ಜಾನುವಾರು ಸಂಪತ್ತನ್ನು ಅಪತ್ತಿಗೆ ತಂದಿರುವ ರಾಜ್ಯ ಸರ್ಕಾರ: ಜಗದೀಶ ಬೂದಿಹಾಳ  

Ravi Talawar
WhatsApp Group Join Now
Telegram Group Join Now
ಬೆಳಗಾವಿ04: ರಾಜ್ಯದಲ್ಲಿ‌ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೊಸ ಮಾಡುವದರೊಂದಿಗೆ ಜಾನುವಾರಗಳಿಗೂ ವಂಚಿಸುತ್ತಿರುವದು ದುರದೃಷ್ಟಕರ ಇದರಿಂದ ಪಶು ಸಂಪತ್ತು ಆಪತ್ತಿನಲ್ಲಿದೆ ಎಂದು ಗ್ರಾಮಾಂತರ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ ಕಳವಳ ವ್ಯಕ್ತಪಡಿಸಿದ್ದಾರೆ.
 ಶನಿವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ 1 ಕೋಟಿ 15 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು,1 ಕೋಟಿ 72 ಲಕ್ಷ ಚಿಕ್ಕ ಜಾನುವಾರುಗಳಿವೆ ಇವುಗಳ ಸಂರಕ್ಷಣೆಯನ್ನು ಮಾಡುವಲ್ಲಿ ಕಾಂಗ್ರೆಸ್ ಸರ್ಕಾರವು ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ.
2023-24ರಲ್ಲಿ ಕರ್ನಾಟಕ ರಾಜ್ಯದ 196 ತಾಲ್ಲೂಕುಗಳು  ತೀವ್ರ ಬರಕ್ಕೆ ಒಳಗಾಗಿದ್ದು ಮತ್ತು 27 ತಾಲ್ಲೂಕುಗಳು ಸಾಧಾರಣ ಬರಕ್ಕೆ ಒಳಗಾಗಿವೆ ಎಂದು ಸರ್ಕಾರ ಘೋಷಿಸಿತ್ತು. ಪ್ರಮುಖ ಜಾನುವಾರುಗಳಿಗೆ ಪ್ರತಿದಿನ 6 ಕೆ.ಜಿ ಒಣ‌ ಮೇವಿನ ಅವಶ್ಯಕತೆಯಿದ್ದು, ಚಿಕ್ಕ ಜಾನುವಾರುಗಳಿಗೆ ( ಕುರಿ ಮತ್ತು ಆಡು) 1/2 ಕೆ.ಜಿ ಒಣ ಮೇವು ಅವಶ್ಯಕತೆಯಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದ್ದ  ರಾಜ್ಯ ಸರ್ಕಾರ, ಹಸಿರು‌ ಮೇವನ್ನು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ನೀಡಲಾಗಿದೆ. ಎಂದು ಸರ್ಕಾರ ಹೇಳುತ್ತಿದೆ.
ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಹಸಿರು ಮೇವನ್ನು ಬೆಳೆಯಲು ಗ್ರಾಮಗಳಲ್ಲಿರುವ ಗೋಮಾಳಗಳನ್ನು ಮತ್ತು ಖಾಲಿ ಜಾಗಗಳನ್ನು ಗುರುತಿಸಬೇಕಿತ್ತು, ಕೆರೆ ಮತ್ತು ನದಿ ಪಾತ್ರಗಳಲ್ಲಿ ಜಾಗವನ್ನು  ಗುರುತಿಸಿ ಹಸಿರು ಮೇವನ್ನು ಬೆಳೆಯಬೇಕಿತ್ತು. ಈ ಯೋಜನೆಯು ಅನುಷ್ಠಾನವಾಗಿ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
 ಮಿನಿ ಕಿಟ್ ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕು ಎಂಬ ಮಾರ್ಗ ಸೂಚಿಯನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ.
