ಸಂವಿಧಾನ ಉಳಿಸಲು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಸಂಘಟಿತರಾಗಿ : ಸಚಿವ ಜಮೀರ ಅಹ್ಮದ್ ಖಾನ್

Chandrashekar Pattar
Oplus_131072
WhatsApp Group Join Now
Telegram Group Join Now

ಮೂಡಲಗಿ : ಸಂವಿಧಾನ ಉಳಿಸಲು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಸಂಘಟಿತರಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ವಸತಿ ಹಾಗೂ ವಕ್ಫ ಸಚಿವ ಜಮೀರ ಅಹ್ಮದ್ ಖಾನ್ ಹೇಳಿದರು

ಶನಿವಾರದಂದು ಪಟ್ಟಣದ ಅತ್ತಾರ್ ಕಲ್ಯಾಣ ಮಂಟಪದಲ್ಲಿ ಜರುಗಿದ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಪ್ರೀಯಾಂಕಾ ಜಾರಕಿಹೊಳಿ ಪರ ಚುನಾವಣಾ ಪ್ರಚಾರಾರ್ಥವಾಗಿ ಹಮ್ಮಿಕೊಂಡ, ಅಲ್ಪಸಂಖ್ಯಾತರ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಜಾತಿ ಜಾತಿಗಳ ಮದ್ಯ ವೈಷಮ್ಯದ ಬೀಜ ಬಿತ್ತಿ ರಾಜಕಾರಣ ಮಾಡುತ್ತ ದೇಶದಲ್ಲಿನ ಶಾಂತತೆಯನ್ನು ಕದಡುತ್ತಿದೆ, ಕೇವಲ ಒಂದು ಜಾತಿಯನ್ನು ಓಲೈಸುತ್ತ ಅನ್ಯ ಜಾತಿಗಳನ್ನು ಕಡೆಗಣಿಸುತ್ತಿರುವ ಕೇಂದ್ರದಲ್ಲಿನ ಬಿಜೆಪಿ ಸರಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಸರಕಾರ ತರಲು ಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ವಿಪ ಸದಸ್ಯ ಅಬ್ಧುಲ್ ಜಾಫರ್ ಹಾಗೂ ವಕ್ಫ ಸಮೀತಿಯ ರಾಜ್ಯಾಧ್ಯಕ್ಷ ಅನ್ವರ್ ಬಾಷಾ ಮಾತನಾಡಿ ದೇಶದಲ್ಲಿ ಕಳೆದ 10ವರ್ಷಗಳಿಂದ ಬಿಜೆಪಿ, ಅಲ್ಪ ಸಂಖ್ಯಾತರಾದ ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದು, ರಾಜ್ಯದ ಹಾಗೆ, ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಸರಕಾರ ತರಲು ನಾವೆಲ್ಲ ಕಟಿ ಬದ್ಧರಾಗಿ ನಿಲ್ಲಬೇಕು ಎಂದರು.

ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅರವಿಂದ್ ದಳವಾಯಿ ಮಾತನಾಡಿ, ಬಿಜೆಪಿಯ ಹಿಟ್ಲರ್ ನೀತಿಯಿಂದ ದೇಶದ ಜನತೆ ಹತಾಶರಾಗಿದ್ದು, ಈ ಸಲ ಬಿಜೆಪಿಗೆ 200 ಸ್ಥಾನಗಳನ್ನು ಗೆಲ್ಲುವುದು ಕೂಡ ಅನುಮಾನವಾಗಿದೆ.ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ತುಂಬಾ ಅನುಕೂಲವಾಗಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದೆ. ಬರುವ ಮೇ7 ರಂದು ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿಯಿಂದ ಪ್ರೀಯಾಂಕಾ ಜಾರಕಿಹೋಳಿಯವರನ್ನು ಪ್ರಚಂಡ ಬಹುತದಿಂದ ಆರಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ತರಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಅನೀಲ್ ದಳವಾಯಿ, ಬಿ.ಬಿ.ಹಂದಿಗುಂದ, ಎಸ್.ಕೆ.ಸೋನವಾಲ್ಕರ್, ವಿ.ಪಿ.ನಾಯಕ್, ಮೌಲಾನಾ ಅಮೀರಸಾಬ್ ಥರಥರಿ, ಮೌಲಾನಾ ಅಬುಬಕ್ಕರ್, ಫಾದರ್ ಸದಾಶಿವ ಮಾಂಗ, ಸಲೀಂ ಇನಾಮದಾರ್, ಇರ್ಷಾದ್ ಪೈಲವಾನ್, ಶಕೀಲ್ ಬೇಪಾರಿ, ಮದಾರ್ ಜಕಾತಿ, ಸಾಕೀಬ್ ಪೀರಜಾದೆ, ರಫೀಕ್ ಪೈಲವಾನ್, ಸುರೇಶ್ ಮಗದುಮ್, ಇಮಾಮ್ ಹುನ್ನೂರ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article