ಬೆಳಗಾವಿ:ಈಗಿನ ಆಧುನಿಕ ಕಾಲದಲ್ಲಿ “ಸಂಸ್ಕಾರ” ಎಂಬುದೇ ಮರೆಯಾಗಿದೆ.ಹಿರಿಯರು, ಗುರುಗಳು ಅನ್ನುವ ಪದಗಳಿಗೆ ಅರ್ಥವೇ ಇಲ್ಲವಾಗಿದೆ.ಎಲ್ಲಾ ಪಾಲಕರುಗಳು ತಮ್ಮ ಮಕ್ಕಳಿಗೆ ಸಂಸ್ಕಾರ ಎಂಬುದನ್ನು ಕಲಿಸಬೇಕು ಅಲ್ಲದೇ ಅದನ್ನು ಪಾಲಿಸಿಕೊಂಡು ಬರುವ ಅವಶ್ಯಕತೆಯಿದೆ ಎಂದು ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನ0ದ ಮಹಾಸ್ವಾಮಿಗಳು ಹೇಳಿದರು.
ಬೆಳಗಾವಿಯ ಇನ್ಸ್ಟೂಟ ಆಫ್ ಇಂಜನಿಯರ್ಸನಿಂದ ಪತಂಜಲಿ ಯೋಗ ಸಮಿತಿಯ ಸಹಯೋಗದೊಂದಿಗೆ ಜರುಗಿದ “ಗುರುಪೌಣಿ೯ಮೆ”ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಜಯಾನ0ದ ಸ್ವಾಮಿಗಳನ್ನು ಗೌರವಿಸಲಾಯಿತು.
ಅಲ್ಲದೇ ಬೆಳಗಾವಿಯ ಪ್ರಸಿದ್ಧ ಹೋಟೆಲ್ ಉದ್ಯಮೆದಾರರೂ ಹೆಸರಾಂತ ದಾನಿಗಳೂ ಆಗಿರುವ ಶ್ರೀ ವಿಠ್ಠಲ ಹೆಗಡೆಯವರನ್ನು ಸಹ ಸನ್ಮಾನಿಸಲಾಯಿತು.
ಗೌರವ ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಧಾನ ಶ್ರೀ ಕಿರಣ ಮನ್ನೋಳಕರ,ಬೆಳಗಾವಿ ಜಿಲ್ಲೆಯ ಪ್ರಭಾರಿ ಶ್ರೀ ಮೋಹನ ಬಾಗೇವಾಡಿ,ಹಿರಿಯ ಇಂಜನಿಯರ ಶ್ರೀ ವಿ ಬಿ ಜಾವೂರ ಆಗಮಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ಇನ್ಸ್ಟೂಟ ಆಫ್ ಇಂಜನಿಯರ್ಸನ ಚೇರಮನ್ ಶ್ರೀ ರಮೇಶ ಜಂಗಲ ವಹಿಸಿದ್ದರು.

ಶ್ರೀ ಜೋತಿಬಾ ಬಾಡವಣಕರ ಎಲ್ಲರನ್ನೂ ಸ್ವಾಗತಿಸಿದರು.ಡಾ.ಡಿ ಕೆ ವೀರಣ್ಣ ಅತಿಥಿಗಳ ಪರಿಚಯ ಮಾಡಿದರು.ಶ್ರೀ ಬಿ ಎಂ ಕಳ್ಳಿಗುಡ್ಡ ಅವರು ವಂದನಾಪ೯ಣೆ ಮಾಡಿದರು.
ಸವ೯ಶ್ರೀ ಎಸ್ ಎಂ ಕಲೂತಿ,ಚಂದ್ರಕಾಂತ ಖಂಡಗಾಳೆ,ಓ ಎಸ್ ಗೌಡರ,ಶ್ರೀಮತಿ ಸಂಗೀತಾ ಕೋನಾಪುರೆ ಹಾಗೂ ಬಾಳಾತಾಯಿ ಖಡಕಭಾವಿ ಅವರು ಉಪಸ್ಥಿತರಿದ್ದರು. ಕೊನೆಯಲ್ಲಿ ಪತಂಜಲಿಯ ಪರವಾಗಿ ಅನ್ನಸಂತರ್ಪಣೆ ಜರುಗಿತು.