 ಜಾನುವಾರುಗಳ ಆರೋಗ್ಯವನ್ನು ಮತ್ತು ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ಮಾರುವುದನ್ನು ತಪ್ಪಿಸಲು ಜಾನುವಾರುಗಳಿಗೆ  ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಬೇಕಿತ್ತು.ಹಗಲು ಮತ್ತು ರಾತ್ರಿ ಜಾನುವಾರುಗಳಿಗೆ ಮೇವು, ಆಹಾರ ,ನೀರು ,ವಸತಿ ಮತ್ತು ಆರೋಗ್ಯವನ್ನು ನೀಡಲು ಪ್ರತಿ 50,000/-  ಜಾನುವಾರುಗಳ  ಸಂಖ್ಯೆಗೆ ಶಿಬಿರಗಳನ್ನು ಆರಂಭಿಸಬೇಕಿತ್ತು . ರಾಜ್ಯದಲ್ಲಿ 460  ಜಾನುವಾರುಗಳ ಶಿಬಿರಗಳ ಅವಶ್ಯಕತೆಯಿದ್ದು ಎಷ್ಟು ಜಿಲ್ಲೆಗಳಿಲ್ಲಿ ವಸತಿ ಶಿಬಿರ ಗಳನ್ನು ಆರಂಭಿಸಿದ್ದಾರೆ ಎಂಬುವುದನ್ನು ಮಾನ್ಯ ರಾಜ್ಯ ಸರ್ಕಾರದ ಜವಾಬ್ದಾರಿತ ಮುಖ್ಯಮಂತ್ರಿಗಳು ಕರ್ನಾಟಕದ ಜನರಿಗೆ ತಿಳಿಸಬೇಕಾಗಿದೆ.
ರಾಜ್ಯದ 713 ಹೋಬಳಿಗಳಲ್ಲಿ ಮೇವು ಬ್ಯಾಂಕುಗಳು, ಡಿಪೋಗಳು ಇಲ್ಲಾ.  ಈ ಯೋಜನೆಯ ವಿಫಲತೆ ಮುಗ್ದ ಜಾನುವಾರುಗಳಿಗೆ ಕಾಂಗ್ರೆಸ್ ಸರ್ಕಾರ ಮಾಡಿರುವ ದ್ರೋಹ.
ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಚುಚ್ಚುಮದ್ದುಗಳು, ಪ್ರತಿ ಜೀವಕ ಔಷಧಿಗಳು ಮತ್ತು ಇತರೆ ಔಷಧಿಗಳನ್ನು ಸರಿಯಾದ  ರೀತಿಯಲ್ಲಿ ರೈತರಿಗೆ ತಲುಪಿಸಿಲ್ಲ ಪಶು ಇಲಾಖೆಯಲ್ಲಿ ಅತ್ಯವಶ್ಯಕ ಔಷಧಿಯೆ ಇಲ್ಲಾ. ಜಾನುವಾರುಗಳಿಗೆ ಪೂರಕ ಪೋಷಣ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ಇರುವುದರಿಂದ ಕಳಪೆ ಸಂತಾನೋತ್ಪತ್ತಿ ಆಗುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಸಂತತಿ ಕಡಿಮೆಯಾಗುವ ಸಾಧ್ಯತೆ ಇದೆ. ಈ ಆರೋಪಕ್ಕೆ ಸರ್ಕಾರ ಉತ್ತರಿಸಬೇಕಾಗಿದೆ.
12.05 ಲಕ್ಷ ಕಿರು ಮೇವು ಕಿಟ್  ಗಳನ್ನು ನೀರಾವರಿ ಪ್ರದೇಶಗಳಿಗೆ ನೀಡಲು ರಾಷ್ಟ್ರೀಯ ಮತ್ತು ರಾಜ್ಯ ಪ್ರತಿಕ್ರಿಯೆ ನಿಧಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಆದರೆ ಯಾರಿಗೆ ಕಿಟ್ ಗಳನ್ನು ವಿತರಿಸಿದ್ದಾರೆ ಎಂಬುದನ್ನು ರೈತರಿಗೆ ತಿಳಿಸಬೇಕಾಗಿದೆ. ಜಿಲ್ಲಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ರೈತರಿಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಲು ವಿಫಲವಾಗಿದ್ದಾರೆ ಎಂದು ಕಂಡುಬರುತ್ತಿದೆ. ಇಲಾಖೆ ವತಿಯಿಂದ ರಾಜ್ಯದಲ್ಲಿ ಎಷ್ಟು ಮಾಹಿತಿ ಮತ್ತು ಜಾಗೃತಿ ಶಿಬಿರಗಳನ್ನು ಏರ್ಪಡಿಸಿದ್ದಾರೆ? ಪಶು ಸಂಗೊಪನಾ ಸಚಿವರೆ, ಮುಖ್ಯಮಂತ್ರಿಗಳೆ ತಮ್ಮ ವ್ಯಾಪ್ತಿಯಲ್ಲಿ ಬರುವ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಣೆಯನ್ನು ಮಾಡದೆ  ರಾಜ್ಯದ ಮುಗ್ಧ ಜೀವಿಗಳಿಗೆ ದ್ರೋಹ ಬಗೆಯುವ ಮೂಲಕ ರಾಜ್ಯದ ಬಹು ಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article