ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ವಿರುದ್ಧ ಯಾರು ಕಣದಲ್ಲಿ

Hasiru Kranti
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ಬಿರುಸಿನ ಪೈಪೋಟಿ ನಡೆದಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿವೆ. ಕಾಂಗ್ರೆಸ್ 28 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಮೈತ್ರಿ ಪಕ್ಷಗಳಾದ ಬಿಜೆಪಿ 25 ಕ್ಷೇತ್ರಗಳಲ್ಲಿ ಮತ್ಜೆತು ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು  ಕಣಕ್ಕಿಳಿಸಿದೆ.

ಎರಡು ಹಂತದ ಚುನಾವಣೆಯಲ್ಲಿ ಯಾರು, ಎಲ್ಲಿಂದ, ಯಾರ ವಿರುದ್ಧ ಕಣಕ್ಕೆ ಇಳಿದಿದ್ದಾರೆ ಎಂಬುದರ ಬಗ್ಗೆ ‌ಸಂಕ್ಷಿಪ್ತ ಮಾಹಿತಿ

1. ಚಿಕ್ಕೋಡಿ ಲೋಕಸಭಾ ಕ್ಷೇತ್ರ

ಬಿಜೆಪಿ – ಅಣ್ಣಾಸಾಹೇಬ್‌ ಜೊಲ್ಲೆ

ಕಾಂಗ್ರೆಸ್ ಅಭ್ಯರ್ಥಿ– ಪ್ರಿಯಾಂಕಾ ಜಾರಕಿಹೊಳಿ

2. ಬೆಳಗಾವಿ ಲೋಕಸಭಾ ಕ್ಷೇತ್ರ

ಬಿಜೆಪಿ – – ಜಗದೀಶ್‌ ಶೆಟ್ಟರ್‌

ಕಾಂಗ್ರೆಸ್ – ಮೃಣಾಳ್ ಹೆಬ್ಬಾಳ್ಕರ್

3 . ಬಾಗಲಕೋಟೆ ಲೋಕಸಭಾ ಕ್ಷೇತ್ರ

ಬಿಜೆಪಿ – ಪಿಸಿ ಗದ್ದಿಗೌಡರ್‌

ಕಾಂಗ್ರೆಸ್ – ಸಂಯುಕ್ತಾ ಪಾಟೀಲ್

4. ವಿಜಯಪುರ (SC)

ಬಿಜೆಪಿ – ರಮೇಶ್‌ ಜಿಗಜಿಣಗಿ

ಕಾಂಗ್ರೆಸ್ – ಪ್ರೊ.ರಾಜು ಆಲಗೂರ್

5. ಕಲಬುರಗಿ (SC)

ಬಿಜೆಪಿ – ಡಾ. ಉಮೇಶ್‌ ಜಾಧವ್

ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ

6. ರಾಯಚೂರು (ST)

ಬಿಜೆಪಿ – ರಾಜಾ ಅಮರೇಶ್ವರ ನಾಯಕ

ಕಾಂಗ್ರೆಸ್ – ಜಿ.ಕುಮಾರ ನಾಯಕ

7. ಬೀದರ್

ಬಿಜೆಪಿ – ಭಗವಂತ್‌ ಖೂಬಾ

ಕಾಂಗ್ರೆಸ್ – ಸಾಗರ್ ಖಂಡ್ರೆ

8. ಕೊಪ್ಪಳ

ಬಿಜೆಪಿ – ಡಾ. ಬಸವರಾಜ್‌ ಕ್ಯಾವಟೂರು

ಕಾಂಗ್ರೆಸ್ – ಕೆ. ರಾಜಶೇಖರ ಹಿಟ್ನಾಳ

9. ಬಳ್ಳಾರಿ (ST)

ಬಿಜೆಪಿ – ಶ್ರೀರಾಮುಲು

ಕಾಂಗ್ರೆಸ್ – ಈ.ತುಕಾರಾಂ

10. ಹಾವೇರಿ

ಬಿಜೆಪಿ – ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ – ಆನಂದಸ್ವಾಮಿ ಗಡ್ಡದೇವರಮಠ

