ಬೆಳಗಾವಿ ಜುಂ., 06: ಬೆಳಗಾವಿಯ ದೂರದರ್ಶನ ನಗರ ದಲ್ಲಿರುವ “ಪತಂಜಲಿ ಯೋಗ ಕೇಂದ್ರ” ದಲ್ಲಿರುವ ಯೋಗ ಸಾಧಕರೆಲ್ಲರೂ ಸೇರಿ ಗುರುಪೌಣಿ೯ಮೆ ಯ ಪ್ರಯುಕ್ತ ” ಗುರುವಂದನೆ” ಕಾರ್ಯಕ್ರಮ ಏರ್ಪಡಿಸುವ ಮೂಲಕ ಯೋಗ ಶಿಕ್ಷಕರುಗಳನ್ನು ಸನ್ಮಾನಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಪ್ರಾಮಾಣಿಕತೆಯ ಸೇವೆ ಸಲ್ಲಿಸಿ ಅಧೀಕ್ಷಕ ಅಭಿಯಂತರಾಗಿ ನಿವೃತ್ತರಾದ ಶ್ರೀ ಬಿ ಎಂ ಕಳ್ಳಿಗುಡ್ಡ ಅವರು ಕಳೆದ ಐದು ವರ್ಷಗಳಿಂದ ಯೋಗ ಶಿಕ್ಷಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಹಾಗೂ ಶ್ರೀ ಮೋಹನ ಬಾಗೇವಾಡಿ ಅವರು ಸಹ ದೂರವಾಣಿ ಇಲಾಖೆಯಿಂದ ನಿವೃತ್ತರಾಗಿ ಇದೀಗ ಬೆಳಗಾವಿ ಜಿಲ್ಲೆ ಪತಂಜಲಿಯ ಪ್ರಭಾರಿಯಾಗಿ ನಿರಂತರ ಯೋಗ ಸೇವೆಯಲ್ಲಿದ್ದಾರೆ.
ಇವರಿಬ್ಬರನ್ನೂ ಇಂದು ಅತ್ಯಂತ ಉತ್ಸಾಹದಿಂದ ಸನ್ಮಾನಿಸಲಾಯಿತು.
ಇಬ್ಬರೂ ಸನ್ಮಾನಿತರು ಯೋಗದ ಮಹತ್ವದ ಬಗ್ಗೆ ಮಾತನಾಡಿ ತಮಗೆ ನೀಡಿದ ಸನ್ಮಾನಕ್ಕೆ ಧನ್ಯವಾದ ಅಪಿ೯ಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಸಹಕಾರ ಇಲಾಖೆಯ ನಿವೃತ್ತ ರಜಿಸ್ಟ್ರಾರ ಶ್ರೀ ಎಸ್ ಎಂ ಕಲೂತಿ ಹಾಗೂ ಇನ್ಸ್ಟೂಟ ಆಫ್ ಇಂಜನಿಯರ್ಸ ಬೆಳಗಾವಿಯ ಚೇರಮನ್ ಶ್ರೀ ರಮೇಶ ಜಂಗಲ ಅವರು ಆಗಮಿಸಿದ್ದರು.
ಪ್ರಾರಂಭದಲ್ಲಿ ಸಾಧಕರುಗಳಾದ ಶ್ರೀಮತಿ ಲಲಿತಾ ರುದ್ರಗೌಡರ,ವಾಣಿ ಪಾಟೀಲ,ಶೈಲಾ ಮುನವಳ್ಳಿ,ಉಮಾ ಸಂಕೇಶ್ವರ ಹಾಗೂ ಶೋಭಾ ಶಿವಳ್ಳಿ ಇವರು ಪ್ರಾಥ೯ನೆ ಹೇಳಿದರು.ಸುಮಿತ್ರಾ ಚೌಬಾರಿ ಇವರು ಸ್ವಾಗತಿಸಿದರು.
ಶ್ರೀಮತಿ ಸುನೀತಾ ನಂದೆಣ್ಣವರ ಮತ್ತು ಶ್ರೀ ನಾರಾಯಣ ಗಾಗಿ೯ ಇವರು ಯೋಗದ ಬಗ್ಗೆ ಮಾತನಾಡಿದರು.
ಶ್ರೀಮತಿ ರಾಜೇಶ್ವರಿ ತಿಪ್ಪಶೆಟ್ಟಿ ಇವರು ವಂದನಾಪ೯ಣೆ ಮಾಡಿದರು.ಶ್ರೀಮತಿ ಕಾವೇರಿ ಕಿಲಾರಿ ಇವರಿಂದ ನಿರೂಪಣೆ ಆಯಿತು.
ಶ್ರೀಮತಿ ಶಾಂತಾ ಜಂಗಲ ಇವರಿಂದ ಸವ೯ರಿಗೂ ಉಪಾಹಾರ ಸೇವೆ ಜರುಗಿತು.