ಇಂಡಿ: ಈ ಹಿಂದೆ ನಮ್ಮನ್ನಾಳಿ ಹೊದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಾವೂ ಇಂದು ನೀರಾವರಿ ವಂಚಿತರಾಗಲು ಮೂಲ ಕಾರಣವಾಗಿದೆ. ಆಲಮಟ್ಟಿ ಆಣೆಕಟ್ಟು ಕಟ್ಟಬೇಕಾದರೆ ನಮ್ಮ ಜಿಲ್ಲೆಯ ಬಹು ಪಾಲು ಜನ ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಆದರೂ ನಮಗೆ ಇಲ್ಲಿಯವರೆಗೆ ನ್ಯಾಯಯುತವಾಗಿ ದೊರೆಯಬೇಕಾದ ನಮ್ಮ ಪಾಲೀನ ನೀರು ಸಿಗುತ್ತ್ತಿಲ್ಲ ಎಂಬ ನೊವು ನಮಗಿದೆ ಎಂದು ಶಾಸಕ ಹಾಗೂ ವಿಧಾನಸಭೆಯ ಅಂದಾಜು ಸ್ಥಾಯಿ ಸಮಿತಿಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ರೇಷ್ಮೇ ಇಲಾಖೆ ನಿವೃತ್ತ ನೌಕರರ ಹಾಗೂ ಹಠಗಾರ (ನೇಕಾರ)ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ರಾಜಶೇಖರ ಮೇತ್ರಿಯವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.
ಈ ಕಳಕಳಿಯನ್ನು ಕಂಡು ರಾಜಶೇಖರ ಮೇತ್ರಿಯವರು ನಮ್ಮ ಭಾಗದ ನೀರಾವರಿ ಯೋಜನೆಗೆ ಬಳಕೆ ಮಾಡಿ ಎಂದು ತಮ್ಮ ಸೇವಾ ನಿವೃತ್ತಿ ಅವಧಿಯ ತಿಂಗಳದಲ್ಲಿನ ಸಂಬಳವನ್ನು ಮರಳಿ ಸರ್ಕಾರಕ್ಕೆ ನೀಡಿರುವುದು ಸ್ವಾಗತಾರ್ಹವಾಗಿದೆ. ಈ ಚೇಕ್ಕನ್ನು ನೇರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮೇತ್ರಿಯವರ ಮುಖಾಂತರ ಕೊಡಿಸಿ ಇದಕೊಂದು ಮೇರಗೂ ತರುವ ಕಾರ್ಯ ಮಾಡುತ್ತೆನೆ. ಇವರ ಆದರ್ಶ ಇನ್ನೋಬ್ಬರಿಗೆ ಪ್ರೇರಣೆಯಾಗಿದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ನೇಕಾರ ಸಮುದಾಯ ಸಣ್ಣ ಸಮಾಜವಾಗಿದ್ದರು ಇವರ ಆಚಾರ ವಿಚಾರ, ಸಂಸ್ಕಾರ ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಮ್.ಕೊರೆ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಡಾ|| ಸಂಗಮೇಶ ಮೇತ್ರಿ ಸೇರಿದಂತೆ ಅನೇಕರು ಮಾತನಾಡಿದರು.
ಸಮಾರಂಭದಲ್ಲಿ ಸಿದ್ದಾರೂಡ ಮಠ ಓಂಕಾರ ಆಶ್ರಮದ ಡಾ|| ಸ್ವರೂಪಾನಂದ ಸ್ವಾಮಿಜಿ, ಯಡ್ರಾಮಿಯ ಪೂಜ್ಯ ಸಿದ್ದಲಿಂಗ ಸ್ವಾಮಿಜಿ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಇಂಡಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ಗೊಟ್ಯಾಳ, ಸಿದ್ದರಾಜು ಎಸ್, ಇಂಡಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ವಿ.ಹರಳಯ್ಯ, ಬಿ ವಾಯ್ ಎಬಿ ಅಂಕದ, ಶಿವಶಂಕರ ಹೊನ್ನುಂಗರ, ಅಶೋಕ ತೇಲಿ, ಎಸ್.ಆರ್.ಪಾಟೀಲ, ಪ್ರಭು ಚಾಂದಕವಟೆ, ಸುಭಾಸ ಪ್ಯಾಟಿ, ಮನೋಜ ಕಟಗೇರಿ, ಬಿ.ಬಿ.ಪಾಟೀಲ, ಶಿವಶಂಕರ ಜಿ ಸುರಪೂರ ಸೇರತದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಗೊರನಾಳ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಸುದಿರ್ಗ ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ರಾಜಶೇಖರ ಮೇತ್ರಿ ದಂಪತಿ ಹಾಗೂ ಇಂಡಿ ಮತ್ತು ಚಡಚಣ ತಾಲೂಕಿನ ಎಸ್.ಎಸ್ ಎಲ್ಸಿ ಪಿಯುಸಿ ಪ್ರತಿಭಾನ್ವಿತ ಹಾಗೂ ಮೇಡಿಕಲ್ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಹಠಗಾರ (ನೇಕಾರ)ಸಮಾಜದ ವತಿಯಿಂದ ಹಮ್ಮಿಕೊಂಡ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ರಾಜಶೇಖರ ಮೇತ್ರಿಯವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.

Leave a comment
Leave a comment