This is the title of the web page
Left Banner (Left Skyscraper)
Right Banner (Right Skyscraper)

ಮಣ್ಣಿನ ಗುಣಲಕ್ಷಣೆಗೆ ತಕ್ಕಂತೆ ಆಯಾ ಬೆಳೆಗಳನ್ನು ಬೆಳೆಯಿರಿ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

0 87

ನೇಸರಗಿ. ಶಿಕ್ಷಣ ,ವೈದ್ಯಕೀಯ ಅಮೋಘ ಸೇವೆ ಸಲ್ಲಿಸಿ ಈಗ ಕೃಷಿ ಕ್ಷೇತ್ರದ ಸೇವೆಗಾಗಿ ಈ ಭಾಗದ ರೈತರ ಅಭಿವೃದ್ಧಿ ಹಾಗೂ ರೈತ ಸಂಕಷ್ಟ ಪರಿಹಾರಕ್ಕಾಗಿ ಪ್ರಭಾಕರ ಕೋರೆ ನೇತ್ರತ್ವದಲ್ಲಿ ಕೆ ಎಲ್ ಇ ಸಂಸ್ಥೆಯ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಉನ್ನತ ಮಟ್ಟದ ಕಾರ್ಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.

ಅವರು ರವಿವಾರದಂದು ಸಮೀಪದ ಮತ್ತಿಕೊಪ್ಪ ಗ್ರಾಮದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ರೈತರ ವಸತಿ ಗೃಹ ಹಾಗೂ ಸಿಬ್ಬಂದಿ ವಸತಿ ಗೃಹ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ನಾವು ವಿವಿಧ ಬೆಳೆಗಳನ್ನು ಬೆಳೆಯಬೇಕು ಅದಕ್ಕೆ ತಕ್ಕಂತೆ ಮಣ್ಣು, ಬೀಜ,ಬೆಳೆ ವಿಮರ್ಷಣೆ ಹಾಗೂ ಸಂಸ್ಕರಣೆ ಆಗಬೇಕು. ಇನ್ನೂ ನಾವು ಕೆಲವೊಂದು ವಿಷಯಗಳಲ್ಲಿ ಸ್ವಾವಲಂಬಿ ಆಗಿಲ್ಲ ನಮಗೆ ಬೇಕಾದ ಸೈನ್ಯದ ರಕ್ಷಣಾ ಸಲಕತಣೆಗಳು ಕಚ್ಚಾ ತೈಲ, ಇನ್ನೂ ಅನೇಕ ವಸ್ತುಗಳನ್ನು ವಿದೇಶದಿಂದ ತರುವ ಪರಿಸ್ಥಿತಿ ಇರುವಾಗ ಇದನ್ನು ಹೋಗಲಾಡಿಸಿ,ನಮ್ಮ ದೇಶದಲ್ಲಿ ಆ ವಸ್ತುಗಳ ಉತ್ಪಾದನೆಗೆ ಪ್ರಧಾನಿ ಮೋದಿಜೀ ಅವರು ಶ್ರಮಿಸುತ್ತಿದ್ದಾರೆ ಅವರ ಕನಸ್ಸಿನ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಮತ್ತು 2013 ರಲ್ಲಿ ಪ್ರಾರಂಭವಾದ ಈ ಕೃಷಿ ಸಂಸ್ಥೆ 70 ಎಕರೆ ಗುಡ್ಡದಲ್ಲಿ ಪ್ರಾರಂಭವಾದ ಈ ಕೃಷಿ ವಿದ್ಯಾಲಯ ಇಂದು ಅನೇಕ ಬೆಳೆ,ಗಿಡ ಮರ,ಸಿರಿದಾನ್ಯ,ಮಹಿಳೆಯರಿಗೆ ಅನೇಕ ಕಲಿಕಾ ತರಬೇತಿ, ಕೃಷಿ ತರಬೇತಿ, ಕೃಷಿ ಮಾದರಿ ನವ ನವೀಣ ಯೋಜನೆಗಳ ತಿಳುವಳಿಕೆ ಕಾರ್ಯಾಗಾರ, ಇಂದೂರ ಕೃಷಿ ವಿದ್ಯಾಲಯದ ಸಹಯೋಗದಲ್ಲಿ 400 ಎಕರೆ ಭೂಮಿಗೆ ಸೋಯಾಬೀನ ಬೀಜ ವಿತರಣೆ ಮಾಡಿ ಚೆನ್ನಾಗಿ ಬೆಳೆ ಮೊಳಕೆಯೊಡೆಯುತ್ತಿದ್ದು ಉತ್ತನ ಬೀಜಗಳನ್ನು ವಿತರಿಸಿ ಮಾದರಿಯಾಹಿದೆ, ಪ್ರಸಕ್ತ ಕೇಂದ್ರ ಸರ್ಕಾರದಿಂದ ಕೆಎಲ್ಇ ಕೃಷಿ ಸಂಸ್ಥೆಗೆ ರೈತ ವಸತಿ ನಿಲಯ,ಸಿಬ್ಬಂದಿ ವಸತಿ ನಿಲಯ ಹಾಗೂ ಬೀಜ ಸಂಸ್ಕರಣಾ ಘಟಕಕ್ಕೆ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿಗಳ ಅನುಧಾನ ನೀಡಿದ್ದು ಇದಕ್ಕೆ ಮುಂಚೆ 75ಲಕ್ಷ ರೂಪಾಯಿ ಹಾಗೂ ಸಣ್ಣ ಮೊತ್ತದ ಅನುಧಾನ ನೀಡಿದ್ದು ಮುಂದೆಯು ಈ ರೈತರ ಉಪಕಾರಿ ಸಂಸ್ಥೆ ಕೆಎಲ್ಇ ಕೃಷಿ ವಿಜ್ಞಾನ ಸಂಸ್ಥೆಗೆ ಅನೇಕ ಕೃಷಿ ಯೋಜನೆಗಳ ಅಡಿಯಲ್ಲಿ ಅನುಧಾನ ನೀಡಲಾಗುವದು.ಪ್ರಸಕ್ತ 2023 ಸಿರಿಧಾನ್ಯಗಳ ವರ್ಷವಾಗಿದ್ದು ಅನೇಕ ರಾಷ್ಟ್ರಗಳಲ್ಲಿ ನಮ್ಮ ಸಿರಿಧಾನ್ಯ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದು ಹೆಸರಿಗೆ ಮಾತ್ರ ರೈತ ದೇಶದ ಬೆನ್ನೆಲುಬು ಕಾಲದಲ್ಲಿ ಪ್ರಸಕ್ತ ವರ್ಷ ಕೃಷಿ ಬಜೆಟ್ 1032 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿ ಪ್ರಧಾನಿ ಮೋದಿಯವರು ರೈತ ಮತ್ತು ಕೃಷಿಕರ ಪರವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಪ್ರಭಾಕರ ಕೋರೆಯವರು ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿ ಈ ಭಾಗದ ರೈತರ ಹಾಗೂ ಸಾಕಷ್ಟು ವಿದ್ಯಾರ್ಥಿಗಳಿಗೆ ಕೃಷಿ ಅದ್ಯಯನ ಸಂಸ್ಥೆಯ ಮುಖಾಂತರ ರೈತಪರ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೆ ಎಲ್ ಇ ಸಂಸ್ಥೆಯ ಕಾರ್ಯಾದ್ಯಕ್ಷರಾದ ಪ್ರಭಾಕರ ಕೋರೆ ಮಾತನಾಡಿ ಈ ಸ್ಥಳದಲ್ಲಿ ಈ ಸಂಸ್ಥೆಯನ್ನು ನಿರ್ಮಿಸಲು 4 ಕೋಟಿ ಐವತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು.ಉನ್ನತ ಮಟ್ಟ ಕೃಷಿ ಶಿಕ್ಷಣ, ಸಂಶೋಧನೆ, ಪ್ರಯೋಗಾಲಯ,ಕಾರ್ಯಾಲಯ, ಬೀಜ ಮಾರಾಟ ಕೇಂದ್ರ, ಮತ್ತು ಪ್ರಸಕ್ತ ರೈತರ ವಸತಿ ನಿಲಯ,ಸಿಬ್ಬಂದಿ ವಸತಿ ನಿಲಯ ಸ್ಥಾಪನೆಯಿಂದ ರೈತರು ಯಾವಾಗ ಬೇಕಾದರೂ ಸಿಬ್ಬಂದಿಯ ಸಹಕಾರ ಪಡೆಯಬಹುದೆಂದರು.