ಇಂಡಿ : ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಜಿಲ್ಲಾ ಘಟಕ ವಿಜಯಪುರ , ತಾಲೂಕಾ ಘಟಕ ಇಂಡಿ ಹಾಗೂ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲಬುರಗಿ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಗ್ರಂಥ ಬಿಡುಗಡೆ ಸಮಾರಂಭ ಅ.೮ ರಂದು ನಡೆಯಲಿದೆ ಎಂದು ಹಂಡೆ ವಜೀರ ಸಮಾಜದ ರಾಜ್ಯಾಧಕ್ಷ ಡಾ. ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಉಡುಪಿ ಹೋಟೆಲ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ.೮ ರಂದು ಬೆಳಿಗ್ಗೆ ೧೧ ಗಂಟೆಗೆ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸಮಾವೇಶ ಜರುಗಲಿದೆ.
ಇದೇ ವೇಳೆ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಗುವದು.
ಹೊಸಪೇಠ ಬಳ್ಳಾರಿ ಅನ್ನದಾನೇಶ್ವರಿ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು, ಕೊಣ್ಣೂರದ ಡಾ|| ವಿಶ್ವಪ್ರಭುದೇವರು ಶಿವಾಚಾರ್ಯ ಮಹಾಸ್ವಾಮಿಗಳು, ಬಂಥನಾಳದ
ಡಾ|| ವೃಷಭಲಿಂಗೇಶ್ವರ ಶ್ರೀಗಳು, ಶಿರಶ್ಯಾಡದ ಮುರುಘೇಂದ್ರ ಶಿವಾಚಾರ್ಯರು, ಕರಿಬಂಟನಾಳದ ಶಿವಕುಮಾರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಉದ್ಘಾಟಕರಾಗಿ ಸಚಿವ ಡಾ. ಎಂ.ಬಿ.ಪಾಟೀಲ,ಗ್ರoಥ ಬಿಡುಗಡೆ ಸಕ್ಕರೆ ಸಚಿವ ಶಿವಾನಂದ ಪಾಟೀಲರು, ಸಂಸದ ರಮೇಶ ಜಿಗಜಿಣಗಿ ಶಾಸಕ ಯಶವಂತರಾಯಗೌಡ ಪಾಟಿಲರು ಗ್ರಂಥ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ಮುದ್ದೆಬಿಹಾಳ ಶಾಸಕ ಸಿ.ಎಸ್.ನಾಡಗೌಡ,ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರು,ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ,ಸಿoದಗಿ ಶಾಸಕ ಅಶೋಕ ಮನಗೂಳಿ,ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಅಧ್ಯಕ್ಷರು ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲಬುರಗಿಯ ಜಿ.ಎನ್.ಪಾಟೀಲ,ವೀರ ಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿ.ಸಿ.ನಾಗಠಾಣ,ಉಪನ್ಯಾಸರಾಗಿ ಮುಖ್ಯೋಪಾದ್ಯಾಯರು ನೆಲ್ಲೂರ ಆಳಂದ ಡಾ. ಡಿ.ಎನ್.ಪಾಟೀಲ ಭಾಗವಹಿಸುವರು.
ಅತಿಥಿಗಳಾಗಿ ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ,ದಯಾಸಾಗರ ಪಾಟಿಲ, ಸಂಶೋಧಕರು ಹಾಗೂ ವಿಶ್ರಾಂತ ಪ್ರಾಧ್ಯಾಪಕರು ಹಂಪಿ ವಿವಿಯ ಡಾ.ಎಸ್.ಸಿ.ಪಾಟಿಲ, ಗ್ರಂಥಗಳ ಪರಿಚಯ ಡಾ. ಶ್ರೀಶೈಲ ನಾಗರಾಳ,ಸಂಶೋಧಕರು ಧಾರವಾಡದ ಎಂ.ಎಸ್.ಚೌಧರಿ,ಎಸ್.ಆರ್.ದೇಸಾಯಿಗೌಡರ, ಮಾಜಿ ರಾಜ್ಯಾಧ್ಯಕ್ಷ ಬಿ.ಎಸ್.ಪಾಟೀಲ, ಪ್ರೋ.ಎಂ.ಜೆ.ಪಾಟೀಲ,ಆರ್.ಎಸ್.ಪಾಟೀಲ,ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ರೇವಡಿ,ಬಿ.ವಿ.ಪಾಟೀಲ,ಎಸ್.ಜಿ.ಪಾಟಿಲ, ಇಂಡಿ ತಾಲೂಕಾ ಘಟಕದ ಅಧ್ಯಕ್ಷ ಆರ್.ವಿ.ಪಾಟೀಲ,ಸಂಗಮೇಶ ಕರಬಂಟನಾಳ,ಶ್ರೀಮತಿ ಮಾಲಾ ಪಾಟೀಲ,ರಾಜ್ಯ ಯುವ ಘಟಕದ ಸಂಗನಗೌಡ ಯಂಕoಚಿ,ಶಿರಶ್ಯಾಡದ ರವೀಂದ್ರ ಬಗಲಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾದ ಘಟಕದ ಅಧ್ಯಕ್ಷ ಆರ್.ವಿ.ಪಾಟೀಲ, ಎಸ್.ಜಿ.ಪಾಟಿಲ, ಎಂ.ಜೆ.ಪಾಟೀಲ,ಆರ್.ಎಸ್.ಪಾಟೀಲ,ಸoಗನಗೌಡ ಯಂಕoಚಿ,ಜಿ.ಎಸ್.ಪಾಟೀಲ,ಕೆ.ಎಸ್.ಪಾಟೀಲ,ಎನ್.ಆರ್.ಪಾಟೀಲ,ಎಸ್.ಎಸ್.ಅವರಾದಿ,ನಾಗರಾಜ ತಂಗಡಗಿ,ಆರ್.ಡಿ.ಪಾಟಿಲ,ಟಿ.ವಿ.ಪಾಟೀಲ,ದಯಾನoದ ಪಾಟೀಲ ಮತ್ತಿತರಿದ್ದರು.
ಇಂಡಿಯಲ್ಲಿ ನಡೆದ ಹಂಡೆ ವಜೀರ ಸಮಾಜದ ರಾಜ್ಯಧ್ಯಕ್ಷ ಎಸ್.ಎಸ್.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Leave a comment
Leave a comment