This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಹಿಂದೂ ತಾಯಂದಿರರು ಮನೆಗೊಬ್ಬ ಮಗನನ್ನು ಹಿಂದೂ ಕಾರ್ಯಕರ್ತನ ಮಾಡಿ : ಕು.ಚೈತ್ರಾ ಕುಂದಾಪೂರ.


ನೇಸರಗಿ ನ., 27- ಪ್ರತಿ ತಾಯಂದಿರು ಮನೆಗೆ ಒಬ್ಬರಂತೆ ತಮ್ಮ ಪುತ್ರರನ್ನು ಹಿಂದೂ ಕಾರ್ಯಕರ್ತನನ್ನಾಗಿ ಮಾಡಿ ಹಿಂದೂ ಸಮಾಜದ ಬೆಳವಣಿಗೆ ಸಹಕರಿಸಬೇಕೆಂದು ಹಿಂದೂ ಸಿಂಹಿನಿ ಕು.ಚೈತ್ರಾ ಕುಂದಾಪೂರ ಹೇಳಿದರು .

ಅವರು ಸಮೀಪದ ಮೇಕಲಮರಡಿ ಗ್ರಾಮದಲ್ಲಿ ರವಿವಾರ ದಿ 27 ರಂದು ಆಯೋಜಿಸಲಾಗಿದ್ದ ಶ್ರೀ ಮಾರುತಿ ದೇವರ ಬೃಹತ್ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಹಾಗೂ ಹನುಮಾನ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ವಾಯುಪುತ್ರ ಹನುಮ ರಾಮನ ಸೇವಕ ಅವನು ರಾಮ ಸೇತೆಗಾಗಿ ಮಾಡಿದ ಸೇವೆ,ಸಮುದ್ರಕ್ಕೆ ಸೇತುವೆ ಕಟ್ಟಿದ ಭಜರಂಗಿ ತರಹ ಹಿಂದೂ ಸಮಾಜ ಉನ್ನತಿಗೆ ಶ್ರಮಿಸಬೇಕು.ಹಿಂದೂ ಧರ್ಮಕ್ಕೆ ಆದಿಕಾಲದಿಂದ ವಿಶಿಷ್ಟವಾದ ಸ್ಥಾನಮಾನವಿದ್ದು.ಮಹಾಭಾರತ ಕಾಲದಲ್ಲಿ ಬೀಮನು ದುಶ್ಯಾಸನನ ಸಂಹಾರಕ್ಕಾಗಿ ಹನುಮನ ವೃತ ನಡೆಸಿ ದ್ರೌಪದಿಯ ತಲೆಗೂದಲಿಗೆ ರಕ್ತ ಪಾಶನ ಮಾಡಿಸಿ ಹನುಮನ ವೃತ ಮಾಡಿದ್ದರು. ಎಲ್ಲ ತಾಯಂದಿರರು ನನ್ನ ಗಂಡ ಶ್ರೀ ರಾಮಚಂದ್ರ ನಂತಿರಲಿ‌ ನನ್ನ ಮಗ ಶ್ರೀ ರಾಮಚಂದ್ರನಂತಿರಲಿ ಅವರ ಏಳಿಗೆಗಾಗಿ ಅನೇಕ ವೃತಗಳನ್ನು ಮಾಡುತ್ತಾರೆ. ಹಾಗೆ ನಮ್ಮ ಹನುಮ ಭಕ್ತ ಮಾಲಾದಾರಿಗಳು ಬರಿಗಾಲಲಿ ರಾಮನ ಜಪ ಮಾಡಿ ಭಜರಂಗಿಯ ಜಪ ಮಾಡಿ ತಮ್ಮ ಶ್ರಯೋಭಿವೃದ್ದಿಗೆ ಧರ್ಮ ಜಪಕ್ಕಾಗಿ ಹಿಂದೂತ್ವದ ಸಮಾಜ ಸುಧಾರಣೆಗೆ 42 ದಿನಗಳ ಕಠಿಣ ವೃತ ಮಾಡುವವರು ಲಕ್ಷಾಂತರ ಜನರು ಇದ್ದಾರೆ.ಹಿಂದೂ ಧರ್ಮವನ್ನು ನಿಂದಿಸುವ ಜನರು ನಮ್ಮ ಧರ್ಮದ ಆಚಾರ ವಿಚಾರಗಳನ್ನು ಅದ್ಯಯಣ ಮಾಡಿ ಯಾವುದೋ ಡಿಕ್ಟನರಿ ಹೆಸರು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ರಾಮಸೇತವೆ ಕೆಡವಲು,ರಾಮ ಮಂದಿರ ಕಟ್ಟಡಕ್ಕೆ ಅಡ್ಡಿಪಡಿಸುವ,ನಿಂದಿಸುವ ಆ ನಾಯಕರು ಇಂದು ಮಠ ಮಂದಿರಗಳಿಗೆ ಪ್ರದಕ್ಷಣೆ ಹಾಕುತ್ತಿದ್ದಾರೆ.ಹಿಂದಿನ ಅಮೇರಿಕಾ ಅದ್ಯಕ್ಷರಾದ ಬರಾಕ್ ಒಬಾಮ್ ಅವರು ಹನುಮನ ಆದರ್ಶ,ನೀತಿಗಳನ್ನು ಕೊಂಡಾಡ್ಡಿದ್ದಾರೆ. ರಾಮ ಎಂದರೆ ರಾ ಎಂದರೆ ರಾಷ್ಟ್ರ ಮ ಎಂದರೆ ಮರ್ಯಾದೆ, ಹಿಂದೂ ಎಂದರೆ ಜಾಗತಿಕ ಧರ್ಮ . ಹಿಂದೂ‌ ಹೆಣ್ಣು ಮಕ್ಕಳು ಇನ್ನೂ ಮುಂದಾದರೂ ಜಾಗ್ರತರಾಗಬೇಕು ರಾಮನಂತವರ ಸಹವಾಸ ಮಾಡಬೇಕ ಹೊರತು ರಹಿಮನಂತವರ ಸಹವಾಸ ಮಾಡಿಕೊಂಡರೆ ಆ ದುರಾತ್ಮರು ನಮ್ಮ ಹೆಣ್ಣು ಮಗಳನ್ನು ಮದುವೆಯಾಗಿ ಎರಡು ವರ್ಷ ಜೀವನ ಸಾಗಿಸಿ ಮೊನ್ನೆ ದೆಹಲಿಯಲ್ಲಿ 35 ತುಂಡುಗಳಾಗಿ ಕತ್ತರಿಸಿ, ದಿನಕ್ಕೆರಡು ತುಂಡು ಆಯಾ ಜಾಗೆಯಲ್ಲಿ ಹುಗಿದಿಟ್ಟ ರಹಿಮನಂತವರ ಸಹವಾಸ ಮಾಡಬೇಡಿರಿ ಹಿಂದು ಹೆಣ್ಣು ಮಕ್ಕಳಲ್ಲಿ ಮನವಿ ಮಾಡಿದರು.

