This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಕುಡಿಯುವ ನೀರಿನ ಹೋರಾಟದಿಂದ ಮರಿಯಮ್ಮನಹಳ್ಳಿ ಪಟ್ಟಣ ಸ್ಥಭ್ದ : ಬಂದ್ ಯಶಸ್ವಿ


ಮರಿಯಮ್ಮನಹಳ್ಳಿ ಅ.೧೦ : ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಸೋಮವಾರ ಪಟ್ಟಣಕ್ಕೆ ಬಂದ್ ಕರೆ ಕೊಟ್ಟಿದ್ದರಿಂದ ಪಟ್ಟಣವು ಸಂಪೂರ್ಣವಾಗಿ ಸ್ಥಭ್ದವಾಗಿ ಸ್ವಯಂಪ್ರೇರಿತ ಬಂದ್ ಯಶಸ್ವಿಯಾಯಿತು.
ಪ್ರತಿಭಟಣಕಾರರು ಶ್ರೀ ಆಂಜನೇಯ ಸ್ವಾಮಿದೇವಸ್ಥಾನದಲ್ಲಿ ಜಮಾಹಿಸಿ ಮುಖ್ಯ ರಸ್ತೆಯಿಂದ ಘೋಶಣೆಗಳನ್ನು ಕೂಗುತ್ತಾ ಪಟ್ಟಣ ಪಂಚಾಯಿತಿವರೆಗೆ ಹೊರಟು ಪುಣ ಣಾರಾಯಣದೇವರ ಕೆರೆ ವೃತ್ತಕ್ಕೆ ಆಗಮಿಸಿ ನೀರಿನ ಹೋರಾಟದ ಬಗ್ಗೆ ಮೂಖಂಡರು ಮಾತನಾಡಿದರು. ಸ್ವಯಂಪ್ರೇರಿತ ಬಂದ್ ಹಮ್ಮಿಕೊಂಡಿದ್ದರಿಂದ ಪಟ್ಟಣದ ಎಲ್ಲಾ ವಾಣಿಜ್ಯ ವ್ಯಾಪಾರಗಳು ಸ್ಥಗಿತ ಗೊಂಡಿದ್ದವು, ಅಂಗಡಿಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು ಯಾವುದೇ ಅಹಿತಕರ ಘಟಣೆಗಳು ಸಂಭವಿಸಿರುವುದಿಲ್ಲ.
ತುಂಗಾಭದ್ರ ನದಿಯಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿರುವ ಪಾವಗಡಕ್ಕೆ ಪಟ್ಟಣದ ಮದ್ಯಭಾಗದಿಂದಲೇ ನೀರನ್ನು ತೆಗೆದುಕೊಂಡು ಗೋಗಲಾಗುತ್ತಿದೆ, ನಮ್ಮ ಕಣ್ಣ ಮುಂದೆ ಸ್ಥಾಪಿತವಾಗಿರುವ ಕಾರ್ಖಾನೆಗಳಿಗೆ ಶಾಶ್ವತವಾಗಿ ನೀರನ್ನು ಕೊಡಲಾಗಿದೆ, ಆದರೆ ನಮಗೆ ಕುಡಿಯಲಿಕ್ಕೆ ನೀರನ್ನು ಕೊಡದೇ ಅನ್ಯಾಯಮಾಡಲಾಗುತ್ತಿದೆ. ನಾವುಗಳು ಸುಮಾರು ೭೦ ವರ್ಷಗಳ ಹಿಂದೆ ಈಗಿನ ತುಂಗಾಭದ್ರ ನದಿಯ ಬಯಲಿನಲ್ಲಿ ಕೃಷಿಗಳನ್ನು ಮಾಡಿಕೊಂಡು ವಾಸವಿದ್ದಂತವರು ಆಗಿನ ಸಂದರ್ಭದಲ್ಲಿ ಆಣೆಕಟ್ಟನ್ನು ಕಟ್ಟಿ ನೀರನ್ನು ಹರಿಬಿಡಲಾಯಿತು ಆಗ ಎಲ್ಲವನ್ನು ಕಳೆದುಕೊಂಡು ಮರಿಯಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೆಲೆಯನ್ನು ಕಂಡುಕೊಂಡಿದ್ದೇವೆ. ನೀರಿಗಾಗಿ ಎಲ್ಲವನ್ನೂ ಬಿಟ್ಟು ಬಂದ ನಮಗೇ ನೀರಿಲ್ಲದಿರುವುದು ಎಂಥಾ ವಿಪರ್ಯಾಸ, ಈಗಲೂ ನಾವು ಶಾಶ್ವತ ನೀರಿಲ್ಲದೇ ಪರಿತಪಿಸುತ್ತಿದ್ದೇವೆ, ನಮ್ಮ ದುರ್ದೈವವೆಂದರೆ ಕಾರ್ಖಾನೆಗಳು ಸ್ಥಾಪನೆಯಾಗಿರುವುದರಿಂದ ಅದರಿಂದ ಹೊರಬಿಡುತ್ತಿರುವ ದೂಳು ನೇರವಾಗಿ ಪರಿಸರದಲ್ಲಿಸೇರಿ ಗಾಳಿಯೂಸಹ ಮಲಿನವಾಗಿದೆ ಕಾರ್ಖಾನೆಯ ದೂಳಿನ ಸೇವನೆಯಿಂದ ಅನಾರೋಗ್ಯಕ್ಕೆ ಈಡಾಗಿ ಈ ಊರನ್ನು ಸಹ ಬಿಟ್ಟು ಹೋಗುವಂತಹ ಪ್ರಸಂಗ ಎದುರಾಗಿದೆ, ಸರ್ಕಾರಕ್ಕೆ ನಾವು ಮನವಿ ಮಾಡುವುದಿಷ್ಟೆ ದೂಳಿನ ಸೇವನೆಯಿಂದ ಪ್ರಾಣ ಬಿಡುವ ಸ್ಥಿತಿ ಬಂದಿದೆ ಕನಿಷ್ಟ ಸ್ವಾಭಿಮಾನಕ್ಕಾದರೂ ಶಾಶ್ವತವಾಗಿ ಕುಡಿಯಲು ನೀರು ಕೊಡಿ ಅದನ್ನು ಕುಡಿದು ಜೀವ ಉಳಿಸಿಕೊಳ್ಳುತ್ತೇವೆ. ಸರರ್ಕಾರಗಳು ಹೀಗೇ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರೆ ಇನ್ನುಮುಂದೆ ಸಹಿಸಲು ಸಾಧ್ಯವಿಲ್ಲ ನಮ್ಮ ನೀರಿಗಾಗಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಹಿರಿಯರು ರಂಗ ಕಲಾವಿಧರಾದ ಎಂ.ಬಿ.ಸೋಮಣ್ಣ ಹೇಳಿದರು.
ಪಟ್ಟಣದಲ್ಲಿ ಫ್ಲೋರೈಡ್ ಯುಕ್ತ ನೀರು ಕುಡಿಯುತ್ತಿದ್ದೇವೆ ೭೦ವರ್ಷಕಳೆದರೂ ನೀರಿನ ಬವಣೆ ನೀಗುತ್ತಿಲ್ಲ ಸರರ್ಕಾಗಳು ಎಲ್ಲೋ ದೂರದ ಊರಿಗೆ ನೀರನ್ನು ಕೊಡುತ್ತಿವೆ ಪಕ್ಕದಲ್ಲೇ ಇದ್ದರೂ ನೀರು ಕೊಡಲು ತಾರತಮ್ಯ ಮಾಡಲಾಗುತ್ತಿದೆ, ನೀರು ಅತ್ಯಮುಲ್ಯ ಈ ಮೂಲಭೂತ ಸೌಕರ್ಯಗಳಲ್ಲೊಂದಾದ ನೀರು ಅಮರ್ಪಕವಾಗಿ ಒದಗಿಸದಿದ್ದರೆ ನಮಗೆ ಈ ಸರರ್ಕಾರಗಳು ಯಾಕೆ ಬೇಕು ಇದೇ ರೀತಿ ದೋರಣೆ ಅನುಸರಿಸಿದಲ್ಲಿ ಮುಂದಿನದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಗೋವಿಂದ ಪರುಶುರಾಮ ಹೇಳಿದರು.
