ಘಟಪ್ರಭಾ ಆ., 07- ಇಲ್ಲಿನ ಪ್ರತಿಷ್ಠಿತ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸಾಯಟಿ ನಿ.ಘಟಪ್ರಭಾ ಇದರ ಐದು ವರ್ಷಗಳ ಅವದಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮೊದಲು ನಾಲ್ಕು ಜನರು ಅವಿರೋಧವಾಗಿ ಆಯ್ಕೆಯಾಗಿ ಉಳಿದ ಒಂಬತ್ತು ಸ್ಥಾನಗಳ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಓಂ ಸಹಕಾರಿ ಪೆನಲ್ ನ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ್ತು ವಿರೋಧಿಗಳಾಗಿ ಸ್ಪರ್ದಿಸಿದ್ದ ಗುರುಸಿದ್ದೇಶ್ವರ ಸಹಕಾರಿ ಪೆನಲ್ ಸದಸ್ಯರು ಪ್ರಥಮ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಅಜೀವ ಸದಸ್ಯತ್ವ ಸಾಮಾನ್ಯ ಮತಕ್ಷೇತ್ರದಿಂದ ಅರ್ಜುನ ಅಪ್ಪಣ್ಣ ಕರಲಿಂಗನವರ,ಅನೀಲ ಈರಗೌಡ ನೇರ್ಲಿ,ಅಪ್ಪಯ್ಯ ಶಿವಪ್ಪ.ಬಡಕುಂದ್ರಿ, ಚೆನ್ನಪ್ಪ ಬಾಳಪ್ಪ.ಸನದಿ,ಮಲ್ಲಿಕಾರ್ಜುನ ಅವ್ವನಗೌಡ.ಪಾಟೀಲ, ಅಣ್ಣಪ್ಪ ಬಾಳಪ್ಪ.ತಳವಾರ/ಮಾದರ,ಇವರುಗಳು ಚುನಾತರಾದರೆ.ಅಜೀವ ಸದಸ್ಯತ್ವ ಮಹಿಳಾ ಮತಕ್ಷೇತ್ರದಿಂದ ಶ್ರೀಮತಿ ಶಾಶಾದೇವಿ ಮೋಹನ.ಕತ್ತಿ,ಶ್ರೀಮತಿ ಮಹಾನಂದಾ ಅಶೋಕ.ಕುಂದರಗಿ,ಸಾಮಾನ್ಯ ವರ್ಗ ಮತಕ್ಷೇತ್ರದಿಂದ ಚಂದ್ರಶೇಖರ ಅಪ್ಪರಾಯ.ಕಾಡದವರ ಇವರು ಚುನಾಯಿತರಾದರೆ,ಈ ಹಿಂದೆ ಪೋಷಕ ಮಹಾಪೋಷಕ,ಆಶ್ರಯದಳ ಮತಕ್ಷೇತ್ರದಿಂದ ಅದ್ಯಕ್ಷರಾದ ಬಸಗೌಡ ರಾಮಗೌಡ.ಪಾಟೀಲ,ಅಜೀವ ಸದಸ್ಯತ್ವ ಪರಿಶಿಷ್ಟ ಡ ವರ್ಗದಿಂದ ಶಂಕರ ಸೋಮಪ್ಪ.ದಳವಾಯಿ,ಸಹಕಾರಿ ಸಂಘಗಳ ಡ ವರ್ಗದಿಂದ; ರಾಜಾರಾಮಶಿರಾಳಕರ ಮತ್ತು ಶಿವನಗೌಡ ಶಂಕರಗೌಡ ಪಾಟೀಲ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು ಎಂದು ಚುನಾವಣಾ ಅಧಿಕಾರಿ ಮನಿ ಎಮ್.ಎನ್ ತಿಳಿಸಿದ್ದಾರೆ.
ಈ ಭರ್ಜರಿ ಗೆಲುವಿನ ಸಂಭೃಮದಲ್ಲಿ ಅಲೈನ್ಸ ಕ್ಲಬ್ ಅದ್ಯಕ್ಷರಾದ ಗಂಗಾಧರ ಬಡಕುಂದ್ರಿ,ಸಹಕಾರಿ ಮುಖಂಡರಾದ ಸುನೀಲ ನೇರ್ಲಿ,ಅಶೋಕ ಚಂದಪ್ಪಗೋಳ ಸೇರಿದಂತೆ ರಾಜಕೀಯ ಮುಖಂಡರು, ಸಹಕಾರಿ ದುರೀಣರು ಪಾಲ್ಗೊಂಡಿದ್ದರು .