ಚನ್ನಮ್ಮನ ಕಿತ್ತೂರ ಕ್ಷೇತ್ರದ ಶಾಸಕರಾದ ಮಹಾಂತೇಶ ದೊಡಗೌಡರ ಮಾತನಾಡಿ ನಮ್ಮ ಎಲ್ಲ ಉಪ ಜಾತಿಗಳಿಗೆ ಹಿಂದೂ ಎನ್ನುವ ಪದ ಹೇಗೆ ಮುಖ್ಯವಾಗಿದೆಯೋ ಹಾಗೇ ಹುಟ್ಟಿದ ಧರ್ಮ,ಬಾಷಿಗಳನ್ನು ಗೌರವಿಸುವದು ನಮ್ಮ ಧರ್ಮ ವನ್ನು ತಾಯಿಯಷ್ಟೆ ಪ್ರೀತಿಸಬೇಕು.ಕಲ್ಲಿನಿಂದ ಸಾಗರಕ್ಕೆ ಸೇತುವೆ ಕಟ್ಟಿದ ಹನುಮ .ಇಂದು ಹನುಮನ ಭಕ್ತರಾಗಿ ಹಲವಾರು ಜನ ಹನುಮ ಮಾಲೆ ಧರಿಸಿ ಆದರ್ಶ ವ್ಯಕ್ತಿಯಾಗುತ್ತಿದ್ದಾರೆ .ಮತ್ತು ಹಿಂದೂ ಧರ್ಮದ ಆದರ್ಶವಾಗಿ ಪ್ರಧಾನಿ ನರೇಂದ್ರ ಮೋದಿ ಪರಿಶ್ರಮ ಹಾಗೂ ಹಿಂದೂಗಳ ಸದ್ಬಾವಣೆಗಾಗಿ ಅಯೋದ್ಯ ಸ್ಥಳದಲ್ಲಿ ಬೃಹತ್ ರಾಮ ಮಂದಿರ ನಿರ್ಮಾವಾಗುತ್ತಿದ್ದು ಹಾಗೇಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದ ಪರಿಶ್ರಮದಿಂದ ಇಂದು ಬೃಹತ್ ಆಂಜನಾದ್ರಿ ಬೆಟ್ಟ ನಿಮಾಣವಾಗಲಿದೆ ಎಂದರು.