ಸಚಿವರ ಭೇಟಿ: ಧರಣಿ ನಿರತ ಸ್ಥಳಕ್ಕೆ ಪರಿಸರ ಮತ್ತು ಜೀವೀಶಾಸ್ತ್ರ ಸಚಿವರಾದ ಆನಂದ್‌ಸಿಂಗ್ ಭೇಟಿನೀಡಿ ಈ ಹಿಂದಿನ ಸರಕಾರ ಈ ಪಟ್ಟಣವೂ ಕುಡಿಯುವ ನೀರಿನಿಂದ ವಂಚಿತವಾಗಿದೆ ಎಂದು ಅರಿತು ಯೋಜನೆಯನ್ನು ರೂಪಿಸುವಾಗ ಮರಿಯಮ್ಮನಹಳ್ಳಿ ಪಟ್ಟಣವನ್ನೂಸಹ ಸೇರಿಸಿ ಯೋಜನೆಯನ್ನು ರೂಪಿಸಬೇಕಿತ್ತು. ಆದರೆ ನಾನು ಈಗ ಭರವಸೆಕೊಡಲು ಇಚ್ಚಿಸುತ್ತೇನೆ ಈ ಪಾವಗಡ ಯೋಜನೆ ಪ್ರಾರಂಭ ಆಗೋಕು ಮುಂಚೆ ಮರಿಯಮ್ಮನಹಳ್ಳಿಗೆ ನೀರು ಕೊಟ್ಟೇ ಹೋಗಬೇಕು. ಇಲ್ಲವಾದಲ್ಲಿ ಪಾವಗಡಕ್ಕೆ ಒಂದು ಹನಿ ನೀರನ್ನೂ ಸಹ ಬಿಡಲ್ಲ. ಮರಿಯಮ್ಮನಹಳ್ಳಿಗೆ ಈ ಯೋಜನೆ ಪ್ರಾರಂಭವಾಗಿ ನೀರು ಕೊಡದೇ ನೀರನ್ನು ತೆಗೆದು ಕೊಂಡು ಹೋಗುತ್ತೇವೆ ಎಂದು ಯಾರಾದರೂ ದ್ವನಿ ಎತ್ತಿದಲ್ಲಿ ನಿಮ್ಮಹೋರಾಟಕ್ಕೆ ನಮ್ಮ ಬೆಂಬಲವಿರುತ್ತದೆ, ಕಾರ್ಯದರ್ಶಿ ಅಜಯ್ ನಾಗಭೂಷಣ್ ರವರೊಂದಿಗೆ ತಾಂತ್ರಿಕವಾಗಿ ಚರ್ಚೆಮಾಡಿದ್ದೇವೆ ಈಗಿರುವಂತಹ ಪೈಪ್‌ಲೈನ್‌ನಲ್ಲಿ ಕೊಡಲು ಸಾದ್ಯವಿಲ್ಲ ಬೃಹತ್ತಾದಾ ಹೆಚ್‌ಪಿ ಮೋಟಾರ್‌ಗಳಿರುವುದರಿಂದ ಸಾದ್ಯವಾಗುವುದಿಲ್ಲ ಅದೇ ಜಾಕ್‌ವಾಲ್‌ಅನ್ನು ಉಪಯೋಗ ಮಾಡಿಕೊಂಡು ಪ್ರತ್ಯೇಕವಾಗಿ ತರುವ ವ್ಯವಸ್ಥೆ ಮಾಡಲಾಗಿದೆ, ಆದಷ್ಟು ಬೇಗ ಒಂದು ಎರಡು ತಿಂಗಳಲ್ಲಿ ಡಿಪಿಆರ್ ಪಾರಂಭಿಸಲಾಗುವುದು ಇನ್ನೂ ಈ ಭಾಗದ ಹಳ್ಳಿಗಳನ್ನು ಕೈ ಬಿಟ್ಟಿದ್ದರೆ ಅವುಗಳನ್ನೂಸಹ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟಣಾ ಸ್ಥಳಕ್ಕೆ ಹೊಪೇಟೆಯ ತಾಹಶೀಲ್ದಾರರಾದ ವಿಶ್ವಜೀತ್ ಮೆಹೆತಾ ರವರು ಮನವಿ ಪತ್ರವನ್ನು ಸ್ವೀಕರಿಸಿ ೧೯-೦೯-೨೦೨೨ರಂದು ನಡವಳಿಕೆ ಆಗಿ ಕಾರ್ಯ ಪ್ರಗತಿಯಲ್ಲಿದೆ ತಾವು ಗಡುವುಕೊಟ್ಟಿರುವ ಸಮಯದಲ್ಲಿ ಆಗಬಹುದೆಂದು ಆಶಿಶುತ್ತೇನೆ, ಈ ನಿಮ್ಮ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಒ ಗಮನಕ್ಕೆ ತರುತ್ತೇನೆ ಎಂದರು.
