16ನೇ ವಾರ್ಡ್ನಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಸಚಿವ ಎಚ್.ಕೆ. ಪಾಟೀಲ ಪ್ರಚಾರ

Ravi Talawar
WhatsApp Group Join Now
Telegram Group Join Now

ಗದಗ,04: ದೇಶದಲ್ಲಿ ಧ್ವನಿ ಇಲ್ಲದವರಿಗೆ, ಶೋಷಿತ ವರ್ಗಕ್ಕೆ, ಬೆವರು ಸುರಿಸಿ ದುಡಿಯುವ ವರ್ಗಕ್ಕೆ ಸೂಕ್ತ ಸ್ಥಾನಮಾನ, ಅವಕಾಶಗನ್ನು ದೊರಕಿಸುವ ರಾಜಕೀಯ ವಾತಾವರಣ ಬರುತ್ತದೆ ಎಂಬ ಆಶಯ ಮೂಡಿದೆ. ಎಲ್ಲೆಡೆ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ 16ನೇ ವಾರ್ಡಿನ ಡಿಸಿಮಿಲ್ ರಸ್ತೆಯ  ಬಾಬು ಜಗಜೀವನರಾಮ್ ಸಮುದಾಯ ಭವನದ ಎದುರು  ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಸಂವಿಧಾನವನ್ನು ಬದಲಾವಣೆಗೊಳಿಸುವುದಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೆಸೆದು, ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನವನ್ನು ರಕ್ಷಿಸಲು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು, ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯು ಮಹತ್ವದ ಚುನಾವಣೆಯಾಗಿದೆ. ಬದುಕು-ಭಾವನೆಗಳ, ಬಡವರು-ಶ್ರೀಮಂತರ ನಡುವಿನ ಚುನಾವಣೆಯಾಗಿದೆ. ಸಂವಿಧಾನ ರಕ್ಷಣೆಗೆ ಇರುವ, ಸರ್ವರಿಗೂ ಸಮಬಾಳು, ಸಮಪಾಲು ಇರುವ ಚುನಾವಣೆಯಾಗಿದೆ. ಈ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡು ಭಾವನೆಗಳ ಜೊತೆಗೆ ಆಟವಾಡುವ ಮೂಲಕ ಜಾತಿಜಾತಿಗಳ ನಡುವೆ, ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿರುವ ಬಿಜೆಪಿಯನ್ನು ತಿರಸ್ಕರಿಸಿ, ಬಡವರ ಬದುಕನ್ನು ಉಜ್ವಲಗೊಳಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ಗೃಹಲಕ್ಷಿö್ಮÃ 2,000 ರೂ., ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5000 ರೂ. ನಂತೆ ವಾರ್ಷಿಕ 60 ಸಾವಿರ ರೂ. ಹಣವನ್ನು ನೀಡಲಾಗುತ್ತಿದೆ. ಇದು ಬಡವರ, ಮಧ್ಯಮ ವರ್ಗದವರ ಬದುಕಿಗೆ ಆಸರೆಯಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಪಂಚನ್ಯಾಯ(ಗ್ಯಾರAಟಿಗಳನ್ನು) ಘೋಷಿಸಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ., ಯುವಕರಿಗೆ 1 ಲಕ್ಷ ರೂ., ಬಡಕುಟುಂಬದವರಿಗೆ 25 ಲಕ್ಷ ರೂ. ಮೊತ್ತದ ವಿಮೆ, ಜಾತಿ ಗಣತಿ, ಹಾಗೂ ರೈತರ ಸಾಲ ಮನ್ನಾ ಆಗಲಿದೆ. ಆದ್ದರಿಂದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷರಸಾಬ್ ಬಬರ್ಚಿ, ಶಹರ ಅಧ್ಯಕ್ಷ ಬಿ.ಬಿ. ಅಸೂಟಿ, ಪ್ರಭು ಬುರಬುರೆ, ನಗರಸಭೆ ಮಾಜಿ ಅಧ್ಯಕ್ಷ ಹಾಗೂ 16ನೇ ವಾರ್ಡಿನ ಹಾಲಿ ಸದಸ್ಯ ಕೃಷ್ಣಾ ಪರಾಪೂರ, ಸುಲೇಮಾನ್ ಚಿನ್ನೂರ, ಸೌಖತ್‌ಅಲಿ ಮುರಾದಖಾನ್, ಮಾಬುಸಾಬ್ ಸಿಪ್ಪೆಕೊಪ್ಪ, ಲಿಯಾಕತ್ ಮುಲ್ಲಾ, ಮಾರ್ತಾಂಡಪ್ಪ ಹಾದಿಮನಿ, ಮೈಲಾರಪ್ಪ ಹಾದಿಮನಿ, ವಿಶ್ವನಾಥ ಹಾದಿಮನಿ, ಹೂವಪ್ಪ ಚಂದಾವರಿ, ಎಸ್.ಎನ್. ಬಳ್ಳಾರಿ, ವಿರುಪಾಕ್ಷಪ್ಪ ರಾಮಗಿರಿ, ವಿಜಯ ಕಲ್ಮನಿ, ಯುವರಾಜ ಬಳ್ಳಾರಿ, ವಿನಾಯಕ ಪರಾಪೂರ, ನಾರಾಯಣ ದೊಡ್ಡಮನಿ, ಗೋವಿಂದರಾಜ ಬಳ್ಳಾರಿ, ನಾಗರಾಜ ಕಿನ್ನಾರಿ ಇದ್ದರು.

WhatsApp Group Join Now
Telegram Group Join Now
Share This Article