ಐತಿಹಾಸಿಕ ಹನುಮಾನ ಮಂದಿರದಲ್ಲಿ ಹನುಮ ಜಯಂತಿ

Ravi Talawar
WhatsApp Group Join Now
Telegram Group Join Now

ಮನಗೂಳಿ,23 :ಪಟ್ಟಣದಲ್ಲಿ ಶ್ರದ್ದಾ ಭಕ್ತಿಯಿಂದ ಶ್ರೀ ಹಮಾನ ಜಯಂತಿ ಆಚರಿಸಲಾಯಿತು. ಪಟ್ಟಣದ ಐತಿಹಾಸಿಕ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ದೇವರಿಗೆ ವಿಶೇಷ ಪೂಜೆ ಅಭಿಷೇಕ ಮತ್ತು ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ಮಕ್ಕಳಿಂದ ಭಕ್ತಿ ಹಾಡುಗಳನ್ನು ಹಾಡಿದರು.

ನಂತರ ಮಹಾಪ್ರಸಾದ ವ್ಯವಸ್ಥೆ ಜರುಗಿತು. ಊರಿನ ಸದ್ಭಕ್ತರು, ಕಮಿಟಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಮಂದಿರದಲ್ಲಿ ಪ್ರಾಚೀನ ಕಾಲದ ಶೀಲಾಶಾಸನ ಕೂಡ ನೋಡಬಹುದು.

ಈ ಕಾರ್ಯಕ್ರಮದಲ್ಲಿ ಚನ್ನುಗೌಡ್ರು ಪಾಟೀಲ, ಬಸವರಾಜ ಕೋಟ್ಯಾಳ, ಶಿವಾಜಿ ಮೋರೆ, ಮಲ್ಲು ಲೇಸಪ್ಪಗೋಳ, ಪುಟ್ಟು ತೇಲಿ, ಲಕ್ಷ್ಮಣ ಹಡಪದ, ಸತ್ಯಪ್ಪ ಪೂಜಾರಿ, ಸುರೇಶ ಜಮಖಂಡಿ, ಸದಾಶಿವ ಮುತ್ತಪ್ಪನವರ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article