ನೇಸರಗಿ ಡಿ., 21- ಭಾರತೀಯ ಜನತಾ ಪಕ್ಷದ ಆಡಳಿತ ಸಮಯದಲ್ಲಿ ಶಿಕ್ಷಣ ಸುಧಾರಣೆ ಮತ್ತು ಶಿಕ್ಷಣ ಉನ್ನತಿಕರಣ,ಬಡವ ಬಲಿದರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಲಿಸಲಾಗಿದ್ದು ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದು ದೇಶದ ಅಭಿವೃದ್ಧಿಗೆ ಹಾಗೂ ತಮ್ಮ ಅಭ್ಯುದಯಕ್ಕೆ ಪಾತ್ರರಾಗಬೇಕೆಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ ಸಿ.ನಾಗೇಶ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೧ ಕೋಟಿ ೬೦ ಲಕ್ಷ ರೂಪಾಯಿಗಳ ಅನುಧಾನದಲ್ಲಿ ನಿರ್ಮಾಣವಾಗಲಿರುವ ಕಾಲೇಜ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ ಭಾರತ ದೇಶಕ್ಕೆ ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾದ ನಂತರ ಹೆಚ್ಚಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲಾಯಿತು. ನಮ್ಮ ದೇಶದಲ್ಲಿ ಶಿಕ್ಷಣ ನೀತಿ ಹಾಳು ಮಾಡಲು ಬ್ರಿಟಿಷರು ಮತ್ತು ಮೊಗಲರು ಕಾರಣಭೂತರು ಅವರು ವ್ಯಾಪಾರ ಮತ್ತು ದೇಶ ದೊಚ್ಚಲು ಮತಾಂತರ ಮಾಡಲು ಬಂದು ನಮ್ಮ ದೇಶದ ಹಿನ್ನಡೆಗೆ ಕಾರಣರಾದರು.ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಶಿಕ್ಷಣದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಅದರಲ್ಲಿ ಬೇಟಿ ಪಡಾವೋ ಬೇಟಿ ಬಚಾವೋ ವಿನೂತನ ಶಿಕ್ಷಣ ಜಾರಿಗೆ ತಂದರು ಹಾಗೇಯೆ ನಮ್ಮ ರಾಜ್ಯದಲ್ಲಿ ಮಾಜಿ ಸಿ ಎಂ ಯಡಿಯೂರಪ್ಪ ಮತ್ತು ಈಗಿನ ಸಿ ಎಂ ಬೊಮ್ಮಾಯಿ ಶಿಕ್ಷಣ ಮತ್ತು ಶಿಕ್ಷಣ ಕಟ್ಟಡಗಳಿಗೆ ಧಾರಾಳವಾಗಿ ಅನುಧಾನ ನೀಡಿದ್ದಾರೆ. ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಅನುಧಾನಿತ ಸಂಸ್ಥೆಗಳಾಗಿ ಮಾಡಿದ್ದಾರೆ.ನಾಲ್ಕು ವರ್ಷದಲ್ಲಿ 16,900 ಕೊಟಡಿ ನಿರ್ಮಾಣ ಮಾಡಿ ಧಾಖಲೆ ಮಾಡಿದೆ ಬಿಜೆಪಿ ಸರ್ಕಾರ ಈ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಕೆಲಸ ಕಾರ್ಯಗಳಿಗೆ ದುಂಬಾಲು ಬಿದ್ದು ಕ್ಷೇತ್ರದ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದರು .ಬಡವ ,ಬಲ್ಲಿದ ಎಂಬ ತಾರತಮ್ಯ ಅನುಸರಿಸದೆ. ಸ್ವಾತಂತ್ರ್ಯ ಹೋರಾಟಗಾರ, ಮಹಾ ತಪಸ್ವಿಗಳ ಜೀವನ ತತ್ವಗಳನ್ನು ಪಠ್ಯದಲ್ಲಿ ಅಳವಡಿಸಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
