Live Stream

September 2022
T F S S M T W
1234567
891011121314
15161718192021
22232425262728
2930  

| Latest Version 8.0.1 |

Local News

ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ : ಲೀಲಾವತಿ ಹಿರೇಮಠ


ಬೆಳಗಾವಿ: ಸೆ., -೨೧: ” ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಭಾರತದಲ್ಲಿ ಮಹಿಳೆಯರಿಗೆ ವಿಶೇಷ   ಸ್ಥಾನವಿದೆ. ಮಹಿಳೆಯರನ್ನು ಶಕ್ತಿ ದೇವತೆಯಾಗಿ ಕಾಣಲಾಗುತ್ತದೆ. ಮಹಿಳೆಯರು ಮೌಢ್ಯತೆಯದಾರಿ ತುಳಿಯದಿದ್ದರೆ ಶಾಂತಾದೇವಿ ಅವರಂತೆ ಸಾಧನೆ ಮಾಡಬಹುದಾಗಿದೆ ಎಂದು ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿಜರುಗಿದಗುರು ನಮನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ಮಕ್ಕಳ ಸವಾಂಗೀಣ ಪ್ರಗತಿ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಅವಲಂಬಿಸಿದೆ. ಹೀಗಾಗಿ ಮಹಿಳೆಯರು ಮಕ್ಕಳ ಪ್ರತಿ ಚಟುವಟಿಕೆಗಳ ಮೇಲೆ ನಿಯಂತ್ರಣಇಡಬೇಕು” ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ರಾ?ಪ್ರಶಸ್ತಿ ವಿಜೇತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ
ಮಾತನಾಡಿ
“ಭಾರತೀಯ ಪರಂಪರೆಯಲ್ಲಿ ಗುರುವಿಗೆದೇವರೆಂದು ಭಾವಿಸಿ ಗೌರವಿಸಲಾಗುತ್ತದೆ. ಶಿಕ್ಷಣವು ಮನುಷನ ವ್ಯಕ್ತಿತ್ವ ರೂಪಿಸಿ ಬದುಕನ್ನು ಸುಂದರ ಗೊಳಿಸುತ್ತದೆ. ಹೀಗಾಗಿ ಮಕ್ಕಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಮ್ಮದೇಶದ ರಾಷ್ಟ್ರ ಪತಿ ಸ್ಥಾನ ಪಡೆದರೂ ಡಾ. ರಾಧಾಕೃಷನ್‌ಅವರು ತಮ್ಮಜನ್ಮ ದಿನವನ್ನು ಶಿಕ್ಷಕರ ದಿನ ವನ್ನಾಗಿ ಆಚರಿಸಲು ತಿಳಿಸುವ ಮೂಲಕ ಸಮಸ್ತ ಗುರುಕುಲವನ್ನು ಗೌರವಿಸಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಶಿಕ್ಷಕರು ಶ್ರದ್ಧೆಯಿಂದತಮ್ಮಕರ್ತವ್ಯ ನಿರ್ವಹಿಸಿದರೆ ದೇಶದಅಭಿವೃದ್ಧಿ ಸಾಧ್ಯ” ಎಂದು ನುಡಿದರು.

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ ಶೈಲಾ ಪಾಟೀಲ ನೈನಾ ಗಿರಿಗೌಡರ ಆಶಾ ಪಾಟೀಲ್‌ಜ್ಯೋತಿ ಬದಾಮಿರತ್ನಾಝೋoಡ ಮಾಧುರಿಉಪ್ಪಿನ್ ಉಪಸ್ಥಿತರಿದ್ದರು ಕಾರ್ಯಕ್ರಮದಅಧ್ಯಕ್ಷತೆ ವೀಣಾಚೆನ್ನಣ್ಣವರ ವಹಿಸಿದ್ದರು.
ಸಂಗೀತಾ ಸುಲ್ತಾನಪುರೆಅವರ ಪ್ರಾರ್ಥನಯೊಂದಿಗೆಆರಂಭವಾದಕಾರ್ಯಕ್ರಮದಲ್ಲಿರಕ್ಷಾ ದೇಗಿನಾಳ ಶ್ವೇತಾಚನ್ನಣ್ಣವರ ಪರಿಚಯಿಸಿ ಸ್ವಾಗತಿಸಿದರು.
ಕಾರ್ಯದರ್ಶಿ ಗೀತಾಗುಂಡಕಲ್ಲೆ ನಿರ್ವಹಿಸಿದರು.


S K Muchalambi
the authorS K Muchalambi

Leave a Reply