ಮಾಜಿ ಕೃಷಿ ಸಚಿವ ಶರದ ಪವಾರ ಕೊಡುಗೆ ಈ ಕೃಷಿ ಸಂಸ್ಥೆ ಪ್ರಾರಂಬಿಸಲು ಬಹಳ ಇದ್ದು ,ಜಿಲ್ಲೆಗೊಂದು ಕೃಷಿ ವಿದ್ಯಾಲಯಗಳಿದ್ದು ಇದ್ದರಿಂದ ರೈತರು ಬೆಳೆದ ಬೆಳೆದ ಬೆಳೆ ದುಪ್ಪಟ್ಟಾಗಬೇಕು ಹಾಗೂ ಮಾರಾಟವಾಗಿ ಉತ್ತಮ ಬೆಲೆ ಬರಬೇಕು ಆಗ ರೈತನ ಬಾಳು ಬೆಳಕಾಗುತ್ತದೆ .ವಿವಿಧ ಕಬ್ಬಿನ ತಳಿಗಳ ಬಿತ್ತನೆ,ಬೆಳೆ ಸಂರಕ್ಷಣಾ ಕೇಂದ್ರ ಒಳ್ಳೆಯ ಬೆಲೆ ಬರುವರೆಗೂ ಇಡಲು ಕೊಲ್ಡ್ ಸ್ಟೋರೇಜ್ ವ್ಯವಸ್ಥೆ ಮತ್ತು ಮಳೆ ಆದರಿಸಿರುವ ಈ ಭಾಗಕ್ಕೆ ನೀರಾವರ ಸೌಲಭ್ಯ ಒದಗಿಸಬೇಕೆಂದು ಸಚಿವರಿಗೆ ಪ್ರಭಾಕರ ಕೊರೆ ಮನವಿ ಮಾಡಿದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ 70 ಎಕರೆ ಕಲ್ಲಿ ಗುಡ್ಡದಲ್ಲಿ ೨೦೧೩ ರಲ್ಲಿ ಕೋರೆಯವರ ನೇತೃತ್ವದಲ್ಲಿ ಪ್ರಾರಂಭವಾದ ಈ ಕೃಷಿ ವಿಜ್ಞಾನ ಸಂಸ್ಥೆ ಇಂದು ಈ ಭಾಗದ ರೈತರಿಗೆ ಮಾರ್ಗದರ್ಶನ ನೀಡಿ, ಮಹಿಳೆಯರಿಗೆ ತರಬೇತಿ ನೀಡಿ ಅನೇಕ ತಳಿಯ ಬೆಳೆ, ಗಿಡ ಮರ,ಹಸು,ಎತ್ತು ಎಮ್ಮೆ,ಸಾಕುವ ಕೇಂದ್ರವಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದು ಈ ಭಾಗದ ಜನರ ಬೇಡಿಕೆಯಾದ ಚನ್ನವೃಷಬೇಂದ್ರ ಯಾತ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ ವತಿಯಿಂದ ರಾಜ್ಯದ ಸಹಯೋಗದೊಂದಿಗೆ ನೀರಾವರಿ ಯೋಜನೆ ಪ್ರಾರಂಭ ಮಾಡಲು ಸಚಿವರಲ್ಲಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞಾನ ಅಳವಡಿಕಾ ಸಂಶೋಧನಾ ಕೇಂದ್ರದ ನಿರ್ದೆಶಕ ಡಾ.ವ್ಹಿ ವೆಂಕಟಸುಬ್ರಮನಿಯನ್,ಸಂಸ್ಥೆಯ ಕಾರ್ಯಾದ್ಯಕ್ಷರಾದ ಬಿ ಆರ್ ಪಾಟೀಲ ಮಾತನಾಡಿದರು, ಸಂಸ್ಥೆಯ ಮುಖ್ಯಸ್ಥ ರಾದ ಶ್ರೀಮತಿ ಶ್ರೀದೇವಿ ಅಂಗಡಿ, ಡಾ ಬಿ ಬಿ ದೇಸಾಯಿ, ಬಾಜಪಾ ಜಿಲ್ಲಾ ಉಪಾಧ್ಯಕ್ಷ ಬಿ ಎಪ್ ಕೊಳದೂರ,ದೇಶನೂರ ಪಂಚಾಯತ ಅದ್ಯಕ್ಷೆ ಶಂಕ್ರಮ್ಮ ಚಡಚ್ಯಾಳ,ಅಡಿವಪ್ಪ ಮಾಳಣ್ಣವರ,ಎಸ್ ಎಮ್ ಪಾಟೀಲ,ನಿಂಗನಗೌಡ ದೊಡ್ಡಗೌಡರ, ಮಹಾಂತೇಶ ಕೂಲಿನವರ,ಅಡಿವಪ್ಪ ಹೊಸಮನಿ,ಬಸವರಾಜ ತುಬಾಕಿ,ಶಿವು ಚೋಭಾರಿ, ಶ್ರೀಶೈಲ ಕಮತಗಿ,ಮಹಾಂತೇಶ ಹಿರೇಮಠಈ ಭಾಗದ ರಾಜಕೀಯ ಮುಖಂಡರು ,ವಿದ್ಯಾರ್ಥಿಗಳು ಸಿಬ್ಬಂದಿ, ರೈತ ಸಂದ ಸದಸ್ಯರು,ರೈತರು ಪಾಲ್ಗೊಂಡಿದ್ದರು.

You might also like
Leave a comment