ಗದಗದ ಶಿವಾನಂದ ಬ್ರಹನಮಠದ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಹಿಂದೂ ಧರ್ಮ ವಿರೋಧಿಗಳು ಮೊದಲು ಬೆಳಿಗ್ಗೆ ಎದ್ದ ಹೊಚ್ಚಲು ತೊಳೆದು ಪೂಜೆ ಮಾಡುವ ತಾಯಿಯನ್ನು ನೋಡಿ, ಗಂಡ,ಮಕ್ಕಳ ಏಳ್ಗೆಗಾಗಿ ವೃತ ಮಾಡುವ ತಾಯಂದಿರ ನೋಡಿ, ಕರೋನಾ ಸಮಯದಲ್ಲಿ ಯಾವುದಕ್ಕೂ ಅಂಜದೆ ಪ್ರಾಣ ಕಳೆದುಕೊಂಡ ಜನರ ಅಂತ್ಯಸಂಸ್ಕಾರ ಮಾಡಿದ ಬಜರಂಗ ದಳದ,ದೇಶದ ಸಾವಿರಾರು ಜನರ ಅಂತ್ಯಸಂಸ್ಕಾರ ಮಾಡಿದ ಹುಡುಗರ ನೋಡಲಿ ಮತ್ತು ಹೊಲಕ್ಕೆ ಹೋದ ಗಂಡನಿಗೆ ಮಾತ್ರ ಊಟ ಕಟ್ಟದೆ ಯಾರಾದರೂ ಬಂದರೂ ಅವರು ಊಟ ಮಾಡಲಿ ಉದ್ದೇಶದಿಂದ ಹೆಚ್ಚಿಗೆ ಊಟ ಕಟ್ಟಿ ಆದರ್ಶವಾದಿ ತಾಯಿಯರ ಗುಣ ಎಂತಹದು.ಹಿಂದೂ ಧರ್ಮದಲ್ಲಿ ಶವವನ್ನು ಹುಳಲಿ,ಸುಡಲು ನಾವು ಮಾಡುವ ಪೂಜೆ ಮೃತ ವ್ಯಕ್ತಿಗೆ ಪೂಜೆ ಸಲ್ಲಿಸುವ ವ್ಯಕ್ಕಿತ್ವ ನಮ್ಮದು ನಮ್ಮ ಹಿಂದೂ ಧರ್ಮ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದರು.

ಬೆಳಗಾವಿ ಜಿಲ್ಲಾ ಬಿಜೆಪಿ ಮಾದ್ಯಮ ವಕ್ತಾರ ಎಪಿಎಂಸಿ ಸದಸ್ಯ ಎಪ್ ಎಸ್ ಸಿದ್ದನಗೌಡರ ಮಾತನಾಡಿ ಮಾಹಾಮಾರಿ ಕರೋನಾ ಬಂದಾಗ ಎದುರಿಸಿ 134 ಕೋಟಿ ಜನರಿಗೆ ಚಿಕಿತ್ಸೆ ನೀಡಿ ಧೈರ್ಯದಿಂದ ಎದುರಿಸಿದ ಪ್ರಧಾನಿ ಮೋದಿ ಅವರಿಗೆ ಶ್ರೀ ಹನುಮಾನ ಪ್ರೇರಣೆ.ಅದಕ್ಕಾಗಿ ಅವರ ಪ್ರಯತ್ನದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ನೇಸರಗಿ ಮಲ್ಲಾಪೂರ ಕೆ ಎನ್ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಶ್ರೀ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ ಹಿಂದೂ ಧರ್ಮ,ತಂದೆ, ತಾಯಿಗಳನ್ನು ಪ್ರೀತಿಯಿಂದ ಮರ್ಯಾದೆಯಿಂದ ಗೌರವಿಸೋಣ ಮತ್ತು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯೋಣ ಎಂದರು.

ಕಾರ್ಯಕ್ರಮದಲ್ಲಿ ಹಣಬರಹಟ್ಟಿ ಹಿರೇಮಠದ ಬಸವಲಿಂಗ ಮಹಾಸ್ವಾಮಿಗಳು, ಸದಲಗಾದ ಶ್ರದ್ದಾನಂದ ಮಹಾಸ್ವಾಮಿಗಳು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಎಪ್ ಕೊಳದೂರ,ಗ್ರಾ ಪಂ ಅದ್ಯಕ್ಷರಾದ ರಾಜು ಹಣ್ಣಿಕೇರಿ,ಬೀಮಸಿ ಹುಲಮನಿ,ಚಂದ್ರಯ್ಯ ಹಿರೇಮಠ, ರೈತ ಸಂಘದ ತಾಲೂಕಾ ಅದ್ಯಕ್ಷರಾದ ಮಹಾಂತೇಶ ಹಿರೇಮಠ,ಶಿವಪ್ಪ ಚೋಭಾರ.  ಪಿಎಸ್ಐ ವಾಯ್ ಎಲ್ ಶೀಗಿಹಳ್ಳಿ,ವಿನೋಧ ಯರಡಾಲ,ರಾಜು ಯರಡಾಲ, ಗೌಡಪ್ಪ ಯರಡಾಲ, ಶಿವರಾಯಪ್ಪ್ ಕಮತಗಿ, ಸೇರಿದಂತೆ ಮೇಕಲಮರಡಿ ಹಾಗೂ ಅನೇಕ ಗ್ರಾಮಗಳ ಹನುಮ ಮಾಲಾಧಾರಿಗಳು, ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply