ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯದಲ್ಲಿ ರಾಜ್ಯದಲ್ಲಿ ನಂಬರ್ 1: ಈ ವರ್ಷ 146.01 ಕೋಟಿ ರೂಪಾಯಿ ಗಳಿಕೆ

Ravi Talawar
WhatsApp Group Join Now
Telegram Group Join Now

ದಕ್ಷಿಣ ಕನ್ನಡ,ಏಪ್ರಿಲ್​ 08: ಜಿಲ್ಲೆಯ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂಪಾಯಿ ಆದಾಯ ಗಳಿಸಿದೆ. 2023 ಏಪ್ರಿಲ್​ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷವೂ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ ಮುಂದುವರೆದಿದೆ. ಕಳೆದ ವರ್ಷ ಶ್ರೀ ದೇವಳವು 123 ಕೋಟಿ ರೂ. ಆದಾಯ ಗಳಿಸಿತ್ತು.

ಹಲವು ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು ಈ ಬಾರಿ 146.01 ಕೋಟಿ ರೂ. ಆದಾಯ ಗಳಿಸುವ ಮೂಲಕ ಸತತವಾಗಿ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋಟದ ಉತ್ಪನ್ನದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿಯಿಂದ, ಹರಕೆ ಸೇವೆಗಳಿಂದ, ಅನುದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆಗಳಿಂದ ಆದಾಯ ಬರುತ್ತಿದೆ. ಶ್ರೀ ದೇವಳದಲ್ಲಿ ಆದಾಯದ ಒಟ್ಟು ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಉಳಿದಂತೆ ಸೇವೆ ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ಇದೀಗ ನಡೆಯುತ್ತಿದ್ದು, ಈ ಲೆಕ್ಕಾಚಾರವು ಇನ್ನೆರಡು ದಿನಗಳಲ್ಲಿ ದೊರಕಲಿದೆ.

2006-07ರಲ್ಲಿ ದೇವಳದ ಆದಾಯವು 19.76 ಕೋಟಿ ರೂ. ಆಗಿತ್ತು. 2007-08 ರಲ್ಲಿ 24.44 ಕೋಟಿ ರೂ.ಗಳಿಗೆ ಆದಾಯವು ಹೆಚ್ಚಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. ನಂತರದ ವರ್ಷಗಳಲ್ಲಿ ರಾಜ್ಯದ ನಂ.1 ದೇವಸ್ಥಾನವೆಂದು ಪರಿಗಣಿಸಲ್ಪಟ್ಟಿತು.

WhatsApp Group Join Now
Telegram Group Join Now
Share This Article