಇರಬೇಕಂದ್ರೆ ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಅವರು ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಂಘಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಒಕ್ಕಲಿಗ ಸಮುದಾಯಕ್ಕೆ ಶೇ. 11 ಮೀಸಲಾತಿ ನೀಡಿದರು. ಕಾಲೇಜು ಕಟ್ಟಲು ಕಾಂಗ್ರೆಸ್ ಸರ್ಕಾರ ಬನಶಂಕರಿ ಯಲ್ಲಿ 9 ಎಕರೆ ಭೂಮಿ ನೀಡಿದೆ. ಈಗ ಡಿಕೆಶಿಯವರು ಒಕ್ಕಲಿಗ ಸಂಘದ ಮೆಡಿಕಲ್ ಕಾಲೇಜಿಗೆ ಕೋಟ್ಯಂತರ ಬಡ್ಡಿ ಹಣ ಮನ್ನಾ ಮಾಡಲು ಮುಂದಾಗಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ಒಕ್ಕಲಿಗ ಸಮಾಜದ ಮತ್ತೊಂದು ಪೀಠವನ್ನು ಜೆಡಿಎಸ್ ಸ್ಥಾಪಿಸಿತು. ರಾಜಕೀಯವಾಗಿ ಎಚ್‌.ಎನ್. ನಂಜೇಗೌಡ. ಬೈರೇಗೌಡ, ನಾಗೇಗೌಡ, ಬಚ್ಚೇಗೌಡ. ನಟ ಅಂಬರೀಶ್ ಅವರನ್ನು ಪಕ್ಷದಿಂದ ಹೊರ ಹಾಕಿದ್ದ ಜೆಡಿಎಸ್. ಬಿಜೆಪಿ ಪಕ್ಷದಿಂದ ಕೂಡ ಒಕ್ಕಲಿಗ ಸಂಘಕ್ಕೆ ಯಾವುದೇ ಕೊಡುಗೆ ಇಲ್ಲ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶ್ರೀಗಂಧದ ಕಾವಲು ಒಕ್ಕಲಿಗ ಸಂಘದ ಜಾಗವನ್ನು ಬೇರೆಯವರಿಗೆ ಮಂಜೂರು ಮಾಡಿದರು ಎಂದು ಅಸಮಾಧಾನ ಹೊರಹಾಕಿದರು.

ಪ್ರೊ.ಕೃಷ್ಣೇಗೌಡ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರನ್ನು ನಾವು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ ಅವರು, ಈಗ ನಮ್ಮ ಜನಾಂಗ ನೋವು ಅನುಭವಿಸುತ್ತಿದೆ. ಮುಂದೆಯೂ ಈ ನೋವು ಅನುಭವಿಸುವುದು ಬೇಡ. ಆಗಾಗಿ ನಮ್ಮ ಜನಾಂಗದವರಿಗೆ ಕಣ್ಣು ತೆರೆಸಬೇಕು ಎಂದು ಸುದ್ದಿಗೋಷ್ಠಿ ಮಾಡಿದ್ದೇವೆ. ಅಪ್ಪ , ಮಕ್ಕಳಿಗೆ ಸಪೋರ್ಟ್ ಮಾಡಿ ನಮ್ಮ ಜನಾಂಗ ಮೋಸ ಹೋಗಿದೆ ಎಂದು ಕಣ್ಣೀರು ಹಾಕುತ್ತಿದ್ದೇವೆ. ಅವರ ಮೊಮ್ಮಗ ಬಿಟ್ಟರೆ ಬೇರೆ ಯಾರು ಅಭ್ಯರ್ಥಿ ಇಲ್ಲವಾ? ನಾನು ಕೂಡ ಪ್ರೋಫೆಸರ್‌. ಅವರು ಮೂರೂ ಕಡೆ ಸೋಲುತ್ತಾರೆ ಎಂದು ದೇವೇಗೌಡ ಕುಟುಂಬದ ವಿರುದ್ಧ ಕಿಡಿಕಾರಿದರು.

WhatsApp Group Join Now
Telegram Group Join Now
Share This Article