ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಾಕ್ ಮಾದರಿ ಆಡಳಿತ’ ಚಾಲ್ತಿ: ಸಂಸದ ಪ್ರಹ್ಲಾದ ಜೋಶಿ

Ravi Talawar
WhatsApp Group Join Now
Telegram Group Join Now

ಹುಬ್ಬಳ್ಳಿ, ಏಪ್ರಿಲ್ 24: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನ ಮಾದರಿ ಆಡಳಿತ ಬರುತ್ತದೆ. ಕಾಂಗ್ರೆಸ್‌ನವರು‌ ತುಷ್ಟೀಕರಣದ ಪರಾಕಾಷ್ಠೆ ತಲುಪುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಾ ಪ್ರಹಾರ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಕನ್ನಡ‌ ಮಾತಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಭೇಟಿಯಾಗಿ ತಮಗೆ ಸೂಕ್ತ ಭದ್ರತೆ ಇಲ್ಲ ಎಂದು ಹೇಳಲು ಬಂದಿದ್ದರು. ನಟ, ನಟಿಗೇ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದರು.

ಹನುಮಾನ್ ಚಾಲಿಸಾ ಕೇಳುವವನ ಮೇಲೆ ಹಲ್ಲೆ ಆಯಿತು. ಹೋರಾಟ ಮಾಡಿದ ಮೇಲೆ ಆರೋಪಿಗಳ‌ನ್ನು ಬಂಧಿಸಿದರು. ಅಪರಾಧಿ ಕೃತ್ಯ ಮಾಡುವವರಿಗೆ ಸರ್ಕಾರದಿಂದ ತಮಗೆ ರಕ್ಷಣೆ ಎಂಬ ಭಾವನೆ ಬರುವಂತಾಗಿದೆ. ಹೀಗೆ ಮಾಡುವವರ ಕೊರಳಲ್ಲಿ ಅಲ್ಪಸಂಖ್ಯಾತರು ಅನ್ನೋ‌ ಟ್ಯಾಗ್ ಇದೆ. ಹುಬ್ಬಳ್ಳಿಯಲ್ಲಿ ಒಬ್ಬ ಹುಡುಗಿಗೆ ಗಿಫ್ಟ್ ಕೊಟ್ಟಿದ್ದ,‌ ನಂತರ ಮನ ಬಂದಂತೆ ಥಳಿಸಿದ. ದಲಿತ ವ್ಯಕ್ತಿಯನ್ನು ಕೊಂದೇ ಹಾಕಿದರು. ಕಾಂಗ್ರೆಸ್​​ನವರಿಗೆ ಕಳಕಳಿಯಿಲ್ಲ. ಈ ಬಗ್ಗೆ ಮನೆಮನೆಗಳಲ್ಲಿ ಜನ ಮಾತಾಡುತ್ತಿದ್ದಾರೆ ಆ ಬಗ್ಗೆ ಇಂಟಲಿಜನ್ಸ್ ರಿಪೋರ್ಟ್ ಹೋಗಿರಬಹುದು. ನಷ್ಟ ಆಗಬಹುದೆಂಬ ಹೆದರಿಕೆಯಿಂದ ಈಗ ಕ್ರಮ ಎನ್ನುತ್ತಿದ್ದಾರೆ ಎಂದು ಜೋಶಿ ಹೇಳಿದರು.

ನೇಹಾ ಕೊಲೆ ಪ್ರಕರಣದ ಬಗ್ಗೆ ಉಲ್ಲೇಖಿಸಿ, ‘ಏನಾಗಿದೆ ನಿರಂಜನ’ ಅಂತಾ ಸಿದ್ದರಾಮಯ್ಯ ಅವರದೇ‌ ಭಾಷೆಯಲ್ಲಿ ಕೇಳಬೇಕಿತ್ತು. ಸಂತೋಷ್ ಲಾಡ್ ಮೊದಲ ದಿನ ಭೇಟಿ‌ ಕೊಟ್ಟಾಗ ಸಿಎಮ್ ಜೊತೆ ಮಾತನಾಡಿಸಬೇಕಿತ್ತು. ನಾವು ಹಿಂದೂ ಮುಸ್ಲಿಮ್ ಎಂದು ಭೇದಭಾವ ಮಾಡಲ್ಲ. ಯಾರ ವಿರುದ್ಧ ಅನ್ಯಾಯವಾದರೂ ನಾವು‌ ವಿರೋಧಿಸುತ್ತೇವೆ ಎಂದು ಜೋಶಿ ಹೇಳಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ ಎಂಬುದು ರಾಹುಲ್ ಗಾಂಧಿ ಭಾಷಣದಿಂದ ತಿಳಿಯುತ್ತದೆ. ಜನರ ಬಳಿ ಎರಡು ಬೈಕ್, ಮನೆ ಇದ್ದರೆ ಒಂದನ್ನು ಕಸಿದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸಂಪತ್ತು ಸೃಷ್ಟಿ ಮಾಡುವವರ ವಿರುದ್ಧ ಹೊರಟಿದೆ. ಮಾವೋವಾದಿ ಮನಸ್ಥಿತಿ ಇಟ್ಟುಕೊಂಡು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ವಿಫಲವಾಗಿರುವ ಮಾವೋವಾದಿ ವಿಚಾರದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜೋಶಿ ಹೇಳಿದರು

WhatsApp Group Join Now
Telegram Group Join Now
Share This Article