ಅಡು ಸಾಕಾಣಿಕೆ ಕೇಂದ್ರದ ಉದ್ಘಾಟನಾ ಸಮಾರಂಭ.

Abushama Hawaldar
WhatsApp Group Join Now
Telegram Group Join Now

ಇoಡಿ : ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸುಮಾರು ೧ ಕೋಟಿ ರೂಪಾಯಿ ರಾಷ್ಟೀಯ  ಜಾನುವಾರ ಮಿಷನ್ ಅನುದಡಿಯಲ್ಲಿ ಆಡು ಸಾಕಾಣಿಕೆ ಕೇಂದ್ರವನ್ನು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅನುದಾನ ಪಡೆದು ನಮ್ಮ ರೈತರು ಆರ್ಥಿಕವಾಗಿ ಪ್ರಭಲಗೊಳ್ಳಬೇಕು ಅಂದಾಗ ಸರ್ಕಾರದ ಹೋಣೆ ಕಡಿಮೆಗೊಳಿಸಲು ಸಾಧ್ಯ ಎಂದರು, ಈ ಯೋಜನೆಯು ಎಲ್ಲಾ ಸಮುದಾಯದವರಿಗು ೧ ಕೋಟಿ ಅನುದಾನದಲ್ಲಿ ೫೦% ಪ್ರತಿಷತ್ ಸಬ್ಸಿಡಿ ನಿಡಿದ್ದು ಇಂತಹ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸುಧಾರಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಬೇಕು, ಈ ಯೋಜನೆಯ ಮೂಖ್ಯ ಉದ್ದೇಶ ಎಂದರೆ ಥಳಿಯ ಸಂವರ್ಧನೆ ಮತ್ತು ಸಾವಯವ ಗೊಬ್ಬರ ತಯಾರಿಸಬಹುದು, ಇದರಿಂದ ಹಲವಾರು ರೀತಿಯಲ್ಲಿಉತ್ಪಾದನೆ ಸಾಧ್ಯ ಎಂದರು.

ಅoಜುಟಗಿ ಗ್ರಾಮದ ರೈತರಾದ ರಾಯಪ್ಪ ಹರಳಯ್ಯ ಇವರು ಸುಮಾರು ದಿನಗಳಿಂದ ಈ ಯೋಜನೆ ಪಡೆಲು ಅಂತರಜಾಲದಲ್ಲಿ ಅರ್ಜಿ ಸಲ್ಲಿಸಿ, ಎಲ್ಲಾ ರಿತಿಯ ಸರ್ಕಾರಿ ದಸ್ತಾವೇಜುಗಳನ್ನು ಪರಿಶಿಲಿಸಿ ಇವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ನಿರ್ದೆಶಕರು ಪಶು ಸಂಗೋಪನಾ ಇಲಾಖೆಯ ಡಾ. ಬಿ.ಎಚ್.ಕನ್ನೂರ ಈ ಸಂದರ್ಬದಲ್ಲಿ ಮಾತನಾಡಿದರು.
ಸರ್ಕಾರದಿಂದ ಅನುದಾನ ಪಡೆಯಲು ಈ ಯೋಜನೆಗೆ ಸುಮಾರು ೬ ಎಕ್ಕರೆ ಜಮೀನು ಹೊಂದಿರಬೇಕು, ಈ ಯೋಜನೆಯಲ್ಲಿ ೫೦೦ ಹೆಣ್ಣು, ೨೫ ಗಂಡು ಆಡುಗಳನ್ನು ಸಾಕುವಷ್ಟು ಸೆಡ್ಡ ನಿರ್ಮಾಣ ಮಾಡಬೇಕು, ಈ ಯೋಜನೆ ರಾಷ್ಟೀಯ ಜಾನುವಾರ ಮಿಷನ್ ಮೂಲಕ ಯೋಜನೆ ಅನುದಾನ ವಿತರಿಸಲಾಗುವುದು, ತಳಿ ಸುಧಾರಣೆ ಮೂಲಕ ಪ್ರತಿ ಪ್ರಾಣೀ ಉತ್ಪಾದನೆಯ ಹೆಚ್ಚಳ, ಮಾಂಸ, ಮೇಕೆ ಹಾಲು ಉಣ್ಣೆ ಮತ್ತು ಮೇವಿನ ಉತ್ಪಾದನೆ ಹೆಚ್ಚಳ, ಈ ಯೋಜನೆಗಳ ಮುಖ್ಯ ಉದ್ದೇಶ, ಇಂತಹ ಹಲವಾರು ಯೋಜನೆಗಳು ಸರ್ಕಾರ ನಮ್ಮ ರೈತರಿಗೆ ನೀಡಿದ್ದು ಇವುಗಳನ್ನು ಸರಿಯಾದ ರಿತಿಯಲ್ಲಿ ಸದುಪಯೋಗ ಪಡೆದುಕೊಂಡಾಗ ನಮ್ಮ ರೈತರು ಆರ್ಥಿಕವಾಗಿ ಸುಧಾರಣೆ ಹೊಂದುವದರಲ್ಲಿ ಸಂದೇಹವಿಲ್ಲ ಎಂದರು.
ಈ ಸಂದರ್ಬದಲ್ಲಿ ಪಶು ವೈದ್ಯಾಧಿಕಾರಿ ಡಾ. ಸುಧೀರ ನಾಯಕ, ನಾಡ ಕಛೇರಿಯ ಉಪ ತಹಶೀಲ್ದಾರ ಎ.ಎಸ್.ಗೋಫಟ್ಯಾಳ, ರುದ್ರವಾಡಿ ಸರ್, ವಿಜಯಪುರ ಜಿಲ್ಲಾ ಕಾಂಗ್ರೆಸ ಎಸ್.ಟಿ.ಘಟಕದ ಅಧ್ಯಕ್ಷರು ಸಣ್ಣಪ್ಪ ತಳವಾರ, ಶಬಿರ ಮುಲ್ಲಾ, ರಾಜಶೇಖರ ಕಾಂಬಳೆ, ರಯಗೊಂಡ ರಗಟೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article