ಚೆನ್ನಮ್ಮನ ಕಿತ್ತೂರ ಶಾಸಕರಾದ ಮಹಾಂತೇಶ ದೊಡಗೌಡರ ಮಾತನಾಡಿ ಅನೇಕ ವರ್ಷಗಳ ಹಿಂದೆ ಸ್ಥಾಪಿತವಾದ ಈ ಕಾಲೇಜ ಭೂಮಿ ಅಡಿಪಾಯ ಸರಿ ಇಲ್ಲದ ಕಾರಣ ಶಿಥಿಲವಾದ ಕಾರಣ ಶಿಕ್ಷಣ ಸಚಿವರಿಕೆ ಮನವರಿಕೆ ಮಾಡಿದಾಗ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುಧಾನ ನೀಡದ್ದು ಮುಂದೆಯು ಹನಕಾಸಿನ ಅನುಧಾನ ನೀಡುವ ಬರವಸೆ ನೀಡಿದ್ದಾರೆ.ಭಯದಿಂದ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು, ವಿದ್ಯಾರ್ಜನೆ ಮಾಡುವ ಶಿಕ್ಷಕರು ಇನ್ನೂ ಮುಂದೆ ಭಯ ಮುಕ್ತ ಶಿಕ್ಷಣ ಪಡೆಯಲು ಕಟ್ಟಡ ನಿರ್ಮಿಸಲಾಗುತ್ತಿದೆ ಮತ್ತು ಈ ಭಾಗಕ್ಕೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ನಮ್ಮ ಸ್ವಾಭಿಮಾನ ಮತ್ತು ನಮ್ಮ ರಾಷ್ಟ್ರೀಯತೆ ಅಭಿಯಾನದಿಂದ ಶಿಕ್ಷಣ ಪಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿ ಪ ಸದಸ್ಯ ಅರುಣ ಶಹಾಪೂರ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಎಪ್ ಕೊಳದೂರ,ಪದವಿ ಪೂರ್ವ ಉಪ ನಿರ್ದೆಶಕರಾದ ಎಂ ಎಂ ಕಾಂಬಳೆ,ಪಿಡ್ಲುಡಿ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರ ಎಸ್ ಎಸ್ ಸೋಬರದ,ಅಧೀಕ್ಷಕ ಅಭಿಯಂತರ ಅರುಣ ಕುಮಾರ ಪಾಟೀಲ, ಅಡಿವಪ್ಪ ಮಾಳಣ್ಣವರ, ಎಸ ಎಂ ಪಾಟೀಲ, ಸೋಮಪ್ಪ ಸೋಮಣ್ಣವರ, ಯುವ ಮುಖಂಡ ನಿಂಗನಗೌಡ ದೊಡಗೌಡರ ಮಹಾಂತೇಶ ಕೂಲಿನವರ,ಮಾಜಿ ತಾ ಪಂ ಸದಸ್ಯ ಶ್ರೀಶೈಲ ಕಮತಗಿ,ಶಂಕರ ತಿಗಡಿ ,ಮಲ್ಲೆಶಿ ಮಾಳಣವರ.ಪದವಿ ಕಾಲೇಜ ಪ್ರಾನ್ಸುಪಾಲ ಎಂ ವಾಯ್ ಹಿತ್ತಾಲಗೌಡರ,ಕಾಲೇಜ ಪ್ರಾನ್ಸಪಾಲ ಕುದುರೆಮುಖ,ಉಪಾಧ್ಯಕ್ಷ ಸೋಮಶೇಖರ ಮಾಳಣವರ,ಸೋಮನಗೌಡ ಪಾಟೀಲ, ದೇಮಣ್ಣ ಗುಜನಟ್ಟಿ, ಸಲಿಂ ನದಾಪ್,ಗುರು ತುಬಚಿ,ನಾಗರಾಜ ತುಬಾಕಿ, ತೇಜಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸೋಮಣವರ, ಮಲ್ಲಿಕಾರ್ಜುನ ತುಬಾಕಿ,ವಿರಭದ್ರ ಚೋಭಾರಿ, ಪ್ರಕಾಶ ತೋಟಗಿ,ವಿಷ್ಣು ಮೂಲಿಮನಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ,ಅಡಿವಪ್ಪ ಚಿಗರಿ, ಸುತ್ತಮುತ್ತಲಿನ ಗ್ರಾಮಸ್ಥರು,ಶಿಕ್ಷಕರು,ವಿದ್ಯಾರ್ಥಿಗಳು ಪಿಡಬ್ಲುಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.