ಗ್ಯಾರಂಟಿ ಯೋಜನೆಗಳೇ ಮತಯಾಚನೆ ಆಶಯ, ರಾಮನ ಬಗ್ಗೆ ಮಾತನಾಡಲ್ಲ: ಎಚ್.ಆಂಜನೇಯ ಬಿಜೆಪಿಗೆ ಟಾಂಗ್‌

Ravi Talawar
WhatsApp Group Join Now
Telegram Group Join Now

ಚಿತ್ರದುರ್ಗ,ಏ.03: ಶ್ರೀಸಾಮಾನ್ಯ ಬದುಕಿಗೆ ಊರುಗೋಲಾದ ಗ್ಯಾರಂಟಿ ಯೋಜನೆಗಳೇ ಲೋಕಸಭೆ ಚುನಾವಣೆ ಮತಯಾಚನೆ ಆಶಯಗಳು. ನಾವು ಧರ್ಮ, ರಾಮನ ಬಗ್ಗೆ ಮಾತನಾಡಲ್ಲವೆಂದು ಮಾಜಿ ಸಚಿವ ಎಚ್.ಆಂಜನೇಯ ಬಿಜೆಪಿಗೆ ಟಾಂಗ್‌ ನೀಡಿದರು.

ಜಿಲ್ಲಾ ಕಾಂಗ್ರೆಸ್‌ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ನ್ಯಾಯಯತವಾದ ರೀತಿಯಲ್ಲಿ ಚುನಾವಣೆ ನಡೆಸುವುದರ ಮೂಲಕ ಗೆಲುವು ಸಾಧಿಸುತ್ತೇವೆ. ಜಾತ್ಯತೀತ ದೇಶದಲ್ಲಿ ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ.

ಇಂತವರ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆಯ ಸಮಯದಲ್ಲಿ ಮತದಾರರಿಗೆ ನೀಡಿದ ವಾಗ್ದಾನದಂತೆ 5 ಗ್ಯಾರಂಟಿಗಳನ್ನು ಈಡೇರಿಸಿದೆ. ಇದನ್ನು ಜನತೆಗೆ ತಿಳಿಸುವುದರ ಮೂಲಕ ಮತಯಾಚನೆ ಮಾಡುವಂತೆ ಮನವಿ ಮಾಡಿದರು. ಏ.4ರಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ ಎಂದರು.

 

WhatsApp Group Join Now
Telegram Group Join Now
Share This Article