ಇಂಡಿ: ಕಡಿಮೆ ವ್ಯಚ್ಚದಲ್ಲಿ ಅಧಿಕ ಲಾಭ ಬರುವ ಬೇಳೆ ಯಾವುದಾದರು ಇದ್ದರೆ ಅದು ತಾಳೆ ಬೆಳೆಯಾಗಿದ್ದು ಇದಕ್ಕೆ ಯಾವುದೆ ಕಿಟ ಬಾದೆ ಇರುವುದಿಲ್ಲ, ಮಾರಾಟಕ್ಕಾಗಿ ಇನ್ನೊಬ್ಬರಿಗೆ ಕಮಿಷನ ಕೊಡಬೇಕಾಗಿಲ್ಲ. ನೇರವಾಗಿ ಕಂಪನಿಯವರೆ ನಿಮ್ಮಲ್ಲಿಗೆ ಬಂದು ತಾಳೆ ಹಣ್ಣು ತೆಗೆದುಕೊಂಡು ಹೊಗಿ ನಿಮ್ಮ ಖಾತೆ ಹಣ ಜಮಾ ಮಾಡುವ ಬೆಳೆ ಇದಾಗಿದ್ದು ಅದಕ್ಕಾಗಿ ರೈತರು ತಾಳೆ ಬೆಳೆಯುವುದು ಸೂಕ್ತ ಎಂದು ಹೀರಿಯ ಸಹಾಯಕ ತೊಟಕಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಹೇಳಿದರು.
ಅವರು ತಾಲೂಕಿನ ಹಿರೇವನೂರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ೩ಜಿ ಆಯಿಲ್ ಪಾಮ್ ಪ್ರೆöÊವೇಟ್ ಕಂಪನಿ ವತಿಯಿಂದ ಯಲ್ಲಪ್ಪಾ ವಾಂಗಿ ಇವರ ತೊಟದಲ್ಲಿ ತಾಳೆ ಸಸಿ ನೇಡುವ ಮೂಲಕ ಮೆಗಾಡ್ರೆöÊವ್ ಪಾಮ್ ಪ್ಲಾಂಟೇಷನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಳೆ ಅನ್ಯ ದೇಶಗಳಿಂದ ಪಾಮ್ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಇದನ್ನು ಹೊಗಲಾಡಿಸುವ ಸಲುವಾಗಿ ನಮ್ಮ ದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ. ನಾಟಿ ಮಾಡಿದ ಎರಡುವರೆ ವರ್ಷದ ಅವದಿಯಲ್ಲಿ ಬೆಳೆ ಹಣ್ಣು ಕೊಡಲು ಪ್ರಾರಂಭಿಸುವತ್ತದೆ. ಇದಕ್ಕೆ ಯಾವುದೆ ಕಿಟ ನಾಶಕ ಸಿಂಪರಣೆ ಮಾಡುವ ಅಗತ್ಯವಿಲ್ಲ ಕೇವಲ ನೀರು ಗೊಬ್ಬರ ಕೊಟ್ಟರೆ ಸಾಕು ನಿರಂತರವಾಗಿ ಹಣ್ಣು ಬರುತ್ತದೆ. ಇದಕ್ಕೆ ನಮ್ಮ ಇಲಾಖೆಯಿಂದ ಸಾಕಷ್ಟು ಸೌಲಭ್ಯ ನೀಡುತ್ತಿದ್ದು ಉಚಿತವಾಗಿ ಸಸಿ ನೀಡಿ ೩ ವರ್ಷ ಗೊಬ್ಬರದ ಸಲುವಾಗಿ ಸಹಾಯಧನ ನೀಡುತ್ತೆವೆ. ತೊಟಗಾರಿಕೆ ಇಲಾಖೆಯಿಂದ ಇದಕ್ಕಾಗಿ ಪ್ರತೇಕವಾಗಿ ಸಹಾಧನ ನೀಡುತ್ತೆವೆ. ನಮ್ಮ ದಿನ ನಿತ್ಯದ ಜಿವನೊಪಾಯಕ್ಕೆ ದಿನಸಿ ಎಣ್ಣೆ ಅವಶ್ಯಕತೆ ಇದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೇಯಲ್ಲಿ ತಾಳೆ ಬೆಳೆ ಮಾಡಲು ಮುಂದೆ ಬರಬೇಕು ಎಂದರು.
೩ಜಿ ೩ಜಿ ಆಯಿಲ್ ಪಾಮ್ ಪ್ರೆöÊವೇಟ್ ಕಂಪನಿಯ ಏರಿಯಾ ವ್ಯವಸ್ಥಾಪಕ ಶಾಂತಪ್ಪ ರೆಡ್ಡಿ ತಾಳೆ ಬೆಳೆ ಹಾಗೂ ಕಂಪನಿ ಕುರಿತು ಮಾಹಿತಿಯನ್ನು ತಿಳಿಸಿದರು.
ತಾಳೆ ಬೆಳೆಯ ಪ್ರಗತಿ ಪರ ರೈತ ಯುವರಾಜ ರಾಠೋಡ ತಾಳೆ ಬೆಳೆಯ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಹಿರೇಬೇವನೂರ ಗ್ರಾಪಂ ಅಧ್ಯಕ್ಷ ಶ್ರೀಮತಿ ಶೈಲಜಾ ಜಾಧವ, ಎಎಚ್ಒ ಆರ್.ಬಾಲಗಾಂವ, ೩ಜಿಸಿಒ ಆನಂದ ಅಗರಖೇಡ, ಸಂಗಪ್ಪ ಉಪ್ಪಿನ, ಸಿದ್ದು ವಾಂಗಿ, ಪತ್ರ ಕರ್ತ ರಾಜಕುಮಾರ ಚಾಬುಕಸವಾರ, ಧನಸಿಂಗ ರಾಠೋಡ, ಗುರು ಕೊಪ್ಪಾ, ಸೇವಾಲಾಲ ರಾಠೋಡ, ಚನ್ನವಿರ ವಾಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರೈತರು ತಾಳೆ ಬೆಳೆಯುವುದು ಸೂಕ್ತ ಎಂದು ಹೀರಿಯ ಸಹಾಯಕ ತೊಟಕಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಹೇಳಿದರು.

Leave a comment
Leave a comment