ಚನ್ನಮ್ಮನ ಕಿತ್ತೂರು : ಹಲವಾರು ವಿಶಿಷ್ಟ ಚಿತ್ರಕಲಾವಿದರು ನಮ್ಮ ನಡುವೆ ಇದ್ದಾರೆ, ಇದರಲ್ಲೂ ವಿಶೇಷ ಕೌಶಲ ಬಳಸಿ ವಿಭಿನ್ನವಾಗಿ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ಹೀಗೂ ಸಹ ಚಿತ್ರ ಬಿಡಿಸಬಹುದೇ ಎಂದು ಜನರು ಯೋಚಿಸುವಂತೆ ಮಾಡುವ ಕೆಲ ಕಲಾವಿದರು ನಮ್ಮ ನಡುವೆ ಇದ್ದಾರೆ ಅಂತಹ ಕಲಾವಿದರಿಗೆ ಬೆಳಗಾವಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತಿಯವರು ಮೂರು ದಿನಗಳ ಕಾಲ ಕಿತ್ತೂರಿನಲ್ಲಿ ನಡೆಯುವ ಚೆನ್ನಮ್ಮನ ಕಿತ್ತೂರು ಉತ್ಸವದಲ್ಲಿ ವಿಶೇಷ ಕಾಳಜಿ ವಹಿಸಿ ಕೋಟೆಯ ಪೂರ್ವ ದಿಕ್ಕಿನಲ್ಲಿ ಇರುವ ಮುಖ್ಯ ದ್ವಾರದ ಪಕ್ಕದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸಿದ್ದಾರೆ ಈ ಪ್ರದರ್ಶನ ಜನಾಕರ್ಷಣೆಯಾಗಿದೆ.
ಮೂರು ದಿನಗಳ ವರೆಗೆ ನಡೆಯುವ ಫಲ ಪುಷ್ಪ ಪ್ರದರ್ಶನದಲ್ಲಿ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದವರಾದ ಸದ್ಯ ಹುಬ್ಬಳ್ಳಿ ನಿವಾಸಿಯಾಗಿರುವ ಶಿವಲಿಂಗಪ್ಪ ಬಡಿಗೇರ, ಕಲ್ಲಪ್ಪ ಆರೇರ, ಪ್ರಕಾಶ ಮೇದಾರ ಹಾಗೂ ಸಂಜೀವಕುಮಾರ ತಿಲಗರ ಇವರು ಸಿರಿಧಾನ್ಯಗಳನ್ನು ಬಳಸಿ ಸುಮಾರು 06 ಅಡಿ ಎತ್ತರದ ವೀರ ಮಾತೆ ಚೆನ್ನಮ್ಮಜೀಯ ಕಲಾ ಕೃತಿ ಜನರ ಆಕರ್ಷನಿಯವಾಗಿದೆ. ಮತ್ತು ಇದೆ ಕಲಾವಿದರು ಸಂಗೊಳ್ಳಿ ರಾಯಣ್ಣ ಅಮಟೂರು ಬಾಳಪ್ಪನವರ ರಂಗೋಲಿ ಕಲಾ ಕೃತಿಗಳು ನೋಡುಗರ ಮನ:ಸೂರೆಗೊಳಿಸುತ್ತಿವೆ.
ಗುಲಾಬಿ, ಜರ್ಬೇರಾ, ಆರ್ಕೆಡ್, ಸೇವಂತಿಗೆ ಸೀರಿದಂತೆ ಸುಮಾರು 10 ಕ್ಕೂ ಹೆಚ್ಚು ಬಗೆಯ ಪುಷ್ಪಗಳನ್ನು ಬಳಸಿ ಕರ್ನಾಟಕ ನಕ್ಷೆ, ಪರಿಸರ ರಕ್ಷಣೆ ಜಾಗೃತಿ, ಮಸ್ತೆಕನ್ಯೆ ಸೇರಿದಂತೆ ಹಲವು ಕಲಾಕೃತಿಗಳನ್ನು ಶಿವಮೊಗ್ಗದ ಕಲಾವಿದ ಗೀರಿಶ ಆಕರ್ಷಕವಾಗಿ ರಚಿಸಿದ್ದಾರೆ.
ಬದನೆ, ಕ್ಯಾರೆಟ್, ಹಾಗಲಕಾಯಿ ಮುಂತಾದ ತರಕಾರಿ ಬಳಸಿ ರಾಷ್ಟ್ರ ಪಕ್ಷಿ ನವಿಲು, ಮೊಸಳೆ, ಬಾತುಕೋಳಿಯ ಪ್ರತಿ ಕೃತಿಗಳನ್ನು ಹಾಗೂ ಕನ್ನಡದ ಕಣ್ಮಣಿ ಡಾ. ರಾಜಕುಮಾರ, ಪವರ್ ಸ್ಟಾರ್ ಡಾ. ಪುನೀತ ರಾಜಕುಮಾರ, ಬುದ್ಧ, ತಾಯಿ ಮಗು ಸೇರಿದಂತೆ ಅನೇಕ ಮಹಾಪುರುಷರ ಕಲಾ ಕೃತಿಗಳನ್ನು ಹುಬ್ಬಳ್ಳಿಯ ಕಲಾವಿದ ಇಸ್ಮಾಯಿಲ್ ಕಲ್ಲಂಗಡಿ, ಕುಂಬಳ ಕಾಯಿಗಳಲ್ಲಿ ಅರಳಿಸಿದ್ದಾರೆ.
ಈ ಫಲ – ಪುಷ್ಪ ಪ್ರದರ್ಶನವನ್ನು ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲ ಅಂಗಡಿ ಉದ್ಘಾಟಿಸಿದರ.
ಈ ವೇಳೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬೆಳಗಾವಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಎಸ್. ಪಿ. ಭೀಮಾಶಂಕರ ಗುಳೇದ, ಬೆಳಗಾವಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ. ಎನ್. ಶಮತ, ಎಂ. ಎನ್. ನವೀನ ಬಡಿಗೇರ, ಅಶ್ವಿನಿ ಎದ್ದಲಗುಂಡಿ, ಕಲ್ಮಠ, ಈರಣ್ಣಾ ಗೋರಬಾಳ ಸೇರಿದಂತೆ ಅನೇಕರು ಇದ್ದರು.