ಹೊಂದಾಣಿಕೆ ರಾಜಕೀಯ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಮತದಾರರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ : ಕಲ್ಲೋಳಿಕರ

Hasiru Kranti
WhatsApp Group Join Now
Telegram Group Join Now

ರಾಯಬಾಗ: ಬಿಜೆಪಿ ಮತ್ತು ಕಾಂಗ್ರೆಸ್‌ಎರಡು ರಾಷ್ಟ್ರೀಯ ಪಕ್ಷಗಳು ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಮತದಾರರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆಂದು ಚಿಕ್ಕೋಡಿ ಲೋಕಸಭೆಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಟೀಕಿಸಿದರು.
ಬುಧವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಮಾಯಕ್ಕಾದೇವಿ ದೇವಿ ದರ್ಶನ ಪಡೆದು, ಪ್ರಚಾರದಕರ ಪತ್ರಗಳಿಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿ ಮಾತನಾಡಿದಅವರು, ಕಳೆದ ೨೦೨೩ರ ವಿಧಾನಸಭೆಚುನಾವಣೆಯಲ್ಲಿ ಸೋಲುವ ಭಯದಲ್ಲಿಕಾಂಗ್ರೆಸ್ ಪಕ್ಷ ಕೆಲವೊಂದುಜನರು ಬೆಳಿಗ್ಗೆ ಒಂದು ಪಕ್ಷ ಮಾಡಿ, ರಾತ್ರಿ ಮತ್ತೊಂದು ಪಕ್ಷ ಮಾಡಿಕೊಂಡು ನಮ್ಮನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದರು. ಚಿಕ್ಕೋಡಿ ಲೋಕಸಭೆಚುನಾವಣೆಯಲ್ಲಿಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ, ಕ್ಷೇತ್ರದಜನರುತಮ್ಮಜಮೀನಉತಾರ ಸಲುವಾಗಿ ಬೆಳಗಾವಿ ಮತ್ತು ಗೋಕಾಕಗಳಿಗೆ ಅಲೆಯಬೇಕಾಗುತ್ತದೆಎಂದು ಪರೋಕ್ಷವಾಗಿ ಜಾರಕಿಹೊಳಿ ಕುಟುಂಬಕ್ಕೆಟಾಂಗ್ ನೀಡಿದರು.
ಕಾಂಗ್ರೆಸ್‌ನವರುಅಟೋರಿಕ್ಷಾಖಾಲಿಯಾಗಿದೆಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಆದರೆಇಂದು ಪ್ರಚಾರ ಸಭೆಯಲ್ಲಿ ಭಾಗಿಯಾದವರನ್ನು ನೋಡಿದರೆ ಅವರಿಗೆ ಗೊತ್ತಾಗುತ್ತದೆ ಅಟೋ ಖಾಲಿಯಾಗಿದಿಯೋ ಇಲ್ಲಾತುಂಬಿ ಓಡುತ್ತಿದಿಯೋ? ಎಂದು ಲೇವಡಿ ಮಾಡಿದರು.
ಚಿಕ್ಕೋಡಿ ಲೋಕಸಭೆಕ್ಷೇತ್ರದಲ್ಲಿ ಸ್ವಾತಂತ್ರ್ಯ ನಂತರ ನಡೆದಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವ ಉದಾರಣೆಗಳಿವೆ. ಈ ಬಾರಿತಮಗೆ ಬೆಂಬಲ ನೀಡಿ, ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಸಾವಿರಾರೂ ಸಂಖ್ಯೆಯಲ್ಲಿಕೂಡಿದ್ದ ಶಂಭು ಕಲ್ಲೋಳಿಕರ ಅವರು ಅಭಿಮಾನಿಗಳ ಮತ್ತುಕಾರ್ಯಕರ್ತರರೊಂದಿಗೆಚಿಂಚಲಿ ಪಟ್ಟಣದಲ್ಲಿರ‍್ಯಾಲಿ ನಡೆಸಿದರು.
ಪ್ರಚಾರ ಸಭೆಯಲ್ಲಿ ಧೂಳಗೌಡ ಪಾಟೀಲ, ಬಿ.ಎನ್.ಬಂಡಗರ, ಮುರಗೇಶಕೋಟಿವಾಲೆ, ಬಿ.ಎಮ್.ಮುಲ್ಲಾ, ರಾಜು ತಳವಾರ, ಕಿರಣ ಕಲ್ಲೋಳಿಕರ, ಮುಸಾ ಜಮಾದಾರ, ರಫೀಕ ಮುಲ್ಲಾ, ಕಾರ್ತಿಕ ಶಿರಹಟ್ಟಿ, ಮಹೇಶ ಹೊಸಮನಿ, ಮಹೇಶ ತಾಂವಶಿ, ಕುಂತಿನಾಥ ಮಗದುಮ್ಮ, ರಾಜು ಕಾಂಬಳೆ ಸೇರಿ ಸಾವಿರಾರೂಕಾರ್ಯಕರ್ತರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article