This is the title of the web page
Left Banner (Left Skyscraper)
Right Banner (Right Skyscraper)

ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಏಕ ಕಾಲದಲ್ಲಿ ಸಾವಿರಾರು ಜನ ಯೋಗಾಭ್ಯಾಸದಲ್ಲಿ ಭಾಗಿ

0 41

ಮೂಡಲಗಿ ಜೂ.21: ಸಾವಿರಾರು ವರ್ಷಗಳ ಹಿಂದೆಯೇ ಪ್ರಪಂಚಕ್ಕೆ ಯೋಗವನ್ನು ಕೊಟ್ಟದ್ದು ನಮ್ಮ ಭಾರತದ ಪತಂಜಲಿ ಮಹರ್ಷಿಗಳು. ಯೋಗ ಮಾಡುವದರಿಂದ ದೇಹದಲ್ಲಿ ಇರತಕ್ಕಂತಹ ರೋಗಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿದೆ, ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಪ್ರೊ. ಆಯ್.ಆರ್. ಮಠಪತಿ ಹೇಳಿದರು.


ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಹಾಗೂ ತಾಲೂಕಾ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ, ಮಂಜುನಾಥ ಸೈನಿಕ ತರಭೇತಿ ಕೆಂದ್ರ, ಲಯನ್ಸ ಪರಿವಾರ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಹವಿದ್ಯಾಲಯದ ಆವರಣದಲ್ಲಿ ಜರುಗಿದ ಅಂತಾರಾಷ್ಟ್ರೀಯ 8ನೇ ಯೋಗಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗವನ್ನು ವಿಶ್ವವ್ಯಾಪ್ತಿಯಾಗಿ ಪ್ರಚಾರ ಪಡೆಯಲು ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಣ, ಪ್ರತಿಯೋಬ್ಬರು ಯೋಗವನ್ನು ಮೈಗೂಡಿಸಿಕೊಂಡು ಶಾರೀರಿಕ ವಿಕಸನ ಮಾಡಿಕೊಳ್ಳಬೇಕೆಂದರು.
ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ವಿಶಾಲ ನಿಂಬಾಳ್ಕರ ಅವರು ವಿಶೇಷವಾದ ಯೋಗ ಪ್ರದರ್ಶನವನ್ನು ನೀಡಿದರು.ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡು ಯೋಗ ಮಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲಕರ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿಎಸ್ಐ ಎಚ್.ವಾಯ್.ಬಾಲದಂಡಿ ಇದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ.ಶಾಸ್ತ್ರೀಮಠ ಸ್ವಾಗತಿಸಿದರು, ಪ್ರೊ.ಎಸ್.ಎಲ್.ಚಿತ್ರಗಾರ ನಿರೂಪಿಸಿದರು

You might also like
Leave a comment