ಹೆಚ್ಚಿನ ಭದ್ರತೆಗಾಗಿ ಕೂಡ್ಲೀಗಿಯ ಡಿವೈಎಸ್ಪಿ ಹರೀಶ್, ಕೂಡ್ಲೀಗಿ ಸಿಪಿಐ ವಸಂತ್ ಅಥೋಡೆ, ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚಾರೆಡ್ಡಿ, ಹಗರಿಬೊಮ್ಮನಹಳ್ಳಿ ಸಿಪಿಐ ಮಂಜಣ್ಣ, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತಪ್ಪ ತಳವಾರ್, ಪಿಎಸ್‌ಐ ಮೀನಾಕ್ಷಿ ಇವರ ನೇತೃತ್ವದಲ್ಲಿ ಮತ್ತು ಸಿಬ್ಬಂದಿಗಳೊಂದಿಗೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಬಂದೂಬಸ್ತ್ ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಗೋವಿಂದ ಪರುಶುರಾಮ, ಪ್ರದಾನ ಕಾರ್ಯದರ್ಶಿ ಚಿದ್ರಿ ಸತೀಶ, ಮಾಜಿ ಮಂಡಲ ಪಂಚಾಯಿತಿ ಅಧ್ಯಕ್ಷರು ವಿಶ್ವನಾಥ ಶೆಟ್ಟಿ, ಎನ್.ಸತ್ಯನಾರಾಯಣ, ನಾಗರತ್ನಮ್ಮ, ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷರಾದ ಎಲ್.ನಾಗರಾಜ್, ನಿರುತ್ತ ಆರ್.ಟಿ.ಓ ಪರಮೇಶ್ವರ, ಮುಖಂಡರಾದ ಬುಡೇನ್ ಸಾಬ್, ಬಿಎಮ್‌ಎಸ್ ಪ್ರಕಾಶ್, ಜಿ.ಎಂ.ಕೊಟ್ರೇಶ್, ತಳವಾ ಹುಚ್ಚಪ್ಪ, ಹೆಚ್.ಗೋಪಾಲ, ವಿ.ವಿಜಯ್‌ಕುಮಾರ್, ಪೂಜಾರ್ ಪ್ರಕಾಶ್, ಕೃಷ್ಣ ನಾಯ್ಕ, ಕಾಳಿ ಮಮಜುನಾಥ, ಗುಂಡಾ ಸೋಮಣ್ಣ, ತಳವಾರ್ ಸೋಮಶೇಖರ್, ದೊಡ್ಡ ರಾಮಣ್ಣ, ಕಟಿಗಿ ಲೋಕೇಶ್, ರವಿ, ಚುಕ್ಕಿ, ಗೌಳೇರ್ ನಾಗರಾಜ್, ಡಿ.ಮಂಜುನಾಥ, ಕೊಟ್ರೇಶ್ ಕಿಚಿಡಿ, ಹೆಚ್.ಈಶ್ವರ್, ಸೈಪುಲ್ಲಾ, ನಜೀರ್ ಸಾಬ್, ಸಮತಾ ಸೈನಿಕ ದಳ ಅಧ್ಯಕ್ಷರಾದ ಎಲ್.ಮಂಜುನಾಥ, ಉಪಾಧ್ಯಕ್ಷರಾದ ಮಾಂತೇಶ್ ದಾಸ್, ಹರಿಯಮ್ಮನವರ ರಮೇಶ, ಸಣ್ಣದುರುಗಪ್ಪ, ಘನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಆದಿಮನಿ ಹುಸೇನ್ ಬಾಷಾ, ಬೆಣಕಲ್ ಬಾಷಾ, ಪರುಶುರಾಮ್, ಸುರೇಶ್, ವಸಂತಕುಮಾರ್, ಮಂಜುನಾಥ, ರುದ್ರಾನಾಯ್ಕ, ಶರಗಾರ ನವೀನ್, ಎಂ ವೆಂಕಟೇಶ್, ಹಾಗೂ ಮಹಿಳೆಯರು, ಹೋರಾಟಗಾರರು, ಯುವಕರು ಸಾರ್ವಜನಿಕರು ಬಾಗವಹಿಸಿದ್ದರು.


Leave a Reply