ಇಂಡಿ ಜನತೆಯ ಬಹುದಿನಗಳ ಆಸೆಯಂತೆ ನಮ್ಮ ನಾಡಿನ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರಗಳೊಂದಾದ ಧರ್ಮಸ್ಥಳಕ್ಕೆ ಇಂಡಿಯಿoದ ನೂತನ ಬಸ್ನ್ನು ಹಸಿರು ನಿಶಾಣೆ ತೋರಿಸುವದರೊಂದಿಗೆ ಯಶವಂತರಾಯಗೌಡ ಪಾಟೀಲರ ಶಾಸಕರು, ಚಾಲನೆ ನೀಡಿದರು, ಇಂಡಿ ತಾಲೂಕಿನ ಜನತೆ ಸದರಿ ಬಸ್ಸಿನಲ್ಲಿ ಪ್ರಯಾಣಿಸಿ ಪುಣ್ಯಕ್ಷೇತ್ರ ದರ್ಶನ ಪಡೆಯಲು ವಿನಂತಿಸಿದರು ಸದರಿ ಬಸ್ಸ್ ಮದ್ಯಾಹ್ನ 2-00 ಗಂಟೆಗೆ ಬಿಟ್ಟು ಮರುದಿನ ಬೆಳಿಗ್ಗೆ 9-00 ಗಂಟೆಗೆ ತಲುಪುವದು ಅಲ್ಲಿಂದ ಮದ್ಯಾಹ್ನ 2-30 ಗಂಟೆಗೆ ಬಿಟ್ಟು ಮರುದಿನ ಬೆಳಿಗ್ಗೆ 8-00 ಗಂಟೆಗೆ ತಲಪುವುದೇಂದು, ಡಿ.ಟಿ.ಬಾ ಡಿ.ಎ.ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸಂಗನಗೌಡ ಬಿರಾದಾರ, ಜಾವೀಧ ಮೋಮಿನ್, ಭೀಮುಅಣ್ಣಾ ಕೌಲಗಿ, ಸುಭಾಶ ಬಾಬರ, ಪ್ರಶಾಂತ ಕಾಳೆ, ಶಿವಯೋಗಪ್ಪ ಜ್ಯೋತಗೊಂಡ, ಜೀತಪ್ಪ ಕಲ್ಯಾಣ, ಹಲವಾರು ಮುಖಂಡರು ಹಾಗೂ ನಿಂಗಪ್ಪ ಕೌಲಗಿ ವಾಹನ ಚಾಲಕರು ಉಪಸ್ಥಿತರಿದ್ದರು.
ಇಂಡಿಯಿoದ ಧರ್ಮಸ್ಥಳ ನೂತನ ಬಸ್ ಉದ್ಘಾಟನೆ

Leave a comment
Leave a comment