This is the title of the web page
Left Banner (Left Skyscraper)
Right Banner (Right Skyscraper)

ಖೇಲೋ ಇಂಡಿಯಾಗೆ ಆಯ್ಕೆಯಾದ ಕರ್ನಾಟಕದ ಏಕೈಕ ವ್ಯಕ್ತಿ ಇಮ್ರಾನ ಗಡೀಕರ

0 99

ಅಥಣಿ : ಅಥಣಿ ಪಟ್ಟಣದ ನಿವಾಸಿ ಇಮ್ರಾನಖಾನ್ ರಹೀಮಬಾದಷಾ ಗಡೀಕರ ಅವರು ಕೇಂದ್ರ ಸರಕಾರದ ಆಶ್ರಯದಲ್ಲಿ ಹರಿಯಾನಾದಲ್ಲಿ ಜೂನ್ 09 ರಿಂದ ಪ್ರಾರಂಭವಾಗಲಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಹ್ಯಾಂಡಬಾಲ್ ಕ್ರೀಡೆಯ ನಿರ್ಣಾಯಕರಾಗಿ ಆಯ್ಕೆಯಾದ ಪ್ರಯುಕ್ತ ಅವರಿಗೆ ಸನ್ಮಾನಗಳ ಮಹಾಪೂರ ಹರಿದುಬರ್ತಾಯಿದೆ.

ಇಮ್ರಾನಖಾನ್ ಅವರಿಗೆ ಸನ್ಮಾನಿಸಿ ಮಾತನಾಡಿದ ಪುರಸಭೆ ಸದಸ್ಯ ಸಂತೋಷ ಸಾವಡಕರ ಅವರು ಕೇಙದ್ರ ಸರಕಾರದ ಸಹಯೋಗದಲ್ಲಿ ಜರುಗುವ ಈ ಕ್ರೀಡಾಕೂಟದ ಹ್ಯಾಂಡಬಾಲ್ ಸ್ಪರ್ಧೆಗೆ ನಿರ್ಣಾಯಕರಾಗಿ ಕರ್ನಾಟಕದಿಂದ ಏಕೈಕ ವ್ಯಕ್ತಿಯಾಗಿ ಆಯ್ಕೆಯಾಗಿರುವುದು ನಮ್ಮ ಹೆಮ್ಮೆ, ಇಡೀ ಕರ್ನಾಟಕದಲ್ಲಿ ಒಬ್ಬನೇ ವ್ಯಕ್ತಿ ಅದೂ ನಮ್ಮ ಊರಿನವರನಾಗಿದ್ದು ನಮ್ಮ ಹೆಮ್ಮೆಯಾಗಿದೆ. ಮುಂದಿನ ಅವರ ಕ್ರೀಡಾಜೀವನ ಉನ್ನತವಾಗಿರಲಿ ಎಂದು ಹರಸಿದರು.

ಅನಂತರ ಇಮ್ರಾನ್ ಅವರ ಸ್ನೇಹಿತರ ಬಳಗವಾದ ಗೋರ್ಯಾಳ ಸಿ.ಸಿ ಕ್ರಿಕೇಟ್ ತಂಡದ ಸದಸ್ಯರೂ ಸೇರಿ ಕರ್ನಾಟಕದಿಂದ ಏಕೈಕ ವ್ಯಕ್ತಿ ನಮ್ಮ ಸ್ನೇಹಿತ ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿ ಸನ್ಮಾನಿಸಿ ಸಂಭ್ರಮಿಸಿದರು.

ಈ ವೇಳೆ ಸಂತೋಷ ಸಾವಡಕರ,ಅಲತಾಫ ಗಡೇಕರ,ಸಚೀನ ಮಿರ್ಜಿ, ಅಭಯ ಸಗರಿ,ಅನೇಕ ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದರು.

You might also like
Leave a comment