11. ಧಾರವಾಡ

ಬಿಜೆಪಿ – ಪ್ರಹ್ಲಾದ್‌ ಜೋಶಿ

ಕಾಂಗ್ರೆಸ್ – ವಿನೋದ್‌ ಅಸೂಟಿ

12. ಉತ್ತರ ಕನ್ನಡ

ಬಿಜೆಪಿ – ವಿಶ್ವೇಶ್ವರ ಹೆಗಡೆ ಕಾಗೇರಿ

ಕಾಂಗ್ರೆಸ್ – ಅಂಜಲಿ ನಿಂಬಾಳ್ಕರ್‌

13. ದಾವಣಗೆರೆ

ಬಿಜೆಪಿ – ಗಾಯತ್ರಿ ಸಿದ್ದೇಶ್ವರ್‌

ಕಾಂಗ್ರೆಸ್ – ಪ್ರಭಾ ಮಲ್ಲಿಕಾರ್ಜುನ್

14. ಶಿವಮೊಗ್ಗ

ಬಿಜೆಪಿ – ಬಿ.ವೈ ರಾಘವೇಂದ್ರ

ಕಾಂಗ್ರೆಸ್ – ಗೀತಾ ಶಿವರಾಜ್ಕುಮಾರ್

15. ಮೈಸೂರು

ಬಿಜೆಪಿ – ಯದುವೀರ್‌ ಒಡೆಯರ್

ಕಾಂಗ್ರೆಸ್ – ಎಂ. ಲಕ್ಷ್ಮಣ್

16. ಉಡುಪಿ-ಚಿಕ್ಕಮಗಳೂರು

ಬಿಜೆಪಿ- ಕೋಟ ಶ್ರೀನಿವಾಸ್‌ ಪೂಜಾರಿ

ಕಾಂಗ್ರೆಸ್ – ಜಯಪ್ರಕಾಶ್ ಹೆಗ್ಡೆ

17. ದಕ್ಷಿಣ ಕನ್ನಡ

ಬಿಜೆಪಿ – ಕ್ಯಾ. ಬ್ರಿಜೇಶ್‌ ಚೌಟಾ

ಕಾಂಗ್ರೆಸ್ – ಆರ್.ಪದ್ಮರಾಜ್

18. ಚಿತ್ರದುರ್ಗ (SC)

ಬಿಜೆಪಿ – ಗೋವಿಂದ ಕಾರಜೋಳ

ಕಾಂಗ್ರೆಸ್ – ಬಿ.ಎನ್ ಚಂದ್ರಪ್ಪ

19. ತುಮಕೂರು

ಬಿಜೆಪಿ – ವಿ ಸೋಮಣ್ಣ

ಕಾಂಗ್ರೆಸ್ – ಎಸ್.ಪಿ. ಮುದ್ದಹನುಮೇಗೌಡ

20. ಚಾಮರಾಜನಗರ (SC)

ಬಿಜೆಪಿ – ಎಸ್‌. ಬಾಲರಾಜ್‌

ಕಾಂಗ್ರೆಸ್ – ಸುನೀಲ್ ಬೋಸ್

21. ಬೆಂಗಳೂರು ಗ್ರಾಮಾಂತರ

ಬಿಜೆಪಿ – ಡಾ ಸಿ.ಎನ್‌ ಮಂಜುನಾಥ್‌

ಕಾಂಗ್ರೆಸ್ – ಡಿ.ಕೆ ಸುರೇಶ್

22. ಬೆಂಗಳೂರು ಉತ್ತರ

ಬಿಜೆಪಿ – ಶೋಭಾ ಕರಂದ್ಲಾಜೆ

ಕಾಂಗ್ರೆಸ್ – ಎಂ.ವಿ.ರಾಜೀವ್ ಗೌಡ

23. ಬೆಂಗಳೂರು ಕೇಂದ್ರ

ಬಿಜೆಪಿ – ಪಿ.ಸಿ ಮೋಹನ್

ಕಾಂಗ್ರೆಸ್ – ಮನ್ಸೂರ್ ಅಲಿಖಾನ್‌

24. ಬೆಂಗಳೂರು ದಕ್ಷಿಣ

ಬಿಜೆಪಿ – ತೇಜಸ್ವಿ ಸೂರ್ಯ

ಕಾಂಗ್ರೆಸ್ – ಸೌಮ್ಯಾ ರೆಡ್ಡಿ

25. ಚಿಕ್ಕಬಳ್ಳಾಪುರ

ಬಿಜೆಪಿ – ಡಾ.ಕೆ ಸುಧಾಕರ್‌

ಕಾಂಗ್ರೆಸ್ – ರಕ್ಷಾ ರಾಮಯ್ಯ

26. ಮಂಡ್ಯ

ಜೆಡಿಎಸ್‌ – ಹೆಚ್‌.ಡಿ ಕುಮಾರಸ್ವಾಮಿ

ಕಾಂಗ್ರೆಸ್ – ಸ್ಟಾರ್ ಚಂದ್ರು

27. ಹಾಸನ

ಜೆಡಿಎಸ್ – ಪ್ರಜ್ವಲ್‌ ರೇವಣ್ಣ

ಕಾಂಗ್ರೆಸ್ – ಶ್ರೇಯಸ್‌ ಪಟೇಲ್‌

28. ಕೋಲಾರ (SC)

ಜೆಡಿಎಸ್ – ಮಲ್ಲೇಶ್ ಬಾಬು

ಕಾಂಗ್ರೆಸ್ – ಕೆ.ವಿ ಗೌತಮ್

ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಏ.4 ಕೊನೆ ದಿನವಾಗಿದೆ.ನಾಮಪತ್ರ ಹಿಂಪಡೆಯಲು ಏ. 8 ಕೊನೆ ದಿನ ಆಗಿದೆ.

ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಏಪ್ರಿಲ್‌ 12 ರಂದು ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 19 ಕೊನೆಯ ದಿನವಾಗಿರುತ್ತದೆ. ಏಪ್ರಿಲ್‌ 20 ರಂದು ನಾಮಪತ್ರ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ಏಪ್ರಿಲ್‌ 22 ಕೊನೆಯ ದಿನವಾಗಿರುತ್ತದೆ.

WhatsApp Group Join Now
Telegram Group Join Now
Share This Article