ನೇಹಾ ಕೊಲೆ ಪ್ರಕರಣ ಖಂಡಿಸಿ ಬೇಡ ಜಂಗಮ ಮಹಾಸಭಾ ಪ್ರತಿಭಟನೆ

Ravi Talawar
WhatsApp Group Join Now
Telegram Group Join Now
ಕುಕನೂರು,23: ಪಟ್ಟಣದಲ್ಲಿ ಹುಬ್ಬಳ್ಳಿ ನಗರದಲ್ಲಿ ಇತ್ತೀಚೆಗೆ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಮಹಾಸಭಾ ಹಾಗೂ ಸಮಸ್ತ ನಾಗರೀಕರ ಸಂಯುಕ್ತಾಶ್ರಯದಲ್ಲಿ ನೇಹಾ ಕೊಲೆಯ ಆರೋಪಿ ಫಯಾಜ್‌ನ್ನು ಎನ್‌ಕೌಂಟರ್‌ನಲ್ಲಿ ಮುಗಿಸಬೇಕು ಅಥವಾ ಗಲ್ಲು ಶಿಕ್ಷೆಯಾಗಬೇಕೆಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
 ಬೇಡ ಜಂಗಮ ಸಮಾಜದ ತಾಲೂಕಾಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಆವರಣದಲ್ಲಿ ಹಾಡುಹಗಲೇ ನೇಹಾ ಹಿರೇಮಠ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಫಯಾಜ್‌ನು ಹತ್ಯೆ ಮಾಡಿದ್ದಾನೆ. ನೇಹಾಗೆ ಒಂಬತ್ತು ಬಾರಿ ಚಾಕುವಿನಿಂದ ಹಿರಿದು ಇದು ಮಾನವರು ತಲೆ ತಗ್ಗಿಸುವಂತಹ ಕೊಲೆಯಾಗಿದೆ.
ನೇಹಾಳ ಪಾಲಕರಿಗೆ, ರಾಜ್ಯದ ಜನರಿಗೆ ಈ ಘಟನೆ ತುಂಬಾ ನೋವು ತರಿಸಿದೆ. ಇಂತಹ ಘಟನೆಗಳು ಯಾವ ಹೆಣ್ಣುಮಕ್ಕಳಿಗೂ ಹಾಗೂ ಪಾಲಕರಿಗೂ ಆಗಬಾರದು ಇದೆ ಕೋನೆಯದಾಗಬೇಕಾದರೆ ಆರೋಪಿತನಿಗೆ ಕೊಡಲೆ ಪೋಲಿಸ್‌ರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಬೇಕು ಇಲ್ಲದಿದ್ದರೆ ಗಲ್ಲು ಶಿಕ್ಷೆಯನ್ನು ನೀಡಬೇಕು. ಆರೋಪಿತನಿಗೆ ಶಿಕ್ಷೆಯನ್ನು ನೀಡದಿದ್ದರೆ ಸಂಘಟನೆಗಳಿಂದ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದರು.
ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಮೂಲಕ ವೀರಭದ್ರಪ್ಪ ವೃತ್ತದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ, ದಳಪತಿ ವೀರಯ್ಯ ತೊಂಟದಾರ್ಯಮಠ, ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ನಗರ ಘಟಕದ ಅಧ್ಯಕ್ಷ ರೇಹಮಾನಸಾಬ ಮಕ್ಕಪ್ಪನವರ್, ರಶೀದಸಾಬ ಹಣಜಗಿರಿ, ರಶೀದಸಾಬ ಮುಭಾರಕ್, ವಜೀರಸಾಬ ತಳಕಲ್, ದೇವಪ್ಪ ಸೊಭಾನದ್, ಮಲ್ಲಿಕಾರ್ಜುನ್ ಕುಡ್ಲೂರು, ಶರಣಯ್ಯ, ಮಲ್ಲಪ್ಪ ಗುತ್ತಿ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಬಸವರಾಜ ಮಂಡಲಗೇರಿ, ಬಸವನಗೌಡ ಮಾಲಿಪಾಟೀಲ್, ಕುಮಾರಸ್ವಾಮಿ ಹಿರೇಮಠ, ಸದಾಶಿವಯ್ಯ ಅರಕೇರಿಮಠ, ಸಿದ್ದಲಿಂಗಯ್ಯ ಚೌಡಿಮಠ, ರಾಜಶೇಖರಯ್ಯ ಶಿರೂರಮಠ, ಕಲ್ಲಯ್ಯ ಹಿರೇಮಠ, ವಿಶ್ವನಾಥ ಕೆಂಬಾವಿಮಠ, ಶೇಖರಯ್ಯ, ಗುದ್ನೇಯ್ಯ, ಮುತ್ತಯ್ಯ, ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article