ಬಳ್ಳಾರಿ : ನಗರದ ವೆಂಕಟ ವರದಚಾರ್ಯ ಸೇವಾ ಸಮಿತಿಯಿಂದ ಐವತ್ತಕ್ಕು ಹೆಚ್ಚು ಬೀದಿ ಬದಿ ವ್ಯಾಪಾರಿ ಮತ್ತು ಕೂಲಿ ಕಾರ್ಮಿಕ ಮಹಿಳೆಯರಿಗೆ ದಿನಸಿ ಕಿಟ್ ವಿತರಿಸಲಾಯಿತು.
ದೇಶದಲ್ಲೆಡೆ ದಸರಾ ಹಬ್ಬ ಮನೆಮಾಡಿದ್ದು.
ಜನರು ತಮ್ಮ ಶಕ್ತಿಗನುಗುಣವಾಗಿ, ವಿಜಯ ದಶಮಿ ದಸರಾ ಹಬ್ಬವನ್ನ ಸಂಭ್ರಮಿಸುತ್ತಿದ್ದಾರೆ.

ಬೀದಿ ಬದಿ ವ್ಯಾಪರಿಗಳು, ಕೂಲಿಕಾರ್ಮಿಕ ಮಹಿಳೆಯರು ಸಹ ಸಂಭ್ರಮದಿಂದ ಹಬ್ಬ ಆಚರಿಸಲಿ ಎಂದು ಹಬ್ಬದೂಟಕ್ಕೆ ಬೇಕಾಗುವ ದಿನಸಿ ಮತ್ತು ಮಹಿಳೆಯರಿಗೆ ಅರಿಶಿಣ, ಕುಂಕುಮ ಹೂವು ಸೇರಿದಂತೆ ಬ್ಲೌಸ್ ಪೀಸ್ ನೀಡುವ ಮೂಲಕ ದೀರ್ಘ ಸುಮಂಗಲಿ ಭವ ಎಂದು ಆಶಿಸುವ ಸಲುವಾಗಿ ಟ್ರಸ್ಟ್ ಅಧ್ಯಕ್ಷ್ಯರಾದ, ತಲ್ಲಂ ವೆಂಕಟೇಶಲು ಶೆಟ್ಟಿ ಅವರ ನೇತೃತ್ವದಲ್ಲಿ ಟ್ರಸ್ಟ್ನ ಮಹಿಳಾ ಸದಸ್ಯರು ಪದಾಧಿಕಾರಿಗಳು. “ದಸರಾ ವೈಭವ” ಆಯೋಜಿಸಿದ್ದರು
ಕ್ರಮದ ಮೂಲಕವ, ಕಾರ್ಮಿಕ ಮಹಿಳೆಯರಿಗೆ.ಬೆಲ್ಲ, ಅಕ್ಕಿ ಎಣ್ಣೆ. ಮೈದಾ ಹಿಟ್ಟು ಸೇರಿದಂತೆ. ಹೆಣ್ಣು ಮಕ್ಕಳಿಗೆ, ಬಳೆ ಕುಂಕುಮ. ಅರಿಶಿಣ ಬ್ಲೌ ಸ್ ಪೀಸ್. ಕಿಟ್ ನೀಡುವ ಮೂಲಕ, ವಿನೂತನ ಮಾದರಿ ಕಾರ್ಯಕ್ರಮ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ, ಅಪೂರ್ವ, ಸುಮಾ ರೆಡ್ಡಿ, ಸೈಲಜಾ ಸುರೇಶ್, ಜಯ, ವನಜಾ, ಭಾರತಿ, ಸುನೀತಾ, ಕವಿತಾ, ಪದ್ಮಾ, ರೂಪಾ, ಸುಮಾ, ಶ್ರೀನಿಧಿ, ಅನಿತ, ಸುಜಾತ, ಶ್ರೀಲಕ್ಷಿö್ಮÃ, ರಮೇಶ್, ಶ್ರೀನಿವಾಸ್, ಮಧುಮತಿ ಸಂಜನ ಸೇರಿದಂತೆ ಇನ್ನಿತರರು ಬಾಗಿಯಾಗಿದ್ದರು.